KARNATAKA NEWS/ ONLINE / Malenadu today/ Jul 25, 2023 SHIVAMOGGA NEWS
ಶಿವಮೊಗ್ಗ ನಗರದಲ್ಲಿ ತುಂಗಾ ನದಿ ತುಂಬಿ ಹರಿಯುತ್ತಿದೆ. ಇದರ ನಡುವೆ ತುಂಗಾ ನದಿಯನ್ನು ನೋಡಲು ಜನರ ದಂಡು ಹೊಸ ಸೇತುವೆ ಹಾಗೂ ಹಳೆ ಸೇತುವೆಗಳ ಬಳಿಗೆ ಬರುತ್ತಿದೆ. ಈ ಮಧ್ಯೆ ಇವತ್ತು ತುಂಗಾ ನದಿಯ ಹಳೆಯ ಸೇತುವೆಯಿಂದ ಯುವಕನೊಬ್ಬ ಹೊಳೆಗೆ ಹಾರಿದ್ದಾನೆ. ಈ ಘಟನೆ ಕೆಲಕಾಲ ಆತಂಕ ಮೂಡಿಸಿತ್ತಾದರೂ ಬಳಿಕ ಯುವಕನ ಹುಚ್ಚಾಟಕ್ಕೆ ಆಕ್ರೋಶ ವ್ಯಕ್ತವಾಗಿದೆ
ತುಂಬಿದ ತುಂಗೆಯಲ್ಲಿ ಈಜುವುದು ಅಪಾಯಕಾರಿ ಕೆಲಸವೇ ಸರಿ. ಅಂತದ್ರಲ್ಲಿ ಇವತ್ತು ಹೊಳೆಬಸ್ಸ್ಟಾಪ್ ಬಳಿಯಲ್ಲಿ ಯುವಕನೊಬ್ಬ ಸೇತುವೆಯ ಮೇಲಿನಿಂದ ತುಂಬಿದ ಹೊಳೆಗೆ ಹಾರಿದ್ದಾನೆ. ಯಾರೋ ಈತ, ಸಾಯೋಕೆ ಹಾರಿದ್ದಾನಾ ಅಂತಾ ಜನರು ಸೇತುವೆಯಿಂದ ಇಣುಕಿ ನೋಡುತ್ತಿರುವಾಗಲೇ, ನದಿಗೆ ಹಾರಿದ್ದ ಯುವಕ ಅತ್ತ ರಾಜೀವ್ ಗಾಂಧಿ ಬಡಾವಣೆ ಕಡೆಯಿಂದ ನದಿಯಿಂದ ಮೇಲಕ್ಕೆ ಬಂದಿದ್ದಾನೆ.
ಈ ದೃಶ್ಯವನ್ನು ನೋಡಿದವರು ಅಚ್ಚರಿಯ ವ್ಯಕ್ತಪಡಿಸುವುದರ ಜೊತೆಗೆ, ಇದೇನು ಹುಚ್ಚಾಟ ಎಂದು ಮಾತನಾಡಿಕೊಂಡರಷ್ಟೆ ಅಲ್ಲದೆ ಹತ್ತಿರ ಕೋಟೆ ಪೊಲೀಸ್ ಸ್ಟೇಷನ್ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಇನ್ನೂ ಪೊಲೀಸರ ವಿಚಾರಣೆ ವೇಳೆ ನದಿಗೆ ಹಾರಿದ ಯುವಕ ಹೆಸರು ಗಂಗಪ್ಪ ಅಲಿಯಾಸ್ ಅಂಗೂರಿ ಎಂದು ಗೊತ್ತಾಗಿದೆ. ಈ ಯುವಕ ಈಜು ಬಲ್ಲವನಾಗಿದ್ದು, ವಿಡಿಯೋ ಮಾಡುವ ಸಲುವಾಗಿ ನದಿಗೆ ಹಾರಿರುವ ಬಗ್ಗೆ ಮಾಹಿತಿಯಿದೆ. ಸದ್ಯ ಯುವಕ ನದಿಗೆ ಹಾರುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲೆಡೆ ಯುವಕನ ನಡೆ ಬಗ್ಗೆ ಪ್ರಶ್ನೆ ಮಾಡಲಾಗುತ್ತಿದೆ.
ಶಿವಮೊಗ್ಗದಲ್ಲಿ ತುಂಬಿ ತುಂಗಾ ನದಿಗೆ ಸೇತುವೆ ಮೇಲಿಂದ ಹಾರಿದ ಯುವಕ! #shivamogga pic.twitter.com/N4srtdWeXw
— malenadutoday.com (@CMalenadutoday) July 25, 2023
ಶಿವಮೊಗ್ಗ ಸಿಟಿಯಲ್ಲಿ ಟ್ರಾಫಿಕ್ ಪೊಲೀಸರ ದಿಢೀರ್ ಕಾರ್ಯಾಚರಣೆ! ಅರ್ಧಗಂಟೆಯಲ್ಲಿ ನೂರಕ್ಕೂ ಹೆಚ್ಚು ಹಾಫ್ ಹೆಲ್ಮೆಟ್ ಜಪ್ತಿ! ಕಾರಣವೇನು?
ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು?
ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್ನಲ್ಲಿ ಕೋರ್ಟ್ ತೀರ್ಪು!
ಮಾಜಿ ಸಿಎಂ ಬಿಎಸ್ವೈ ಇನ್ಮುಂದೆ ಡಾ.ಬಿಎಸ್ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR
ಮಗ ಬೈಕ್ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?
ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!





