ರಾಗಿಗುಡ್ಡ, ತಲ್ವಾರ್, ಶಿವಮೊಗ್ಗ ಪೊಲೀಸ್​, ಗೃಹಸಚಿವರು! ಶಿವಮೊಗ್ಗದಲ್ಲಿ ಕೆ.ಎಸ್​.ಈಶ್ವರಪ್ಪನವರು ನೀಡಿದ ಹೇಳಿಕೆಗಳಲ್ಲಿ ಏನಿದೆ!?

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಿನ್ನೆ ನಡೆದ ಕಲ್ಲು ತೂರಾಟ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಡಿಸಿಎಂ ಕೆ.ಎಸ್​.ಈಶ್ವರಪ್ಪ ,  ದುರುದ್ದೇಶಪೂರ್ವಕವಾಗಿ ಗಲಭೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ ಘಟನೆಗೆ ಹೊರಗಿನ ಶಕ್ತಿಗಳು ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿದ್ದಾರೆ.  

ಈ ಸಂಬಂಧ ಸುದ್ದಿಗೋಷ್ಟಿ ನಡೆಸಿದ ಅವರು, ಶಿವಮೊಗ್ಗದಲ್ಲಿ ಹಿಂದೂ ಹಾಗೂ ಮುಸಲ್ಮಾನರ ಕಾರ್ಯಕ್ರಮಗಳು ನಡೆಯುತ್ತವೆ. ಇತ್ತೀಚಿಗೆ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಹಬ್ಬದ ರೀತಿ ನಡೆದಿದೆ.ನಮ್ಮ ಕಾರ್ಯಕ್ರಮದಲ್ಲಿ ಒಂದು ಗಲಾಟೆ ಕೂಡ ಆಗಲ್ಲ. ಆದರೆ ನಿನ್ನೆಯ ಮೆರವಣಿಗೆ ನಡೆದಿರುವ ಬಗ್ಗೆ ರಾಜ್ಯ ಸರ್ಕಾರ ತಲೆ ತಗ್ಗಿಸಬೇಕು ಎಂದಿದ್ದಾರೆ. 

ತಲ್ವಾರ್ ಗಳು ಹಿಡಿದು ಯಾರಿಗೆ ಎಚ್ಚರಿಕೆ ಕೊಡುತ್ತಿದ್ದಿರಾ ಎಂದು ಪ್ರಶ್ನಿಸಿದ ಕೆಎಸ್​ ಈಶ್ವರಪ್ಪ,  ದೊಡ್ಡ ದೊಡ್ಡ ತಲ್ವಾರ್ ಗಳನ್ನ ಹಿಡಿದು ಯಾರಿಗೆ ಎಚ್ಚರಿಕೆ ಕೊಡುತ್ತಿದ್ದಿರಾ? ರಾಜ್ಯ ಸರ್ಕಾರಕ್ಕೆ ಪೊಲೀಸರು ಹೆದರಿಹೋಗಿದ್ದಾರೆ. ತಲ್ವಾರ್ ಎದುರು, ತಲ್ವಾರ್ ಹಿಡಿಯಲು ಹಿಂದೂ ಸಮಾಜಕ್ಕೂ ಬರುತ್ತೆ ಎಂದಿದ್ದಾರೆ.  

ತಲ್ವಾರ್ ನ್ನು ಹಿಡಿದಿರುವವರನ್ನು ಬಂಧಿಸಲು ಪೊಲೀಸರು ಅನ್ ಫಿಟ್ ಆಗಿದ್ದಾರೆ. ಮೆರವಣಿಗೆಯಲ್ಲಿ ಯಾರೂ ತಲ್ವಾರ್ ಹಿಡಿದಿರಲಿಲ್ಲ ಎಂದು ಹೋಂ ಮಿನಿಸ್ಟರ್ ಹೇಳಿಕೆ ಕೊಡ್ತಾರೆ. ಹಿಂದೂ ಸಮಾಜವನ್ನು ಭಯ ಪಡಿಸಲು ಇವರು ಕಾರ್ಯಕ್ರಮ ಮಾಡ್ತಾರೆ ಎಂದು ಆರೋಪಿಸಿದ್ರು. 

ವ್ಯವಸ್ಥಿತ ಗಲಭೆ ಮಾಡಲು ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು,  ರಾಗಿಗುಡ್ಡದ ಹಿಂದೂಗಳ ಮನೆಗಳ ಮೇಲೆ ಕಲ್ಲು ತೂರಲಾಗಿದೆ. ಮನೆಗಳ ಮುಂದೆ ರಕ್ತ ಚೆಲ್ಲಿದೆ. ಪೊಲೀಸರಿಗೂ ಕಲ್ಲಿನಿಂದ ಪೆಟ್ಟಾಗಿದೆ. ಆಕಸ್ಮಿಕವಾಗಿ ಎಸ್.ಪಿ. ಕಲ್ಲೇಟಿನಿಂದ ತಪ್ಪಿಸಿಕೊಂಡಿದ್ದಾರೆ. ಮುಖಕ್ಕೆ ಕಪ್ಪು ಬಟ್ಟೆ ಧರಿಸಿಕೊಂಡು ಕಲ್ಲು ತೂರಾಟ ನಡೆಸಿದ್ದಾರೆ ಎಂದು ದೂರಿದ್ದಾರೆ. 

ಪೊಲೀಸರು ಮೆರವಣಿಗೆಗೆ ಜಾಗ ಕೊಟ್ಟಿದ್ದೆ ಬೇರೆ. ಅವರು ಮೆರವಣಿಗೆ ಮಾಡಿದ್ದೆ ಬೇರೆ ಕಡೆಗೆ. ಶಿವಮೊಗ್ಗದಲ್ಲಿ ಪೊಲೀಸ್ ವ್ಯವಸ್ಥೆ ಬದುಕಿದಿಯಾ ಎಂದು ಪ್ರಶ್ನಿಸಿದ್ದಾರೆ.  ಹಿಂದೂ ಸಮಾಜವನ್ನು ಬಹಳ ಹಗುರವಾಗಿ ತೆಗೆದುಕೊಳ್ಳಬೇಡಿ.ಈ ವಿಚಾರದಲ್ಲಿ ಗೃಹಸಚಿವರು ಸುಳ್ಳು ಹೇಳುತ್ತಿದ್ದಾರೆ. ಕೂಡಲೇ ಗೃಹಮಂತ್ರಿ ಪರಮೇಶ್ವರ್ ರಾಜಿನಾಮೆ ನೀಡಲಿ ಎಂದು ಆಗ್ರಹಿಸಿದ್ದಾರೆ. 

ಹಿಂದೂ ಸಮಾಜದ ಒಬ್ಬ ಯುವಕ ಕಲ್ಲು ತೂರಿಲ್ಲ. ಆದರೆ ಹಿಂದೂಗಳ ಮನೆ ಹುಡುಕಿ ದಾಳಿ ಮಾಡಲಾಗಿದೆ. ಮುಸಲ್ಮಾನರ ರಕ್ಷಣೆಗೆ ಕಾಂಗ್ರೆಸ್ ಸರ್ಕಾರ ಇರುವುದಾ ಎಂದು ಪ್ರಶ್ನಿಸಿದ ಕೆಎಸ್​ ಈಶ್ವರಪ್ಪ ಹಿಂದೂಗಳ ರಕ್ಷಣೆ ಈ ಸರ್ಕಾರ ಮಾಡಲ್ವಾ ಎಂದಿದ್ದಾರೆ. 

ಪೊಲೀಸರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಯಾಕೆ ಅವರು ಸಾಕ್ಷಿ ಹೇಳುತ್ತಾರೆಂದು ಡಿಸ್ಚಾರ್ಜ್ ಮಾಡಲಾಗಿದಿಯಾ ಎಂದ ಮಾಜಿ ಸಚಿವರು,  ನಾನು ಎಸ್.ಪಿ. ಗೆ ಈ ಬಗ್ಗೆ ಪ್ರಶ್ನಿಸಿದ್ದೇನೆ.  ಏನೂ ಆಗಿಲ್ಲ ಎಂದು ಹೇಳಲು ಡಿಸ್ಚಾರ್ಜ್ ಮಾಡಲಾಗಿದಿಯಾ ಎಂದು ಪ್ರಶ್ನಿಸಿದರು. 

ರಾಗಿಗುಡ್ಡದಲ್ಲಿ ಶಾಂತಮ್ಮ ಎಂಬ ಮಹಿಳೆ ಮೇಲೆ ಹಲ್ಲೆ ಮಾಡಲಾಗಿದೆ. ಕೇಳಿದರೆ ಕೆಲವರು ಜನರಿಗಷ್ಟೇ ಗಾಯವಾಗಿದೆ ಎಂದು ಹೇಳುತ್ತಾರೆ ಎಂದು ಆರೋಪಿಸಿದ ಈಶ್ವರಪ್ಪ,  ಇಡೀ ಶಿವಮೊಗ್ಗಕ್ಕೆ 144 ಸೆಕ್ಷನ್ ಜಾರಿ ಮಾಡುವ ಅವಶ್ಯಕತೆ ಇಲ್ಲ. ಕೇವಲ ರಾಗಿಗುಡ್ಡಕ್ಕೆ ಮಾತ್ರ ಸೆಕ್ಷನ್ ಮಾತ್ರ ಇರಲಿ. ವ್ಯಾಪಾರಸ್ಥರಿಗೆ ವ್ಯಾಪಾರ ಮಾಡಲು ಬಿಡಿ ಎಂದಿದ್ದಾರೆ. 

ಅಲ್ಲದೆ  ನಗರದಲ್ಲಿ ಕೂಡಲೇ ಇಟ್ಟಿರುವ ಖಡ್ಗದ ಪ್ರತಿಕೃತಿ ತೆಗೆಸಲಿ. ಇಲ್ಲವಾದರೆ, ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಆಗ್ರಹಿಸಿದರ ಈಶ್ವರಪ್ಪರವರು, ಶಿವಮೊಗ್ಗದಲ್ಲಿ ಇಂಟಲಿಜೆನ್ಸಿ ಫೇಲ್ಯೂರ್ ಆಗಿದೆ.  ಒಳಗಿನವರೋ, ಹೊರಗಿನವರೋ ಒಟ್ನಲ್ಲಿ ಮುಸಲ್ಮಾನ್ ಗೂಂಡಾಗಳು ಗಲಾಟೆ ನಡೆಸಿದ್ದಾರೆ. ಕಲ್ಲು ಹೊಡೆದ ಮುಸಲ್ಮಾನರನ್ನು ಬಂಧಿಸಲಿ ಎಂದು ಒತ್ತಾಯಿಸಿದರು. 


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

Leave a Comment