KARNATAKA NEWS/ ONLINE / Malenadu today/ Oct 2, 2023 SHIVAMOGGA NEWS
ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಕಲ್ಲು ತೂರಾಟದ ಘಟನೆ ಬಗ್ಗೆ ಶಿವಮೊಗ್ಗ ನಗರ ಶಾಸಕರು ಮಾತನಾಡಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಮನೆಗಳಿಗೆ ತೆರಳಿದ ಚನ್ನಬಸಪ್ಪರವರು, ಮನೆಗಳಿಗೆ ತೂರಿದ ಕಲ್ಲುಗಳನ್ನು ಮಾಧ್ಯಮಗಳಿಗೆ ತೋರಿಸಿದರು.
ಆನಂತರ ಮಾತನಾಡಿದ ಗಣಪತಿ ಇಡಲು, ಡಿಜೆ ಹಾಕಲು ಪರ್ಮಿಷನ್ ಬೇಕು….? ಆದರೆ ತಲ್ವಾರ್ ಹಿಡಿಯಲು ಪರ್ಮಿಷನ್ ಬೇಡ. ಇದನ್ನು ಕೇಳಿದರೆ ನಾವು ಕೋಮುವಾದಿಗಳು. ಔರಂಗಜೇಬ, ಅಖಂಡ ಭಾರತದ ಫ್ಲೆಕ್ಸ್ ಹಾಕಿ ಪ್ರಚೋದಿಸುತ್ತಾರೆ ಎಂದು ಆರೋಪಿಸಿದರು.
ಇನ್ನೂ 144 ಸೆಕ್ಷನ್ ವಿಚಾರವಾಗಿ ಮಾತನಾಡಿದ ಚನ್ನಬಸಪ್ಪರವರು, ಶಾಂತಿನಗರದಲ್ಲಿ ಸೆಕ್ಷನ್ ಹಾಕಲಾಗುತ್ತದೆ. ಆದರೆ ಕಾರ್ಯಕ್ರಮ ನಡೆಸುವ ಸ್ಥಳದಲ್ಲಿ ಸೆಕ್ಷನ್ ಹಾಕುವುದಿಲ್ಲ. 144 ಸೆಕ್ಷನ್ ಹಾಕಿ ಬೇರೆಯೇ ಸಂದೇಶ ಕೊಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗ ಶಾಂತಿಯಿಂದಿದೆ ಈ ಸಂದೇಶ ರಾಜ್ಯಕ್ಕೆ ಕೊಡಬೇಕಿದೆ. ಸೆಕ್ಷನ್ಗೂ ಅಂಗಡಿ ವ್ಯಾಪಾರಕ್ಕೂ ಏನು ಸಂಬಂಧ. ಶಿವಮೊಗ್ಗ ನಗರದಲ್ಲಿ ಸೆಕ್ಷನ್ ಬೇಡ. ವರ್ತಕರಿಗೆ ಹಿಂಸೆ ಮಾಡುವುದು ಬೇಡ. ವರ್ತಕರ ಜೊತೆ ನಾವಿದ್ದೇವೆ. ಸೆಕ್ಷನ್ ಹಾಕಿ ಅಂಗಡಿ ಬಾಗಿಲು ಹಾಕಿ ಎಂದರೆ ಅದು ತಪ್ಪು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
144 ಸೆಕ್ಷನ್ ಬಗ್ಗೆ ವಿರೋಧ
ಇನ್ನೊಂದೆಡೆ ಇದೇ ವಿಚಾರದಲ್ಲಿ ಮಾತನಾಡಿದ ಮಾದ್ಯಮಗಳಿಗೆ ಮನವಿ ಮಾಡಿಕೊಂಡ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎನ್. ಗೋಪಿನಾಥ್, ಗಲಾಟೆ ಒಂದು ಕಡೆಯಾದರೂ, ನಗರದ ಪ್ರಮುಖ ವಾಣಿಜ್ಯ ಸ್ಥಳಗಳಲ್ಲಿ ಕ್ಲೊಸ್ ಮಾಡಿಸಲಾಗಿದೆ. ಶಿವಮೊಗ್ಗದಲ್ಲಿ 144 ಸೆಕ್ಷನ್ ಜಾರಿಯಾಗಿಲ್ಲ. ಆದರೂ ಅಂಗಡಿ-ಮುಂಗಟ್ಟುಗಳು ಬಾಗಿಲು ಹಾಕಿಸುತ್ತಿದ್ದಾರೆ.ಪೊಲೀಸರು ನಮ್ಮ ಅಂಗಡಿ ಬಾಗಿಲುಗಳನ್ನು ಹಾಕಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಶಿವಮೊಗ್ಗದಲ್ಲಿ ಶಾಂತಿ, ಸುವ್ಯವಸ್ಥೆ ಸಹಜ ಸ್ಥಿತಿಯಲ್ಲಿದೆ. ಮಾದ್ಯಮಗಳಲ್ಲಿ ಶಾಂತಿಯುತವಾಗಿದೆ ಎಂದು ಸುದ್ಧಿಗಳು ಬರಲಿ. ಈ ಮೂಲಕ ರಾಜ್ಯಕ್ಕೆ ಒಳ್ಳೆ ಸಂದೇಶ ಹೋಗಲಿ ಎಂದ ಅವರು ನಮ್ಮ ವರ್ತಕರಿಗೆ ವ್ಯಾಪಾರ ನಡೆಸಲು ಬಿಡಿ ಮನವಿ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಹೇಳಿಕೆ
ನಿನ್ನೆ ಶಿವಮೊಗ್ಗದ ರಾಗಿಗುಡ್ಡದಲ್ಲಿ ಕಲ್ಲು ತೂರಾಟ ನಡೆದಿದ್ದು, ಅನೇಕ ಹಿಂದುಗಳ ಮನೆಗಳ ಮೇಲೆ ಕಲ್ಲು ತೂರಾಟ ನಡೆದಿದೆ. ಕೆಲವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ರೀತಿಯ ದುಷ್ಕೃತ್ಯ ಮಾಡುವ ಯಾರೇ ವ್ಯಕ್ತಿಗಳಾಗಲೀ, ಧರ್ಮದವರಾಗಿರಲಿ ಅವರನ್ನು ಎಚ್ಚರಿಸುವ ಕೆಲಸ ಸರ್ಕಾರ ಮಾಡಬೇಕು. ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಶಾಂತಿಯುತವಾಗಿ ನಡೆದಿದೆ.
ಆದರೆ ಈದ್ ಮಿಲಾದ್ ಮೆರವಣಿಗೆ ವೇಳೆ ಈ ರೀತಿ ನಡೆದಿರುವುದು ದುರಂತ. ಈ ಕೃತ್ಯ ಯಾರು ಮಾಡಿದ್ರು, ಯಾಕೆ ಮಾಡಿದ್ರು ಅವರ ಮೇಲೆ ಪೊಲೀಸರು ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಮೊಗ್ಗ ಶಾಂತಿಯುತವಾಗಿರಬೇಕು. ರಾಗಿಗುಡ್ಡದಲ್ಲಿ ಪದೇ ಪದೇ ಈ ರೀತಿಯ ಘಟನೆಗಳು ನಡೆಯುತ್ತಿದ್ದು, ಶಾಶ್ವತ ಪರಿಹಾರ ಕಂಡು ಹಿಡಿಯಬೇಕಿದೆ. ಪೊಲೀಸರ ವಾಹನನಿಲ್ಲಿಸಿಕೊಂಡು ಹಬ್ಬ ಆಚರಣೆ ಮಾಡುವಂತಾಗಬಾರದು. ತಪ್ಪು ಮಾಹಿತಿ ಹಾಗೂ ವದಂತಿಗಳಿಗೆ ಯಾರು ಕಿವಿಗೊಡಬಾರದು. ಹೊರಗಿನಿಂದ ಬಂದವರು ಯಾರು , ಯಾಕೆ ಎಂಬುದು ತಿಳಿಯಬೇಕು.ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮವಾಗಬೇಕು ಎಂದು ಅಭಿಪ್ರಾಯ ಪಟ್ಟರು.
ಇನ್ನಷ್ಟು ಸುದ್ದಿಗಳು