ಆಗುಂಬೆ ಘಾಟಿಯಲ್ಲಿ ಸಿಕ್ಕ ಶವ ಬಾಗಲಕೋಟೆ ಯುವಕನದ್ದು! ನಡೆದಿದ್ದು ಕೊಲೆ!? ಏನಿದು ಕೇಸ್

ಹಂಚಿಕೊಳ್ಳಿ
WhatsApp Facebook X Telegram
ಆಗುಂಬೆ ಘಾಟಿಯಲ್ಲಿ ಸಿಕ್ಕ ಶವ ಬಾಗಲಕೋಟೆ ಯುವಕನದ್ದು! ನಡೆದಿದ್ದು ಕೊಲೆ!? ಏನಿದು ಕೇಸ್

SHIVAMOGGA |  Dec 9, 2023ಆಗುಂಬೆ ಘಾಟಿಯಲ್ಲಿ ಅಸ್ಥಿಪಂಜರದ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದ್ದು, ಪುತ್ತೂರು ಸಂಪ್ಯ ಪೊಲೀಸ್ ಸ್ಟೇಷನ್​ನ ಪೊಲೀಸರು ಈ ಶವವನ್ನು ಪತ್ತೆ ಹಚ್ಚಿದ್ದಾರೆ. ಮೂಲತಃ ಬಾಗಲಕೋಟೆಯ ಜಿಲ್ಲೆ ಬಾದಾಮಿ ಮೂಲದ ವ್ಯಕ್ತಿಯ ಶವ ಇದಾಗಿದೆ. ಅಲ್ಲದೆ ಶವಪತ್ತೆ ಮಾಡುವ ಮೂಲಕ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ. 

ಬಾಗಲಕೋಟೆ ಜಿಲ್ಲೆಯ ಬಾದಾಮಿ 

ಇಲ್ಲಿನ  ಹನುಮಂತಪ್ಪ (22) ಎಂಬ ಯುವಕನ ಕೊಳೆತ ಶವ ನಿನ್ನೆ ಶುಕ್ರವಾರ ಪತ್ತೆಯಾಗಿತ್ತು. ಈ ಬಗ್ಗೆ ಇನ್ನಷ್ಟು ಮಾಹಿತಿ ಇದೀಗ ಹೊರಬಿದ್ದಿದ್ದು. ಈತ ಕುಂಬ್ರದಲ್ಲಿರುವ ಅರ್ಥ್ ಮೂವರ್ಸ್ ಕಂಪನಿಯೊಂದರಲ್ಲಿ ಟಿಪ್ಪರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಕಳೆದ ನವೆಂಬರ್​ 17 ರಂದು ನಾಪತ್ತೆಯಾಗಿದ್ದ. ಈತನ ಪತ್ತೆಗಾಗಿ ಸಂಪ್ಯ ಠಾಣೆಯಲ್ಲಿ ಕಂಪ್ಲೆಂಟ್​ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಕೊಲೆ ಪ್ರಕರಣ ಭೇದಿಸಿದ್ದಾರೆ. 

READ : ಬೆಂಗಳೂರು ಟೆಕ್ಕಿ ಮಿಸ್ಸಿಂಗ್! 3 ದಿನಗಳ ಬಳಿಕ ಪತ್ತೆ! ಬೆಳ್ತಂಗಡಿ ಭಾಗದ ಬೆಟ್ಟದ ಬುಡದಲ್ಲಿ ಸಿಕ್ಕ ಶವ

ಈ ಸಂಬಂಧ ಬಾದಾಮಿ ತಾಲೂಕಿನ ಡಂಕಶಿರೂರು (Dankashirur village) ಗ್ರಾಮದ ಶಿವಪ್ಪ ಹನುಮಪ್ಪ ಮಾದರ, ಮಂಜುನಾಥ ಹನು ಮಾದಪ್ಪ ಮಾದರ, ದುರ್ಗಪ್ಪ ಮಾದರನನ್ನ ಬಂಧಿಸಿದ್ದರು. ಅವರ ವಿಚಾರಣೆ ವೇಳೆ ಆರೋಪಿಗಳು ಶಂಕಿತರು ಹನುಮಂತಪ್ಪನನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದರಷ್ಟೆ ಅಲ್ಲದೆ  ಶವವನ್ನು ವಿಲೇವಾರಿ ಮಾಡಿದ ಸ್ಥಳವನ್ನು ಬಹಿರಂಗಪಡಿಸಿದ್ದರು. 

ಆಗುಂಭೆ ಘಾಟಿಯಲ್ಲಿ ಪತ್ತೆಯಾದ ಶವ

ಈ  ನಂತರ ಪೊಲೀಸರು ಆಗುಂಬೆ ಘಾಟಿನಲ್ಲಿ ಯುವಕನನ್ನ ಎಸೆದ ಸ್ಥಳವನ್ನು ಪತ್ತೆಮಾಡಿದ್ದಾರೆ. ಸದ್ಯ ಪ್ರಕರಣದ ತನಿಖೆ ಮುಂದುವರಿದಿದ್ದು, ಪೊಲೀಸರ ಕಾರ್ಯಾಚರಣೆಯಿಂದಾಗಿ ಮಗನ ಸುಳಿವು ಕಾಣದ ತಾಯಿಗೆ ನಡೆದ ಸತ್ಯ ತಿಳಿಸಿದಂತಾಗಿದೆ.  


 

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor