ಶಿವಮೊಗ್ಗ ಜಿಲ್ಲೆಯಿಂದ ಮತ್ತೊಂದು ಪಲ್ಲಕ್ಕಿ ಬಸ್ ಸೇವೆ ಆರಂಭ! ಸಾಗರ-ಶಿವಮೊಗ್ಗ-ವಿಜಯಪುರ!

SHIVAMOGGA NEWS / ONLINE / Malenadu today/ Nov 21, 2023 NEWS KANNADA

Shivamogga  |  Malnenadutoday.com | ಶಿವಮೊಗ್ಗದಲ್ಲಿ ಇತ್ತೀಚೆಗಷ್ಟೆ ಸಾಗರ-ಸೊರಬ ಶಿಕಾರಿಪುರದಿಂದ ನೂತನ ಪಲ್ಲಕ್ಕಿ ಬಸ್ ಸೇವೆ ಆರಂಭಗೊಂಡಿತ್ತು. ಅದರ ವಿವರ ಇಲ್ಲಿದೆ  ಶಿವಮೊಗ್ಗದ 5 ತಾಲ್ಲೂಕುಗಳ ಮೂಲಕ ಬೆಂಗಳೂರಿಗೆ ಹೋಗುತ್ತೆ ಈ ಬಸ್​! ಟೈಮಿಂಗ್ಸ್​ ವಿವರ ಇಲ್ಲಿದೆ

ಇದರ ಬೆನ್ನಲ್ಲೆ ಇದೀಗ  ಕರಾರಸಾ ನಿಗಮದಿಂದ  ಮತ್ತೊಂದು ನಾನ್ ಎಸಿ ಸ್ಲೀಪರ್ (ಪಲ್ಲಕ್ಕಿ) ವಾಹನ ಕಾರ್ಯಾಚರಣೆ ಆರಂಭಿಸಿದೆ. 

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಶಿವಮೊಗ್ಗ ವಿಭಾಗದ ಸಾಗರ ಘಟಕದಿಂದ  ಸಾಗರ-ಶಿವಮೊಗ್ಗ-ವಿಜಯಪುರ ಮಾರ್ಗದಲ್ಲಿ (ವಯಾ ಹರಿಹರ, ಹೊಸಪೇಟೆ, ಇಳಕಲ್) ನ.19 ರಂದು ನೂತನವಾಗಿ 2 ನಾನ್ ಎಸಿ ಸ್ಲೀಪರ್ (ಪಲ್ಲಕ್ಕಿ) ವಾಹನಗಳನ್ನು ಕಾರ್ಯಾಚರಣೆಗೊಳಿಸಲಾಗಿದೆ.

ಸಂಚಾರದ ಸಮಯ

ಸಾಗರದಿಂದ ರಾ.7.30ಗೆ ಹೊರಟು ವಿಜಯಪುರ ಬೆಳಗ್ಗೆ 5.30ಕ್ಕೆ ತಲುಪಲಿದೆ ಹಾಗೂ ವಿಜಯಪುರದಿಂದ ರಾ. 7.30ಗೆ ಹೊರಟು ಸಾಗರ ಬೆಳಗ್ಗೆ 5.30ಕ್ಕೆ ತಲುಪಲಿದೆ ಎಂದು ಕರಾರಸಾನಿ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 


Leave a Comment