2022 ಸಾಲಿನ  ಸ್ಮಾರ್ಟ್​ ಸಿಟಿ ಪ್ರಶಸ್ತಿಯಲ್ಲಿ ಶಿವಮೊಗ್ಗಕ್ಕೆ 2ನೇ ಸ್ಥಾನ! ಏನಿದು ವಿಶೇಷ ಗೌರವ

KARNATAKA NEWS/ ONLINE / Malenadu today/ Aug 25, 2023 SHIVAMOGGA NEWS

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ 2022 ಸಾಲಿನ  ಸ್ಮಾರ್ಟ್​ ಸಿಟಿ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಈ ಪೈಕಿ, ರಾಜ್ಯದ 3 ನಗರಗಳು ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಗಳಿಸಿಕೊಂಡಿವೆ. 

ಶಿವಮೊಗ್ಗ, ಹುಬ್ಬಳ್ಳಿ – ಧಾರವಾಡ ಮತ್ತು ಬೆಳಗಾವಿ ನಗರಗಳು ಪ್ರಶಸ್ತಿ ಗೆದ್ದುಕೊಂಡಿವೆ. ನಗರ ಪರ್ಯಾವರಣ ವಿಭಾಗದಲ್ಲಿ ಶಿವಮೊಗ್ಗ ನಗರ 2ನೇ ಸ್ಥಾನ ಗಳಿಸಿಕೊಂಡಿದೆ. ಏನೂತನ ಆವಿಷ್ಕಾರ ವಿಭಾಗದಡಿ ಹುಬ್ಬಳ್ಳಿ ಧಾರವಾಡ ಅವಳಿ ನಗರ ಮೊದಲ ಸ್ಥಾನ ಬೆಳಗಾವಿ ಮತ್ತು ದಕ್ಷಿಣ ವಲಯ ನಗರ ವಿಭಾಗದಲ್ಲಿ ನಗರ ಪ್ರಶಸ್ತಿಯನ್ನು ಗಳಿಸಿದೆ.

ಇನ್ನು ರಾಷ್ಟ್ರೀಯ ಸ್ಮಾರ್ಟ್ ಸಿಟಿ ಪ್ರಶಸ್ತಿಯಲ್ಲಿ ಇಂದೋರ್ ಮೊದಲ ಸ್ಥಾನದಲ್ಲಿದ್ದು, ಸೂರತ್ ಹಾಗೂ ಆಗ್ರಾ ಕ್ರಮವಾಗಿ 2 ಮತ್ತು 3ನೇ ಸ್ಥಾನಗಳಲ್ಲಿವೆ. ಉತ್ತಮ ರಾಜ್ಯಗಳ ಪ್ರಶಸ್ತಿಯಲ್ಲಿ ಮಧ್ಯಪ್ರದೇಶ, ತಮಿಳುನಾಡು ಮೊದಲ 2 ಸ್ಥಾನದಲ್ಲಿದ್ದರೆ, ರಾಜಸ್ಥಾನ ಮತ್ತು ಉತ್ತರ ಪ್ರದೇಶ 3ನೇ ಸ್ಥಾನವನ್ನು ಹಂಚಿಕೊಂಡಿವೆ. ಒಟ್ಟಾರೆ 66 ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ನೀಡಲಾಗಿದೆ. 

 

ಇನ್ನಷ್ಟು ಸುದ್ದಿಗಳು


 

Leave a Comment