ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಕಾಣಿಸಿಕೊಂಡ ಕರಡಿ! ಏಲ್ಲಿ ಗೊತ್ತಾ?

SHIVAMOGGA |  Dec 21, 2023  |   ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ ಕರಡಿಯೊಂದು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಇಲ್ಲಿನ ನಾಗಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿದೆ. ಈ ಬಗ್ಗೆ ಅಧಿಕಾರಿಗಳು ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. 

ನಾಗಸಮುದ್ರ ಗ್ರಾಮದಲ್ಲಿ ಕರಡಿ ಕಾಣಿಸಿಕೊಂಡಿರುವುದು ಸ್ಥಳೀಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಗ್ರಾಮಸ್ಥರ ಪ್ರಕಾರ, ತುಂಗಾಭದ್ರಾ ನದಿ ಕಡೆಯಿಂದ ಗ್ರಾಮಕ್ಕೆ ಕರಡಿ ಬಂದಿರುವ ಸಾಧ್ಯತೆ ಇದೆ.  

ಸಮುದಾಯ ಭವನದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾದಲ್ಲಿ ಕರಡಿ ಓಡಾಡುತ್ತಿರುವ ದೃಶ್ಯ ಸೆರೆಯಾಗಿದೆ, ಈ ದೃಶ್ಯದಲ್ಲಿ ಕರಡಿ ಓಡಾಡುತ್ತಿರುವ ಅಲ್ಲಿಗೆ ಓರ್ವ ಮಹಿಳೆ ಬರುತ್ತಾಳೆ, ಈ ವೇಳೆ ಕರಡಿಯನ್ನ ಕಂಡು ದಿಗಿಲುಗೊಂಡು ಅಲ್ಲಿಂದ ಓಡುತ್ತಾರೆ. ಇನ್ನೂ  ಬೆಳಗಿನ ಜಾವ ಆಗಿದ್ದರಿಂದ ಅಲ್ಲಿ ಹೆಚ್ಚು ಜನಸಂಚಾರ ಇರಲಿಲ್ಲ ..  

READ : ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯುವತಿ!

ಇನ್ನೂ ಸ್ಥಳೀಯರು ಹೇಳುವಂಂತೆ  ನಾಗಸಮುದ್ರ ಹಾಗೂ ಗುಡ್ಡದ್ದಹಳ್ಳಿಯ ಗ್ರಾಮದ ನಡುವೆ ಕರಡಿ ಓಡಾಡುತ್ತಿದೆಯಂತೆ. ಈ ಬಗ್ಗೆ ಅರಣ್ಯ ಇಲಾಖೆಗೂ ಮಾಹಿತಿ ನೀಡಲಾಗಿದೆ ಎನ್ನುತ್ತಿದ್ದಾರೆ. 

ಈ ನಡುವೆ ಚನ್ನಗಿರಿ ತಾಲೂಕು ಮಾವಿನಕಟ್ಟೆ ಅರಣ್ಯ ವಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಢಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಜನರಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದಾರೆ.  

 

Leave a Comment