SHIVAMOGGA| Dec 19, 2023 | ಅತ್ತ ಭದ್ರಾವತಿ ಪೊಲೀಸರು ಕಾರ್ಯಾಚರಣೆ ನಡೆಸಿ 14 ಬೈಕ್ಗಳನ್ನ ಜಪ್ತು ಮಾಡಿ ಇಬ್ಬರು ಬೈಕ್ ಕಳ್ಳರನ್ನು ಹಿಡಿದಿದ್ದಾರೆ. ಇತ್ತ ಹೊಳೆಹೊನ್ನೂರು ಪೊಲೀಸರು ಸ್ಕೂಟಿ ಕಳ್ಳತನ ಪ್ರಕರಣದಲ್ಲಿ ರಾಗಿಗುಡ್ಡ ನಿವಾಸಿ ಪ್ರಭು ಅಲಿಯಾಸ್ ಕೋಳಿಯನ್ನ ಬಂಧಿಸಿದ್ದಾರೆ.
ಹೊಳೆಹೊನ್ನೂರು ಪೊಲೀಸ್ ಠಾಣೆ
ದಿನಾಂಕ:- 16-12-2023 ಬೆಳಿಗ್ಗೆ ಮತ್ತಿಘಟ್ಟ ಗ್ರಾಮ ನಿವಾಸಿಯೊಬ್ಬರು ತಮ್ಮ ಹೀರೋ ಪ್ಲಸರ್ ಸ್ಕೂಟಿಯನ್ನು ತಮ್ಮ ತೋಟಕ್ಕೆ ತೆಗೆದುಕೊಂಡು ಹೋಗಿದ್ದರು. ಆದರೆ ತೋಟದ ಮುಂದಿನ ರಸ್ತೆಯಲ್ಲಿ ನಿಲ್ಲಿಸಿದ್ದ ಸ್ಕೂಟಿಯು, ತೋಟಕ್ಕೆ ನೀರು ಹಾಯಿಸಿದ ನಂತರ ವಾಪಾಸ್ ಬಂದು ನೋಡಿದಾಗ ಇರಲಿಲ್ಲ. ಯಾರೋ ಕಳ್ಳರು ಸ್ಕೂಟಿಯನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು. ಈ ಸಂಬಂಧ ದಿನಾಂಕಃ 17-12-2023 ರಂದು ಹೊಳೆಹೊನ್ನೂರು ಪೊಲೀಸ್ ಠಾಣೆ ಗುನ್ನೆ ಸಂಖ್ಯೆ: 376/2023 ಕಲಂ 379 ಐ.ಪಿ.ಸಿ ಅಡಿಯಲ್ಲಿ ಕೇಸ್ ಆಗಿತ್ತು.
READ : ಐದು ಸ್ಟೇಷನ್ಗೆ ಬೇಕಿದ್ದ ಬೈಕ್ ಕಳ್ಳರು ಭದ್ರಾವತಿ ಪೊಲೀಸರ ಬಲೆಗೆ ! ಸಿಕ್ಕಿದ್ದೇಗೆ ಗೊತ್ತಾ?
ಸದ್ಯ, ಹೊಳೆಹೊನ್ನೂರು ಪೊಲೀಸ್ ಠಾಣೆಯ ಪೊಲೀಸ್ ನಿರಿಕ್ಷಕರಾದ ಆರ್. ಎಲ್ ಲಕ್ಷ್ಮೀಪತಿ ರವರ ನೇತೃತ್ವದಲ್ಲಿ ಎ.ಎಸ್.ಐ ಕೃಷ್ಣನಾಯ್ಕ ಹಾಗೂ ಸಿಬ್ಬಂದಿಗಳಾದ ಹೆಚ್ ಸಿ ಲಿಂಗೇಗೌಡ, ಮಂಜುನಾಥ, ಸಿಪಿಸಿ ವಿಶ್ವನಾಥ, ಚಂದ್ರಶೇಖರ್ ಮತ್ತು ಪ್ರಮೋದ ರವರನ್ನೊಳಗೊಂಡ ತನಿಖಾ ತಂಡ ಆರೋಪಿಯನ್ನ ಪತ್ತೆ ಮಾಡಿದೆ.
ದಿನಾಂಕಃ 17-12-2023 ರಂದು ಪ್ರಕರಣದ ಆರೋಪಿ ಪ್ರಭು @ ಕೊಳಿ, 27 ವರ್ಷ, ಮೊರರ್ಜಿಶಾಲೆ ಹತ್ತಿರ ರಾಗಿಗುಡ್ಡ ಶಿವಮೊಗ್ಗ ಟೌನ್ ಈತನನ್ನು ದಸ್ತಗಿರಿ ಮಾಡಲಾಗಿದೆ.
ಅಲ್ಲದೆ , ಆರೋಪಿತನಿಂದ ಹೊಳೆಹೊನ್ನೂರು ಠಾಣೆಯ 01 ಮತ್ತು ಕೋಟೆ ಠಾಣೆಯ 01 ಪ್ರಕರಣ ಸೇರಿ 02 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳಿಗೆ ಸಂಬಂದಿಸಿದ ಅಂದಾಜು ಮೌಲ್ಯ 60,000/- ರೂಗಳ 02 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ ಎಂದು ಪೊಲೀ್ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.