ರಾಗಿಗುಡ್ಡದಲ್ಲಿ ನಿನ್ನೆ ನಡೆದಿದ್ದೇನು! ಸಿಸಿ ಟಿವಿ ಪೂಟೇಜ್​ನಲ್ಲಿ ಏನಿದೆ!? ಆ ಒಮಿನಿ ಕಾರು ಯಾರದ್ದು? ಎಲ್ಲಿಯದ್ದು? EXCLUSIVE

ಹಂಚಿಕೊಳ್ಳಿ
WhatsApp Facebook X Telegram

KARNATAKA NEWS/ ONLINE / Malenadu today/ Oct 2, 2023 SHIVAMOGGA NEWS’  

ಶಿವಮೊಗ್ಗದ ರಾಗಿಗುಡ್ಡದಲ್ಲಿ ನಡೆದ ಗಲಾಟೆಗೆ ಕಾರಣವಾಗಿದ್ದು ಆ ಒಮಿನಿ ಕಾರಾ? ಇಂತಹದ್ದೊಂದು ಅನುಮಾನ ಇದೀಗ ವ್ಯಕ್ತವಾಗುತ್ತಿದ್ದು, ಇದಕ್ಕೆ ಪೂರಕವಾದ ಎಕ್ಸ್​ಕ್ಲ್ಯೂಸಿವ್ ದೃಶ್ಯಾವಳಿ ಮಲೆನಾಡು ಟುಡೆಗೆ ಲಭ್ಯವಾಗಿದೆ. 

ನಿನ್ನೆಯಷ್ಟೆ ಶಿವಮೊಗ್ಗ ನಗರ ಶಾಸಕ ಚನ್ನಬಸಪ್ಪರವರು ಒಮಿನಿ ಕಾರುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದರ ಬೆನ್ನಲ್ಲೆ ಸ್ಥಳೀಯರು ಕೂಡ ಅನುಮಾನ ವ್ಯಕ್ತಪಡಿಸುತ್ತಿದ್ದು, ಇದಕ್ಕೆ ಪೂರಕವಾದ ಸಿಸಿ ಟಿವಿ ಪೂಟೇಜ್​ಗಳು ಲಭ್ಯವಾಗಿದೆ. 

ಸಿಸಿ ಟಿವಿ ಪೂಟೇಜ್​ನಲ್ಲಿ ಏನಿದೆ? 

ಸ್ಥಳೀಯವಾಗಿ ನಿನ್ನೆ ಘಟನೆ ನಡೆದ ಪ್ರದೇಶದಲ್ಲಿ ಸಿಕ್ಕಿರುವ ಸಿಸಿಟಿವಿ ಪೂಟೇಜ್​ನಲ್ಲಿ ಮೊದಲು 2 ಒಮಿನಿ ಕಾರುಗಳು ಬಂದು ನಿಲ್ಲುತ್ತವೆ. ಸುಮಾರು ಐದು ಮೂವತ್ತರ ಹೊತ್ತಿಗೆ ಸ್ಥಳವೊಂದಕ್ಕೆ ಬಂದು ನಿಲ್ಲುವ ಒಮಿನಿ ವಾಹನದಿಂದ ಎಂಟತ್ತು ಮಂದಿ ಇಳಿಯುತ್ತಾರೆ. ಆನಂತರ ಓಮಿನಿ ವಿರುದ್ಧ ದಿಕ್ಕಿಗೆ ಟರ್ನ್​ ತೆಗೆದುಕೊಂಡು ನಿಂತಿರುತ್ತದೆ. ರಾಗಿಗುಡ್ಡದ ಎಂಟನೇ ಕ್ರಾಸ್​ ನಲ್ಲಿರುವ ಶನೇಶ್ವರ ದೇವಸ್ಥಾನದ ಬಳಿ ನಿಂತಿದ್ದ ಕಾರುಗಳು ಮತ್ತೊಂದು ದಿಕ್ಕಿಗೆ ಟರ್ನ್​ ತೆಗೆದುಕೊಂಡು ನಿಂತಿರುತ್ತದೆ. 

ಇದರ ನಡುವೆ ಮಹಿಳೆಯೊಬ್ಬರು ಕಲ್ಲು ಹೊಡೆದರು ಎಂದು ಕಿರುಚಿಕೊಳ್ಳುತ್ತಾರೆ. ಆನಂತರ ಮುಂದಕ್ಕೆ ಹೋಗುತ್ತಿದ್ದ ಮೆರವಣಿಗೆಯಲ್ಲಿದ್ದ ಗುಂಪು ಓಡಿಬರುತ್ತಾರೆ. ಅವರ ಅನುಮಾನ ಒಮಿನಿ ಕಾರುಗಳ ಮೇಲಿದ್ದು, ಅದರ ಬಳಿಗೆ ಓಡುವಾಗಲೇ ಒಮಿನಿ ಕಾರು ಅಲ್ಲಿಂದ ಪಾಸಾಗುತ್ತದೆ. ಇದಿಷ್ಟು ದೃಶ್ಯಗಳು ಸೆರೆಯಾಗಿದ್ದು ಒಮಿನಿ ಕೆ.ಎ 20 ಪಾಸಿಂಗ್ ವಾಹನವಾಗಿದ್ದು, ಸದ್ಯ ಸ್ಥಳೀಯರು ಹೇಳುವ ಪ್ರಕಾರ, ಈ ಒಮಿನಿಯಲ್ಲಿದ್ದರು ಗಲಾಟೆಗೆ ಕಾರಣವಾಗಿರಬಹುದು ಎಂದು ಶಂಕಿಸುತ್ತಿದ್ದಾರೆ. ಪೊಲೀಸರ ತನಿಖೆಗೆ ಬಳಿಕವಷ್ಟೆ ಸತ್ಯ ಹೊರಬರಬೇಕಿದೆ  


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor