ಶಿವಮೊಗ್ಗ ನಗರ ಕ್ಷೇತ್ರದ ರಾಜಕಾರಣದ ಆವರಣದಲ್ಲಿ ಶಿವಮೊಗ್ಗ ಬಿಜೆಪಿಯಲ್ಲಿ ಸಂಚಲನ ಮೂಡಿದ್ದು, ಗೊಂದಲ ಸೃಷ್ಟಿಯಾಗಿದೆ ಎಂಬುದರಲ್ಲಿ ಅನುಮಾನವಿಲ್ಲ. ಇದಕ್ಕೆ ನಿನ್ನೆ ನಡೆದ ಎರಡು ಪ್ರೆಸ್ ಮೀಟ್ಗಳು ಸಹ ಸಾಕ್ಷಿಯಾಗಿದ್ದವು. ಒಂದು ಕಡೆ ತಮ್ಮ ಫ್ಲೆಕ್ಸ್ನ ಬರಹದ ಬಗ್ಗೆ ಸ್ಪಷ್ಟನೆ ನೀಡಲು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಸುದ್ದಿಗೋಷ್ಟಿ ಕರೆದಿದ್ದರು. ವಿಷಯ ಹಾಗೂ ವಿಶೇಷ ಎರಡು ಇದ್ದಿದ್ದರಿಂದ ಸುದ್ದಿಗೋಷ್ಟಿ ಭರ್ತಿಯಾಗಿತ್ತು. ಇನ್ನೊಂದೆಡೆ ದಾವಣೆಗೆರೆ ವಿಜಯ ಸಂಕಲ್ಪ ಸಮಾವೇಶದ ಬಗ್ಗೆ ಮಾತನಾಡಲು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಂಸದ ರಾಘವೇಂದ್ರ ಹಾಗೂ ಜಿಲ್ಲಾಧ್ಯಕ್ಷರ ಜೊತೆ ಪ್ರೆಸ್ ಮೀಟ್ ಕರೆದಿದ್ದರು. ಆದರೆ ಸಬ್ಹೆಕ್ಟ್ ಆಯನೂರು ಮಂಜುನಾಥ್ರ ಹೇಳಿಕೆ ಮತ್ತು ಫ್ಲೆಕ್ಸ್ ಮೇಲೆಯೇ ಕೇಂದ್ರಿಕೃತವಾಗಿತ್ತು.
ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ/ ಧರಣಿ ನಡೆಸಿದವರು ಪೊಲೀಸರ ವಶಕ್ಕೆ

ಬಿಸ್ಕೆಟ್ ನಾಯಿಗಳು!
ಇನ್ನೂ ಎರಡು ಪ್ರೆಸ್ಮೀಟ್ಗಳಲ್ಲಿ ಕೇಳಿಬಂದ ಮಾತು ಕುತೂಹಲ ಮೂಡಿಸಿದೆ. ಈ ಕಡೆ ಆಯನೂರು ಮಂಜುನಾಥ್ರವರು ತಮ್ಮ ಸುದ್ದಿಗೋಷ್ಟಿಯಲ್ಲಿ ಮಾತನಾಡ್ತಾ, ನನ್ನ ವಾದಕ್ಕೆ ಜನ ಬೆಂಬಲ ನೀಡಿದ್ದಾರೆ. ಮತ್ತೆ ಕೆಲವರು ಅಸಹ್ಯವಾದ ಕಾಮೆಂಟ್ ಹಾಕಿದ್ದಾರೆ, ಅವರೆಲ್ಲಾ ಬಿಸ್ಕೆಟ್ ನಾಯಿಗಳು ಎಂದಿದ್ಧಾರೆ. ಶಿವಮೊಗ್ಗದ ಶಾಂತಿ ನೆಮ್ಮದಿ ಕಾಪಾಡುವ ಉದ್ದೇಶ, ಕೆಲವರಿಗೆ ಮನರಂಜನೆಯಾಗಿ ಕಾಣ್ತಿದೆ ಎಂತಾದರೆ, ಅವರ ಮನಸ್ಥಿತಿ ಎಂತಹದ್ದಿರಬಹುದು, ಅವರನ್ನ ಸಾಮಾಜಿಕ ವ್ಯವಸ್ಥೆಯಿಂದಲೇ ಹೊರಕ್ಕೆ ಇಡಬೇಕು ಎಂದಿದ್ದಾರೆ. ಮೋದಿಯವರ ಕನಸಿನಂತೆ ಶಾಂತಿ ನೆಮ್ಮದಿ ಕಾಪಾಡುವುದು ಮುಖ್ಯವಲ್ಲವಾ ಎಂದು ಪ್ರಶ್ನಿಸಿದ ಆಯನೂರು ಮಂಜುನಾಥ್, ನನ್ನನ್ನು ವಿರೋಧಿಸುವವರು ಪ್ರಧಾನಿ ನರೇಂದ್ರ ಮೋದಿಯವರ ವಿರೋಧಿಗಳು ಎಂದರು. ಎಲ್ಲಾ ಹಿಂದೂಗಳು ಕೆಟ್ಟವರಲ್ಲ ಎಲ್ಲಾ ಮುಸ್ಲಿಂಮರೂ ಕೆಟ್ಟವರಲ್ಲ. ನಾನು ಒಳ್ಳೆಯ ಹಿಂದೂ ಎಂದು ಶಿವಮೊಗ್ಗ ಜನತೆಗೆ ಗೊತ್ತಿದೆ ಎಂದರು.

ಅದ್ಯಾಕೆ ಕೇಳ್ತೀಯಾ
ಇದು ಆಯನೂರು ಮಂಜುನಾಥ್ರ ಸುದ್ದಿಗೋಷ್ಟಿಯ ಸಂಕ್ಷಿಪ್ತ ವಿವರವಾದರೆ, ಇತ್ತ ವಿಜಯಸಂಕಲ್ಪ ಯಾತ್ರೆಯ ಸಮಾವೇಶದ ವಿವರ ನೀಡ್ತಿದ್ದ ಕೆ.ಎಸ್.ಈಶ್ವರಪ್ಪರಿಗೆ ಆಯನೂರು ಮಂಜುನಾಥ್ರ ಬಗ್ಗೆಯೇ ಪ್ರಶ್ನೆ ಕೇಳಿಬಂತು. ಅದಕ್ಕವರು, ಅವೆಲ್ಲಾ ಲೆಕ್ಕಕ್ಕೆ ಇಟ್ಟುಕೊಳ್ಳಲ, ನೂರಾರು ಕಾಮೆಂಟ್ ಬರುತ್ತೆ, ಅವನದ್ದೇಕೆ ಕೇಳ್ತೀಯಾ ಎಂದು ಪ್ರತ್ರಕರ್ತರ ಬಾಯಿ ಮುಚ್ಚಿಸಲು ಪ್ರಯತ್ನಿಸಿದರು, ಅಲ್ಲದೆ ಪಕ್ಷ ಯಾರಿಗೆ ಟಿಕೆಟ್ ನೀಡಬೇಕು ಎನ್ನುವುದನ್ನ ನಿರ್ಧರಿಸುತ್ತೆ ಎಂದರು, ಆದರೂ ಪತ್ರಕರ್ತರು ಪ್ರಶ್ನೆ ಕೇಳುವುದನ್ನ ಮುಂದುವರಿಸಿದಾಗ, ಮುನಿಸು ತೋರಿಸಿ, ಮೈಕ್ನ್ನ ಸಂಸದರಿಗೆ ಹಸ್ತಾಂತರಿಸಿದ್ರು.
ಇನ್ನೊಂದು ವಾರದಲ್ಲಿ ವಿಮಾನ ಹಾರಾಟ! ಟಿಕೆಟ್ಗೆ ₹500 ಸಬ್ಸಿಡಿ! ಏಕೆಗೊತ್ತಾ?
MALENADUTODAY.COM |SHIVAMOGGA| #KANNADANEWSWEB
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
HASHTAGS| sagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today news,shivamogga latest news#Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #malenadutodaynews, #todaynewsChilsagar karnataka Bhadravathi Latest News, #shivamogga live news #karnatakalocalnews, #karnataka assembly elections 2023shivamogga today,Ayanur Manjunath, KS Eshwarappa, BJP Shivamogga, Shivamogga City Constituency, Shivamogga City Assembly Constituency, Flex Politics, Flex,ಆಯನೂರು ಮಂಜುನಾಥ್, ಕೆ.ಎಸ್.ಈಶ್ವರಪ್ಪ, ಬಿಜೆಪಿ ಶಿವಮೊಗ್ಗ , ಶಿವಮೊಗ್ಗ ನಗರ ಕ್ಷೇತ್ರ, ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ, ಫ್ಲೆಕ್ಸ್ ರಾಜಕಾರಣ, ಫ್ಲೆಕ್ಸ್, ಹರಕು ಬಾಯಿಗಳಿಗೆ ಹೊಲಿಗೆ ಬೀಳಲಿ