KARNATAKA NEWS / ONLINE / Malenadu today/ Nov 16, 2023 SHIVAMOGGA NEWS
Shivamogga | Malnenadutoday.com | ಇದೇ ನವೆಂಬರ್ 16 ರಂದು ನಿರ್ಣಯಿಸಿದ್ದ ಪ್ರತಿಭಟನೆಯನ್ನು ಬಿಸಿಯೂಟ ಕಾರ್ಯಕರ್ತೆಯರು ಹಿಂಪಡೆದಿದ್ದಾರೆ ಈ ಸಂಬಂಧ ಇಂದು ಶಿವಮೊಗ್ಗದಲ್ಲಿ ಬಿಸಿಯೂಟ ಕಾರ್ಯಕರ್ತೆಯರಸಂಘದ ಅಧ್ಯಕ್ಷೆ ಹನುಮಕ್ಕ ಮಾಹಿತಿ ನೀಡಿದ್ದಾರೆ. ಈ ವೇಳೆ ಸರ್ಕಾರ ಬಿಸಿಯೂಟ ಕಾರ್ಯಕರ್ತರಿಗೆ ನೀಡಿದ ಭರವಸೆಯನ್ನು ಸಕಾಲದಲ್ಲಿ ಈಡೇರಿಸದಿರುವ ಕ್ರಮವನ್ನು ಬಿಸಿಯೂಟ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ಹನುಮಕ್ಕ ಖಂಡಿಸಿದ್ದಾರೆ.
ಬಿಸಿಯೂಟ ನೌಕರರು ತಮ್ಮ ಬೇಡಿಕೆ ಈಡೇರಿಕೆಗಾಗಿ ಬೆಂಗಳೂರಿನ ಪ್ರೀಡಂ ಪಾರ್ಕ್ ನಲ್ಲಿ ಅಕ್ಟೋಬರ್ 30 ರಂದು ಅನಿರ್ಧಿಷ್ಠಾವದಿ ಮುಷ್ಕರ ಹಮ್ಮಿಕೊಳ್ಳಲಾಗಿತ್ತು. ಹೋರಾಟದ ಎರಡನೇ ದಿನ ಯೋಜನೆಯ ನಿರ್ದೇಶಕರು ಪ್ರತಿಭಟನಾ ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದ್ದು ಬಿಟ್ಟರೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿರಲಿಲ್ಲ.
ಈ ನಿಟ್ಟಿನಲ್ಲಿ ನವಂಬರ್ 16 ರಂದು ರಾಜ್ಯಾದ್ಯಂತ ಅಡುಗೆ ಬಂದ್ ಮಾಡಿ ಅನಿರ್ಧಿಷ್ಟಾವಧಿ ಹೋರಾಟ ಮಾಡಲು ಸಂಘ ಮುಷ್ಕರ ನೋಟೀಸ್ ನ್ನು ಸರ್ಕಾರಕ್ಕೆ ನೀಡಿತ್ತು. ನಂತರ ನಡೆದ ಮಾತುಕತೆಯಲ್ಲಿ ಆಯುಕ್ತರು ಸಂಘಟನೆ ಪಧಾಧಿಕಾರಿಗಳ ಜೊತೆ ಜಂಟಿ ಸಭೆ ನಡೆಸಿದ್ರು. ಇದಾದ ನಂತರ 10-11-23 ರಂದು ಶಿಕ್ಷಣ ಸಚಿವ ಅಧ್ಯಕ್ಷತೆಯಲ್ಲಿ ಸಂಘಟನೆಯ ಪದಾಧಿಕಾರಿಗಳು ನಡೆಸಿದ ಮಾತುಕತೆಯಲ್ಲಿ ಮೂರು ಬೇಡಿಕೆಗಳನ್ನು ಈಡೇರಿಸಿದ್ದಾರೆ.
ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆದುಹಾಕುವ ಬಗ್ಗೆ ಚರ್ಚಿಸಲಾಗಿ, ಈ ಸಿಬ್ಬಂದಿಯನ್ನು ಪಕ್ಕದ ಶಾಲೆಗೆ ತಾತ್ಕಾಲಿಕವಾಗಿ ನಿಯೋಜಿಸಲು ಆದೇಶಿಸಿದ್ದಾರೆ.
ಅಡುಗೆ ಸಿಬ್ಬಂದಿಯ ಕೆಲಸದ ಅವಧಿ 4 ಗಂಟೆಯಿಂದ 6 ಗಂಟೆಗಳೆಂದು ಪರಿಗಣಿಸುವ ಬಗ್ಗೆ ಚರ್ಚಿಸಲಾಗಿ ಈ ಕುರಿತು ಕೇಂದ್ರಕ್ಕೆ ಪತ್ರ ಬರೆಯಲು ತೀರ್ಮಾನಿಸಿದೆ.
READ : ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಹಿಳೆಯರಿಗೆ ಅಂತ್ಯಾಕ್ಷರಿ ಸ್ಪರ್ಧೆ…ಪ್ರವೇಶ ಉಚಿತ ! ವಿವರ ಇಲ್ಲಿದೆ!
ಅಪಘಾತದಲ್ಲಿ ಮರಣ ಹೊಂದಿದ ಮತ್ತು ನಿವೃತ್ತಿ ಹೊಂದಿದ ಅಡುಗೆ ಸಿಬ್ಬಂದಿಯ ಕುಟುಂಬದವರು ಅರ್ಜಿ ಸಲ್ಲಿಸಿದ್ದಲ್ಲಿ ಅಂತವರಿಗೆ ಕೆಲಸ ನೀಡಲು ತೀರ್ಮಾನಿಸಲಾಗಿದೆ.
ಶಾಲೆಗಳಲ್ಲಿ ಬೆಂಕಿ ಅವಘಡಗಳಿಂದ ಯಾವುದೇ ಅಪಘಾತವಾದರೆ ಅದಕ್ಕೆ ಕಡ್ಡಾಯವಾಗಿ ಎಪ್ಐಆರ್ ದಾಖಲಿಸಿ ಪರಿಹಾರ ನೀಡಲು ಆದೇಶಿಸಿದೆ.
ಉಳಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಸರ್ಕಾರದ ತಾತ್ವಿಕವಾಗಿ ಒಪ್ಪಿದೆ. ಆದರೆ ಹಣಕಾಸಿಗೆ ಸಂಬಂಧಿಸಿದ್ದರಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದೇಶ ಮಾಡಬೇಕಾಗಿರುವ ಹಿನ್ನಲೆ.ಯಲ್ಲಿ ದಿನಾಂಕ 15-11-23 ರಂದು ಶಿಕ್ಷಣ ಸಚಿವರು ಸಂಘಟನೆಯ ಹೋರಾಟವನ್ನು ಹಿಂಪಡೆಯಬೇಕೆಂದು ಮನವಿ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ನವಂಬರ್ 16 ರಂದು ನಡೆಯಬೇಕಿದ್ದ ಹೋರಾಟವನ್ನು ಹಿಂಪಡೆಯುತ್ತಿರುವುದಾಗಿ ಹನುಮಕ್ಕ ಹೇಳಿದ್ದಾರೆ.ಶಿಕ್ಷಣ ಸಚಿವರು ಒಪ್ಪಿಕೊಂಡಿರುವ ರೀತಿಯಲ್ಲಿ ಬೇಡಿಕೆಗಳು ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಹನುಮಕ್ಕ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದ್ದಾರೆ.