ಶಿವಮೊಗ್ಗ ಜಿಲ್ಲೆಯಾದ್ಯಂತ ಒಂದೇ ದಿನ 1587 COTPA ಕೇಸ್​ ದಾಖಲು ! ಏನಿದು!?

KARNATAKA NEWS/ ONLINE / Malenadu today/ Jun 1, 2023 SHIVAMOGGA NEWS

ಶಿವಮೊಗ್ಗ/ ಜಿಲ್ಲೆಯಾದ್ಯಂತ ಒಂದೇ ದಿನ ಬರೋಬ್ಬರಿ 1587 COTPA  ಪ್ರಕರಣಗಳನ್ನ ದಾಖಲು ಮಾಡಲಾಗಿದೆ. ನಿನ್ನೆ ಅಂದರೆ, ದಿನಾಂಕಃ-31-05-2023  ರಂದು ವಿಶ್ವ ತಂಬಾಕು ವಿರೋಧಿ ದಿನ ಆಚರಿಸಲಾಗಿತ್ತು. 

ಇದನ್ನು ಸಹ ಓದಿ :  ಚೀಲೂರು ಡಬ್ಬಲ್​ ಅಟ್ಯಾಕ್! ಹಂದಿ ಅಣ್ಣಿ ಕೊಲೆ ಆರೋಪಿಗಳ ಮೇಲಿನ ದಾಳಿಯಲ್ಲಿ ಯಾರೆಲ್ಲಾ ಆರೋಪಿಗಳು ಗೊತ್ತಾ? ಫಿಟ್ ಆದನಾ ಹೆಬ್ಬೆಟ್ಟು ಮಂಜಾ?

ಈ ಹಿನ್ನೆಲೆಯಲ್ಲಿ  ಶಿವಮೊಗ್ಗ ಜಿಲ್ಲಾದ್ಯಂತ ಕಾನೂನು ಬಾಹೀರವಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಪೆಟ್ಟಿ ಅಂಗಡಿ, ಜೆರಾಕ್ಸ್ ಅಂಗಡಿ ಮತ್ತು ಬೇಕರಿಗಳ ಮೇಲೆ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ಧಾರೆ. 

ಈ ವೇಳೆ  ಶಿವಮೊಗ್ಗ – ಎ ಉಪ ವಿಭಾಗ ವ್ಯಾಪ್ತಿಯಲ್ಲಿ 273, ಶಿವಮೊಗ್ಗ – ಬಿ ಉಪ ವಿಭಾಗ ವ್ಯಾಪ್ತಿಯಲ್ಲಿ 238, ಸಾಗರ ಉಪ ವಿಭಾಗ ವ್ಯಾಪ್ತಿಯಲ್ಲಿ 374, ಭದ್ರಾವತಿ ಉಪ ವಿಭಾಗ ವ್ಯಾಪ್ತಿಯಲ್ಲಿ 81, ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯಲ್ಲಿ 351 ಮತ್ತು ಶಿಕಾರಿಪುರ ಉಪ ವಿಭಾಗ ವ್ಯಾಪ್ತಿಯಲ್ಲಿ  270 ಸೇರಿ, ಜಿಲ್ಲೆಯಾದ್ಯಂತ  ಒಟ್ಟು 1587 ಕೋಟ್ಪಾ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಪೊಲೀಸ್ ಇಲಾಖೆ ಮಾಹಿತಿ ನೀಡಿದೆ. 

ಇದೇ ಜೂನ್ 3 ಕ್ಕೆ ನಾ ಕಂಡಂತೆ ತೇಜಸ್ವಿ-ಶಾಮಣ್ಣ

ಶಿವಮೊಗ್ಗ ಬಹುಮುಖಿ ಶಿವಮೊಗ್ಗ ಹಾಗೂ ಅಭಿರುಚಿ ಪ್ರಕಾಶನ ಮೈಸೂರುನ ಸಹಯೋಗದೊಂದಿಗೆ ಜೂನ್​ 3 ನೇ ತಾರೀಖು  ಸಂಜೆ 5 ಗಂಟೆಗೆ ನಗರದ ಕುವೆಂಪು ರಂಗ ಮಂದಿರದಲ್ಲಿ ಲೇಖಕ ಕಡಿದಾಳ ಪ್ರಕಾಶ್‌ ರವರು ಬರೆದಿರುವ “ನಾ ಕಂಡಂತೆ ತೇಜಸ್ವಿ- ಶಾಮಣ್ಣ” ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಬಗ್ಗೆ ಬಹುಮುಖಿಯ ನಾಗಭೂಷಣ್ ತಿಳಿಸಿದ್ದಾರೆ. 

ವನ್ಯಜೀವಿ ತಜ್ಞರು ಹಾಗೂ ಛಾಯಾಗ್ರಹಕರಾದ ಕೃಪಾಕರ- ಸೇನಾನಿಯವರು ಪ್ರಸ್ತಕ ಬಿಡುಗಡೆ ನೆರವೇರಿಸಲಿದ್ದಾರೆ. ಸಾಹಿತಿ ಪುಟ್ಟಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಖ್ಯಾತ ಸಾಹಿತಿ ಜಯಂತ್‌ ಕಾಯ್ಕಿಣಿ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಂತರ ಅತಿಥಿಗಳೊಂದಿಗೆ ಸಂವಾದ ಕಾರ್ಯಕ್ರಮವು ಇರಲಿದೆ.  

ನಾಡಿನ ಕಲೆ -ಸಾಹಿತ್ಯದ ಇಬ್ಬರು ದಿಗ್ಗಜರು ಪೂರ್ಣಚಂದ್ರ ತೇಜಸ್ವಿ ಹಾಗೂ ಕಡಿದಾಳ್ ಶಾಮಣ್ಣ ಹತ್ತು ಹಲವು ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿರುವ ಇವರಿಬ್ಬರು ನಮ್ಮ ನಡುವೆ ದಂತ ಕತೆಯಾಗಿ ಬೆಳೆದವರು.  . ಕಡಿದಾಳ್‌ ಪ್ರಕಾಶ್  ಇಬ್ಬರ ಬಗ್ಗೆ ಒಂದೇ ಪುಸ್ತಕದಲ್ಲಿ ಬರೆದಿದ್ದು ಇದೊಂದು ವಿಶೇಷ ಕೃತಿ ಎನಿಸಿಕೊಳ್ಳಲಿದೆ. 

 

 

Leave a Comment