KARNATAKA NEWS/ ONLINE / Malenadu today/ Jul 14, 2023 SHIVAMOGGA NEWS
ಸದ್ಯ ನಡೆಯುತ್ತಿರುವ ಕರ್ನಾಟಕ ವಿಧಾನಸಭಾ ಅಧಿವೇಶನ 2023 ದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಮೇಲಾಗಿ ಈ ಚರ್ಚೆಗಳ ನಡುವೆ ನಾಯಕರು ಆಡುತ್ತಿರುವ ಮಾತುಗಳು , ಹೇಳುತ್ತಿರುವ ಹಳೆಯ ಕಥೆಗಳು ಕುತೂಹಲ ಮೂಡಿಸುತ್ತಿದೆ. ಇದಕ್ಕೆ ಪೂರಕವಾಗಿ ನಿನ್ನೆ ದಿನದ ಅಧಿವೇಶನದಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಪ್ರತಿಪಕ್ಷಗಳನ್ನು ಟೀಕಿಸುತ್ತಲೇ ತಮ್ಮ ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸಿಕೊಂಡರು. ಈ ವೇಳೆ ಅವರು ಎಸ್ಎಂ ಕೃಷ್ಣರವರು ಹೇಳಿದ್ದ, ಅಕ್ಬರ್ ಹಾಗೂ ಬೀರ್ಬಲ್ಗೆ ಸಂಬಂಧಿಸಿದ ಕಥೆಯನ್ನು ಸದನದಲ್ಲಿ ವಿವರಿಸಿದರು. ಅಂಗೈನಲ್ಲಿ ಕೂದಲು ಯಾಕಿಲ್ಲ ಎಂಬ ಪ್ರಶ್ನೆಯನ್ನು ರಾಜಕೀಯವಾಗಿ ವ್ಯಾಖ್ಯಾನ ಮಾಡಿದ ಡಿಕೆಶಿಯವರ ಮಾತು ಇಲ್ಲಿದೆ ಕೇಳಿ
ಅಂಗೈನಲ್ಲಿ ಯಾಕೆ ಕೂದಲು ಇರೋದಿಲ್ಲ!? #karnatakaassemblysession2023 pic.twitter.com/I9UAXvAkpB
— malenadutoday.com (@CMalenadutoday) July 14, 2023
ಇವತ್ತು ನಾಳೆ ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್! ಗುಡುಗು, ಮಿಂಚು, ಬಿರುಗಾಳಿ ಜೊತೆ ಭಾರೀ ಮಳೆಯ ಎಚ್ಚರಿಕೆ!
