KARNATAKA NEWS/ ONLINE / Malenadu today/ Jul 12, 2023 SHIVAMOGGA NEWS
60 ಸಾವಿರಕ್ಕಾಗಿ ಮಚ್ಚು ಬೀಸಿದ ದುಷ್ಕರ್ಮಿಗಳು
ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಹೊಸಮನೆ ಪೊಲೀಸ್ ಸ್ಟೇಷನ್ನಲ್ಲಿ ಈ ಸಂಬಂಧ ದೂರು ದಾಖಲಾಗಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು ಭದ್ರಾವತಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಭದ್ರಾಕಾಲೋನಿ ಬಸ್ ನಿಲ್ದಾಣದ ಬಳಿ ನಡೆದ ಘಟನೆಯಲ್ಲಿ ಇಬ್ಬರು ಆರೋಪಿಗಳು ಸಂತ್ರಸ್ತನಿಗೆ ಕೊಟ್ಟ 60000 ಹಣವನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಅಲ್ಲದೆ ಇದೇ ವಿಚಾರಕ್ಕೆ ಹಿಡಿದು ಹಲ್ಲೆ ಮಾಡಿ ಮಚ್ಚಿನ್ನು ಬೀಸಿದ್ದಾರೆ. ಅಲ್ಲಿಂದ ತಪ್ಪಿಸಿಕೊಂಡು ಓಡಿದ ಸಂತ್ರಸ್ತರು ಚಿಕಿತ್ಸೆ ಪಡೆದು ಪೊಲೀಸರಿಗೆ ದೂರು ಕೊಟ್ಟಿದ್ದಾರೆ.
ದನ ಮೇಯಿಸುತ್ತಿದ್ದಾಗ ಸರ ಕದ್ದ ಕಳ್ಳರು
ಅತ್ತ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಕಮಲಾಕ್ಷಮ್ಮ ಎಂಬವರು ಅರದೊಟ್ಟು ಬಸ್ ನಿಲ್ದಾಣದ ಹಸುವನ್ನು ಮೇಯಿಸುತ್ತಿದ್ದಾಗ, ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಾಂಗಲ್ಯ ಸರಕ್ಕೆ ಕೈ ಹಾಕಿ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಬೈಕ್ನಲ್ಲಿ ಬಂದಿದ್ದ ಮೂವರ ಪೈಕಿ ಓರ್ವ ಕೆಳಕ್ಕೆ ಇಳಿದು ಮಹಿಳೆಯ ಹಿಂಬದಿಯಿಂಧ ಬಂದು ಅವರ ಕತ್ತಲ್ಲಿದ್ದ ಸರ ಕದ್ದಿದ್ದಾನೆ. ಬಳಿಕ ಮೂವರು ಬೈಕ್ನಲ್ಲಿ ಭದ್ರಾವತಿ ಕಡೆಗೆ ತೆರಳಿದ್ದಾರೆ. ಈ ಸಂಬಂಧ ತಡವಾಗಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಮೋರಿ ಮುಚ್ಚಿದ್ದಕ್ಕೆ ಬಡಿದಾಟ
ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ಮೋರಿ ವಿಚಾರಕ್ಕೆ ಜಗಳವಾಗಿ ಹೊಡೆದಾಟವಾಗಿದ್ದು, ಪ್ರಕರಣ ಸೊರಬಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ. ಬಾಕ್ಸ್ ಚರಂಡಿಯನ್ನು ಇಲ್ಲಿನ ನಿವಾಸಿಯೊಬ್ಬರು ಮುಚ್ಚಿದ್ದರಂತೆ. ಅದರಿಂದ ಮಳೆ ನೀರು ತಮ್ಮ ಮನೆಯೊಳಗೆ ಬರುತ್ತದೆ ಎಂದು , ಚರಂಡಿ ಕ್ಲೀನ್ ಮಾಡಲು ಮುಂದಾಗಿದ್ದಾರೆ. ಈ ವಿಚಾರಕ್ಕೆ ಎರಡು ಮನೆಯವರ ನಡುವೆ ಜಗಳ ಬೆಳೆದು, ಕೊನೆಗೆ ಹೊಡೆದಾಟವಾಗಿದ್ದು ವಿಚಾರ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದೆ
ಕಟ್ಟೆಹಕ್ಲು ಬಳಿ ಕಾರುಗಳ ನಡುವೆ ಆಕ್ಸಿಡೆಂಟ್
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಗ್ರಾಮದ ಬಳಿ ಎರಡು ಕಾರುಗಳು ನಡುವೆ ಆಕ್ಸಿಡೆಂಟ್ ಆದ ಬಗ್ಗೆ ವರದಿಯಾಗಿದೆ. ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದು, ಜಖಂಗೊಂಡಿದೆ. ಅದೃಷ್ಟವಶಾತ್ ಎರಡು ಕಾರಿನಲ್ಲಿದ್ದವರು ಹೆಚ್ಚಿಗೆ ಪೆಟ್ಟಾಗಿಲ್ಲ. ಇನ್ನೂ ಪ್ರಕರಣ ರಾಜಿಯಾಗಿದ್ದು, ಪೊಲೀಸರು ದೂರು ಇತ್ಯರ್ಥ ಮಾಡಿದ್ದಾರೆ.
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಿರಿಕ್
ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಆಗಾಗ ವಿವಾದಕ್ಕೆ ಒಳಗಾಗುತ್ತಲೇ ಇರುತ್ತದೆ. ಇದೀಗ ಇದೇ ವಿಚಾರ ಪೊಲೀಸರು ಎಂಟ್ರಿಕೊಡುವ ಮಟ್ಟಕ್ಕೆ ಹೋಗಿತ್ತು. ಆಸ್ಪತ್ರೆಯಲ್ಲಿನ ರೋಗಿಗಳನ್ನು ನೋಡಿಕೊಳ್ಳುವ ವಿಚಾರಕ್ಕೆ ಸಿಬ್ಬಂಧಿ ತಗಾದೆ ತೆಗೆದಿದ್ದು ಇದೇ ವಿಚಾರಕ್ಕೆ ರೋಗಿಗಳ ಕಡೆಯವರು ಹಾಗೂ ಸಿಬ್ಬಂದಿ ನಡುವೆ ಗಲಾಟೆಯಾಗಿದೆ. ಈ ಮಧ್ಯೆ ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರು ಎಚ್ಚರಿಕೆ ನೀಡಿ, ಪರಿಸ್ಥಿತಿಯನ್ನು ತಿಳಿಯಾಗಿಸಿದ್ದಾರೆ.
ಮರಕ್ಕೆ ಗುದ್ದಿ ಬೈಕ್ ಆಕ್ಸಿಡೆಂಟ್
ಶಿವಮೊಗ್ಗದ ಕುವೆಂಪು ನಗರದ ಬಳಿಯಲ್ಲಿ ಮರಕ್ಕೆ ಬೈಕ್ ಗುದ್ದಿ ಅಪಘಾತವಾದ ಬಗ್ಗೆ ತಡವಾಗಿ ವರದಿಯಾಗಿದೆ. ಘಟನೆಯಲ್ಲಿ ಬೈಕ್ ಚಾಲಕ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಘಟನೆಗೆ ಕಾರಣ ಸ್ಪಷ್ಟವಾಗಿಲ್ಲ.ಈ ಬಗ್ಗೆ ಸಂಚಾರಿ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೆಂಟ್ ದಾಖಲಾಗಿದೆ.
ನಿಮ್ಮ ಮೊಬೈಲ್ಗೂ ಬಂದಿರುತ್ತೆ ಈ ಮೆಸೇಜ್! ನಂಬಿದ್ರೆ ನಾಮ ಗ್ಯಾರಂಟಿ! ಇಲ್ಲಿದೆ ಸಾಕ್ಷಿ ಓದಿ