KARNATAKA NEWS/ ONLINE / Malenadu today/ Oct 31, 2023 SHIVAMOGGA NEWS
SAGARA | ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಹೆಗ್ಗೋಡು ಬಳಿಯಲ್ಲಿ ಅಪರೂಪದ ಲೆಫೆರ್ಡ್ ಕ್ಯಾಟ್ ಪತ್ತೆಯಾಗಿದೆ. ಚಿರತೆಯಂತೆ ಕಾಣುವ ಬೆಕ್ಕು ಇದಾಗಿದ್ದು ಚಿರತೆ ಬೆಕ್ಕು ಎಂದು ಕರೆಯುತ್ತಾರೆ. ಅಸ್ವಸ್ಥ ಸ್ಥಿತಿಯಲ್ಲಿ ಈ ಪ್ರಾಣಿ ಪತ್ತೆಯಾಗಿದ್ದು, ನಾಯಿಗಳು ಇದರ ಮೇಲೆ ದಾಳಿಗೆ ಮುಂದಾಗಿದ್ದವು. ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿಕೊಂಡು ಪ್ರಾಣಿಯನ್ನು ಇಲಾಖೆ ವಶಕ್ಕೆ ನೀಡಿದ್ದಾರೆ.
ಸದ್ಯ ಈ ಚಿರತೆ ಬೆಕ್ಕನ್ನ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರೂಪದ ಜೀವಿ ಇದಾಗಿದ್ದು, ರಾತ್ರಿ ಹೊತ್ತು ಹೆಚ್ಚು ಸಂಚಾರ ಮಾಡುತ್ತದೆಯಂತೆ. ಅಳಿವಿನಂಚಿನಲ್ಲಿರುವ ಪ್ರಾಣಿಗಳಲ್ಲಿ ಇದು ಸಹ ಒಂದು ಎನ್ನುವ ಡಾ.ಮುರುಳಿ ಮೋಹನ್, ಲೆಪರ್ಡ್ ಕ್ಯಾಟ್ನ ಸ್ಥಿತಿ ಗಂಭೀರವಾಗಿದ್ದು, ಅದನ್ನು ಉಳಿಸಿಕೊಳ್ಳುವ ಎಲ್ಲಾ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
