covid cases in shivamogga / ಶಿವಮೊಗ್ಗದಲ್ಲಿ ಎಷ್ಟಾಗಿದೆ ಕೋವಿಡ್ 19 ಕೇಸ್​ ? ಪೂರ್ತಿ ವಿವರ ಇಲ್ಲಿದೆ

 

SHIVAMOGGA  |  Jan 3, 2024  | covid cases in shivamogga  ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಕೋವಿಡ್ 19 ಪಾಸಿಟಿವ್ ಪ್ರಕರಣಗಳ Jan 2, 2024 ದಿನಾಂಕದ ವರದಿ ಪ್ರಕಟವಾಗಿದೆ. ಜಿಲ್ಲಾ ಆರೋಗ್ಯ ಇಲಾಖೆಯು ಬಿಡುಗಡೆ ಮಾಡಿರುವ ಪಿಡಿಎಫ್​ನ ವರದಿ ಪ್ರಕಾರ, ಶಿವಮೊಗ್ಗ ಜಿಲ್ಲೆಯಲ್ಲಿ ಇದುವೆರೆಗೂ 31 ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದು ದಿನದಲ್ಲಿ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. 

covid cases in shivamogga

ಒಟ್ಟಾರೆ 243 ಸ್ಯಾಂಪಲ್​ಗಳನ್ನ ಸಂಗ್ರಹಿಸಲಾಗಿದ್ದು, ಈ ಪೈಕಿ ಆರು ಮಂದಿಯಲ್ಲಿ ಕೋವಿಡ್ 19 ಪಾಸಿಟಿವ್ ಕೇಸ್​ ಪತ್ತೆಯಾಗಿದೆ. ಇನ್ನೂ ಶಿವಮೊಗ್ಗದ ಮೂವರು ಹಾಗೂ ಭದ್ರಾವತಿಯ ಒಬ್ಬರು ಮತ್ತು ತೀರ್ಥಹಳ್ಳಿ & ಶಿಕಾರಿಪುರದ ಒಬ್ಬರಲ್ಲಿ ಕೊರೊನಾ ಸೋಂಕು ಕಾಣಿಸಿದೆ. 

READ : Arecanut Rate? ಯಾವ್ಯಾವ ಊರಿನ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟು ! ವಿವರ ಇಲ್ಲಿದೆ

ಇದುವರೆಗೂ 31 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿದ್ದು, ಈ ಪೈಕಿ 27 ಮಂದಿ ಹೋಮ್​ ಐಸೋಲೇಷನ್​ನಲ್ಲಿದ್ದಾರೆ. ನಾಲ್ಕು ಮಂದಿಯನ್ನು ಕೋವಿಡ್​ 19 ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 

Leave a Comment