ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚನ್ನಬಸಪ್ಪರ ಬಳಿ ಪ್ರಮುಖ ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರು

ಹಂಚಿಕೊಳ್ಳಿ
WhatsApp Facebook X Telegram
ಶಿವಮೊಗ್ಗ ನಗರ ಶಾಸಕ ಎಸ್​.ಎನ್​.ಚನ್ನಬಸಪ್ಪರ ಬಳಿ ಪ್ರಮುಖ ಬೇಡಿಕೆ ಇಟ್ಟ ರಾಜ್ಯ ಸರ್ಕಾರಿ ನೌಕರರು

SHIVAMOGGA  |  Jan 21, 2024  |   ರಾಜ್ಯ ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಲು ಶಾಸಕರ ಮೂಲಕ ಸರ್ಕಾರಕ್ಕೆ ಮನವಿ.

ಶಿವಮೊಗ್ಗ ಜಿಲ್ಲಾ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರ  ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಿನ್ನೆ ದಿನ ಶಿವಮೊಗ್ಗ ನಗರ ಕ್ಷೇತ್ರ ಶಾಸಕ ಎಸ್ ಎನ್ ಚನ್ನಬಸಪ್ಪರಿಗೆ ನೌಕರರು ಮನವಿ ಸಲ್ಲಿಸಿದ್ದಾರೆ.  

ಏಳನೇ ವೇತನದ ಆಯೋಗದ ವರದಿ ಜಾರಿ

ಏಳನೇ ವೇತನದ ಆಯೋಗದ ವರದಿಯನ್ನು ಶೀಘ್ರವಾಗಿ ಪಡೆದು ಅನುಷ್ಠಾನಗೊಳಿಸಬೇಕು ಹೊಸ ಪಿಂಚಣಿ ವ್ಯವಸ್ಥೆಯನ್ನು ರದ್ದುಗೊಳಿಸಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಪ್ರಸ್ತುತ ಹೊಸ ಪಿಂಚಣಿ ವ್ಯವಸ್ಥೆಗೆ ಕಠಾವಣೆಯಾಗುತ್ತಿರುವ ನೌಕರರ ವಂತಿಕೆಯನ್ನು ಸ್ಥಗಿತಗೊಳಿಸುವಂತೆ ಕೋರಿದ್ದಾರೆ. 

ಅಲ್ಲದೆ ರಾಜ್ಯ ಸರ್ಕಾರಿ ನೌಕರರ ಪರವಾಗಿ ಸರ್ಕಾರವನ್ನು ಒತ್ತಾಯಿಸುವಂತೆ ಮನವಿ ನೀಡಿದರು. ಅಲ್ಲದೆ  ನಗದು ರಹಿತ ಚಿಕಿತ್ಸೆ ನೀಡುವ ಆರೋಗ್ಯ ಸಂಜೀವಿನಿ ಯೋಜನೆಯನ್ನು  ಜಾರಿಗೊಳಿಸುವಂತೆಯೂ ಮನವಿ  ಮಾಡಲಾಯಿತು.

ಇನ್ನೂ  ಮನವಿ ಸ್ವೀಕರಿಸಿದ  ಶಾಸಕ ಎಸ್ಎನ್ ಚೆನ್ನಬಸಪ್ಪ ಅವರು ಮಾತನಾಡಿ  ಪ್ರಸ್ತುತ ನೌಕರರು  ನೀಡಿರುವ ಮನವಿಯಂತೆ ಸರ್ಕಾರಿ ನೌಕರರ ಅಗತ್ಯ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ಭರವಸೆ ನೀಡಿದ್ರು 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor