ಬೇಳೂರು ಗೋಪಾಲಕೃಷ್ಣ V/s ಮಧು ಬಂಗಾರಪ್ಪ | ವಿರೋಧಕ್ಕೆ ಏನಂದ್ರು ಗೊತ್ತಾ ಉಸ್ತುವಾರಿ ಸಚಿವರು

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Nov 3, 2023 SHIVAMOGGA NEWS

SHIVAMOGGA |  ಶಿವಮೊಗ್ಗದಲ್ಲಿಂದು ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ತಮ್ಮ ವಿರುದ್ಧ ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ರವರ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿದ್ದಾರೆ. 

ಸಾಗರ ಶಾಸಕರ ಅಸಮಾಧಾನದ ಬಗ್ಗೆ  ದೆಹಲಿ ನಾಯಕರು ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಅಸಮಾಧಾನ ಎನ್ನುವುದು ಅದು ಅವರ ಭಾವನೆಯಷ್ಟೆ. ಆ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ. ಇದೇ ವೇಳೇ ಎಲ್ಲಾ ಕಡೆಗಳಿಗೆ  .

ಶಾಸಕ ಭೀಮಣ್ಣನಾಯ್ಕ ಅವರನ್ನು ಕರೆದುಕೊಂಡು ಓಡಾಡುತ್ತಾರೆ ಎಂಬ ಆರೋಪಕ್ಕೆ ಉತ್ತರಿಸಿದ ಅವರು,  

ಇಲ್ಲದಿರುವ ವ್ಯಕ್ತಿಗಳ ಹೆಸರು ಹೇಳುವುದು ಅವರ ಯೋಗ್ಯತೆ ತೋರಿಸುತ್ತದೆ ಎಂದು ವ್ಯಂಗ್ಯವಾಡಿದ್ರು. 

READ : ಮಧು ಬಂಗಾರಪ್ಪ V/s ಬೇಳೂರು ಗೋಪಾಲಕೃಷ್ಣ! ಏನು ನಡೆಯುತ್ತಿದೆ ಶಿವಮೊಗ್ಗ ಕಾಂಗ್ರೆಸ್​ನಲ್ಲಿ?

ಸರ್ಕಾರ ಬಿದ್ದು ಹೋಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಅವರು, ವ್ಯವಹಾರಿಕವಾಗಿ ಏನಾದರೂ ಆಗುತ್ತದೆ ಎಂದು ಆಸೆ ಇಟ್ಟುಕೊಂಡಿದ್ದಾರೆ. ಅವರ ಯೋಗ್ಯತೆಗೆ ಸರಕಾರ ಬೀಳಿಸುವುದು ಇರಲಿ ವಿಪಕ್ಷ ನಾಯಕನನ್ನು ಮಾಡಲಿ ಎಂದು ಸವಾಲು ಹಾಕಿದ್ರು. 

ಅಲ್ಲದೆ   ಬಿಜೆಪಿಯವರಿಗೆ ತಲೆ ಕೆಟ್ಟಿದೆ, ಅವರ ಜೊತೆ ಹೋಗುವವರಿಗೂ ತಲೆ ಕೆಟ್ಟಿದೆ ಎಂದ ಮಧು ಬಂಗಾರಪ್ಪ ಪಂಚ ರಾಜ್ಯಗಳ ಚುನಾವಣೆಗೆ ನಮಗೂ ಜವಾಬ್ದಾರಿ ವಹಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಪ್ರಚಾರ ನಡೆಸಲು ಹೇಳಿದ್ದಾರೆ. ಇಲ್ಲಿನ ಕೆಲಸ ಕಾರ್ಯ ನೋಡಿಕೊಂಡು ಪ್ರಚಾರಕ್ಕೆ ತೆರಳುತ್ತೇನೆ ಎಂದರು. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor