ಯುವನಿಧಿ ಕಾರ್ಯಕ್ರಮ! ವಾಹನ ಸಂಚಾರದ ಮಾರ್ಗ ಬದಲಾವಣೆ! ಓಡಾಡುವ ದಾರಿಯ ವಿವರ ಇಲ್ಲಿದೆ!

SHIVAMOGGA  |  Jan 10, 2024  |   ಶಿವಮೊಗ್ಗದ ಫ್ರೀಡಂಪಾರ್ಕ್​ನಲ್ಲಿ ನಡೆಯಲಿರುವ ಯುವನಿಧಿ ಯೋಜನೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ರವರು ಆಗಮಿಸಲಿದ್ದಾರೆ.ಈ ಹಿನ್ನೆಲೆಯಲ್ಲಿ  ಸಾರ್ವಜನಿಕರ ಸುಗಮ ಸಂಚಾರದ ದೃಷ್ಟಿಯಿಂದ ಪರ್ಯಾಯ ಮಾರ್ಗಗಳಿಗೆ ತಾತ್ಕಾಲಿಕ ಅಧಿಸೂಚನೆಯನ್ನು ಹೊರಡಿಸಲಾಗಿದೆ. 

ಸಾರ್ವಜನಿಕ ವಾಹನಗಳ ಮಾರ್ಗ ಬದಲಾವಣೆ 

( ದಿನಾಂಕ: 12-01-2024 ರಂದು ಬೆಳಿಗ್ಗೆ 6 ಗಂಟೆಯಿಂದ ಸಂಜೆ 06-30 ಗಂಟೆಯವರೆಗೆ )

1) ಸಾಗರ ಕಡೆಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ಆಯ್ಯೋಳ ಸರ್ಕಲ್- ಗೋಪಾಳ ಸರ್ಕಲ್-ನ್ಯೂಮಂಡ್ಲಿ ಸರ್ಕಲ್ ಮಾರ್ಗವಾಗಿ ತೀರ್ಥಹಳ್ಳಿಗೆ ರಸ್ತೆಗೆ ಸೇರುವುದು.

2 ) ತೀರ್ಥಹಳ್ಳಿ ರಸ್ತೆ ಕಡೆಯಿಂದ ಸಾಗರ ರಸ್ತೆ ಕಡೆಗೆ ಹೋಗುವ ಸಾರ್ವಜನಿಕ ವಾಹನಗಳು ನ್ಯೂಮಂಡ್ಲಿ ಸರ್ಕಲ್ ಗೋಪಾಳ ಸರ್ಕಲ್ – ಆಯ್ಯೋಳ ಸರ್ಕಲ್ ಮಾರ್ಗವಾಗಿ ಸಾಗರ ರಸ್ತೆಗೆ ಬಂದು ಸೇರುವುದು.

3) ಶಿವಮೊಗ್ಗ ದಿಂದ ಶಿಕಾರಿಪುರ, ನ್ಯಾಮತಿ ಸೊರಬಾ ಕಡೆ ಹೋಗುವ ಎಲ್ಲಾ ವಾಹನಗಳು ಆಯನೂರು -ಹಾರಳ್ಳಿ-ಸವಳಂಗ ಮಾರ್ಗವಾಗಿ ಚಲಿಸುವುದು.

4) ಶಿಕಾರಿಪುರ ನ್ಯಾಮತಿ ಸೊರಬಾ ಕರೆಯಿಂದ ಶಿವಮೊಗ್ಗ ಕ್ಕೆ ಬರುವ ಎಲ್ಲಾ ವಾಹನಗಳು : – ಸವಳಂಗ ಹಾರಳ್ಳಿ ಆಯನೂರು ಮಾರ್ಗವಾಗಿ ಶಿವಮೊಗ್ಗ ಕ್ಕೆ ಬರುವುದು.

5) ಶಿವಮೊಗ್ಗ ನಗರದಿಂದ ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡ ಗಳಿಗೆ ಹೋಗುವ ಎಲ್ಲಾ ವಾಹನಗಳು :- ರಾಗಿಗುಡ್ಡ ಕುವೆಂಪು ನಗರದ ಮುಖಾಂತರ ಚಲಿಸುವುದು.

6) ಅಬ್ಬಲಗೆರೆ ಕೊಮ್ಮನಾಳ್ ಕುಂಚೇನಹಳ್ಳಿ ತಾಂಡ ಗಳಿಂದ ಶಿವಮೊಗ್ಗ ನಗರಕ್ಕೆ ಬರುವ ಎಲ್ಲಾ ವಾಹನಗಳು  ಕುವೆಂಪು ನಗರ- ರಾಗಿಗುಡ್ಡ – ಸಂಗೋಳ್ಳಿ ರಾಯಣ್ಣ ಸರ್ಕಲ್ ಮುಖಾಂತರ ಚಲಿಸುವುದು ಎಂದು ಸೂಚಿಸಲಾಗಿದೆ. 

ಇನ್ನೂ ಅಕ್ಕಪಕ್ಕದ ಜಿಲ್ಲೆಯವರು  : ಸಿಎಂ ಕಾರ್ಯಕ್ರಮಕ್ಕೆ ಆಗಮಿಸುವವರಿಗಾಗಿ ಪಾರ್ಕಿಂಗ್ ವಿವರ & Google ರೂಟ್ ಮ್ಯಾಪ್ ಇಲ್ಲಿದೆ!

Leave a Comment