ಹೈದರಾಬಾದ್​ ನಿಂದ ಚಿತ್ರದುರ್ಗಕ್ಕೆ ತರುತ್ತಿದ್ದ ಅಡಿಕೆ ದುಡ್ಡು ಸಿನಿಮಾ ಸ್ಟೈಲ್​ನಲ್ಲಿ ಲೂಟಿ ಕೇಸ್​ ! ಹಲವರ ಅರೆಸ್ಟ್! 63 ಲಕ್ಷ ರಿಕವರಿ

ಹಂಚಿಕೊಳ್ಳಿ
WhatsApp Facebook X Telegram

SHIVAMOGGA  |  Jan 2, 2024  |  ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಅಂತರ್ ಜಿಲ್ಲಾ ದರೋಡೆಕೋರರನ್ನು

ಬಂಧಿಸಿದ್ದಾರೆ. ಅಲ್ಲದೆ ಬರೋಬ್ಬರಿ, 63.25 ಲಕ್ಷನಗದು ಹಾಗೂ ಹೊಸ ಕಾರುಮತ್ತು ಬೈಕ್ ವಶಪಡಿಸಿಕೊಂಡಿದ್ದಾರೆ. 

ದಾವಣಗೆರೆ ಜಯನಗರದ ಶಶಿಕಿರಣ್, ಬೆಂಗಳೂರು ಕೆಂಪೇಗೌಡ ಲೇಔಟ್‌ನ ನವೀನ, ದಾವಣಗೆರೆ ಮಾಯಕೊಂಡ ಹೋಬಳಿಯ  ಆರ್. ಮಂಜುನಾಥ ಮಾಯಕೊಂಡ ಹೋಬಳಿ ಪ್ರತಾಪ ಗೌಡ, ಚನ್ನಗಿರಿ ತಾಲೂಕಿನಎ. ಕಿರಣ್, ಚಿತ್ರದುರ್ಗ ತಾಲೂಕಿನ ಮಹಮದ್ ಷಫೀಉಲ್ಲಾ ಹಾಗೂ ಎಸ್. ಸಮೀರ್ ಭಾಷಾ, ಚನ್ನಗಿರಿ ತಾಲೂಕಿನ ಬಿ.ಕೆ. ಲಿಂಗರಾಜ, ಬೆಂಗಳೂರಿನ ಲಗ್ಗೆರೆಯ ಹುಸೇನ್ ಭಾಷ, ಬೆಂಗಳೂರಿನ ಪೀಣ್ಯದ ಬಿ. ಶ್ರೀನಿವಾಸ ಬಂಧಿತರು. 

ಚಿತ್ರದುರ್ಗ ಅಡಿಕೆ ವ್ಯಾಪಾರಿ

READ :ಶಿವಮೊಗ್ಗ ನಾಗರಿಕರ ಗಮನಕ್ಕೆ | ಕೋರ್ಬಿವ್ಯಾಕ್ಸ್ ಲಸಿಕೆ Corbivax vaccine  ಬಗ್ಗೆ ಆರೋಗ್ಯ ಇಲಾಖೆಯ ಪ್ರಕಟಣೆ

ಮಹಮದ್ ಷಫೀಉಲ್ಲಾ ಮತ್ತು ಸಮೀರ್ ಭಾಷಾ ಸ್ಥಳೀಯರಾಗಿದ್ದು ಇವರಿಗೆ ಅಡಿಕೆ ವ್ಯಾಪಾರಿಯೊಬ್ಬರು ಪರಿಚಯವಿದ್ದರು. ಅವರು  ಹೈದರಾಬಾದ್ ನಿಂದ ಅಡಿಕೆ ಮಾರಿ ಹಣ ತರುವ ಬಗ್ಗೆಯು  ಮಾಹಿತಿ ಇತ್ತು. ಈ ವಿಚಾರವನ್ನು ಸ್ನೇಹಿತರಿಗೆ ತಿಳಿಸಿ, ಹಣವನ್ನು ದರೋಡೆ ಮಾಡುವ ಪ್ಲಾನ್ ಮಾಡಿದ್ದರು. 

ಅಂದುಕೊಂಡಂತೆ ಅಡಿಕೆ ವ್ಯಾಪಾರಿ ಹೈದರಾಬಾದ್​ ನಿಂದ ವಾಪಸ್​ ಆಗುವ ಸಂದರ್ಭದಲ್ಲಿ  ಅವರು ಹಾಗೂ ಅವರ ಸ್ನೇಹಿತನ ಮೇಲೆ ಹಲ್ಲೆ ಮಾಡಿದ  1.5 ಕೋಟಿ ರೂ.ಗಳನ್ನು ದರೋಡೆ ಮಾಡಿದ್ದರು.   ಡಿ. 4ರಂದು ಬೆಳಗಿನ ಜಾವ ಚಿತ್ರದುರ್ಗದ ಸಮೀಪ ಈ ಘಟನೆ ನಡೆದಿತ್ತು.

ವಿಶೇಷ ಅಂದರೆ, ರಸ್ತೆಗೆ ಕಾರು ಅಡ್ಡನಿಲ್ಲಿಸಿ, ಅಡಿಕೆ ವ್ಯಾಪಾರಿ ಕಾರು ನಿಲ್ಲುವಂತೆ ಮಾಡಿದ್ರು. ಬಳಿಕ ಅಲ್ಲಿಗೆ ಸಿನಿಮಾ ಸ್ಟೈಲ್​ನಲ್ಲಿ ಬೈಕ್​ಗಳಲ್ಲಿ ಬಂದು ಚಾಕು ತೋರಿಸಿ ಹಣ ಲಪಟಾಯಿಸಿ ಎಸ್ಕೇಪ್ ಆಗಿದ್ದರು. ಸದ್ಯ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor