ಎನ್​ಆರ್​ ಪುರ ರೋಡಲ್ಲಿ ಮಗನ ವಿಲ್ಹೀಂಗ್​! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್​ !

ಹಂಚಿಕೊಳ್ಳಿ
WhatsApp Facebook X Telegram
ಎನ್​ಆರ್​ ಪುರ ರೋಡಲ್ಲಿ ಮಗನ ವಿಲ್ಹೀಂಗ್​! ತಂದೆಗೆ ಶಾಕ್ ಕೊಟ್ಟ ಪೂರ್ವ ಸಂಚಾರಿ ಪೊಲೀಸ್​ !

SHIVAMOGGA NEWS / ONLINE / Malenadu today/ Nov 24, 2023 NEWS KANNADA

Shivamogga   |  Malnenadutoday.com   ಶಿವಮೊಗ್ಗ ಪೊಲೀಸರು ಹೆಚ್ಚೆಚ್ಚು ಅಲರ್ಟ್ ಆಗುತ್ತಿದ್ದಾರೆ. ಬೆಂಗಳೂರು ಪೊಲೀಸ್ ಮಾದರಿಯಲ್ಲಿ ಸೋಶಿಯಲ್ ಮೀಡಿಯಾಗಳ ಒಳಹೊಕ್ಕಿರುವ ಪೊಲೀಸ್ ಇಲಾಖೆ ಕಾನೂನು ಬಾಹಿರ ಚಟುವಟಿಕೆಗಳನ್ನ ಪ್ರೇಕ್ಷಕರಾಗಿ ನೋಡಿ, ಪೊಲೀಸ್ ರೀತಿಯಲ್ಲಿ ಕೇಸ್ ಹಾಕುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ವೀಲ್ಹೀಂಗ್ ಮಾಡಿ ಆ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದ ಯುವಕನಿಗೆ ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. 

ಏನಿದು ಪ್ರಕರಣ! 

ಶಿವಮೊಗ್ಗದ  ಒಡ್ಡಿನಕೊಪ್ಪ ಕಡೆಯಿಂದ  ಎನ್‌.ಆರ್.ಪುರ ರಸ್ತೆಯಲ್ಲಿ ಯುವಕನೊಬ್ಬ ವಿಲ್ಹೀಂಗ್ ಮಾಡುತ್ತಿದ್ದ. ಆ ದೃಶ್ಯವನ್ನ ಸೆರೆ ಹಿಡಿದು ಸೋಶಿಯಲ್ ಮೀಡಿಯಾಕ್ಕೆ ಹಾಕಿದ್ದ. ಅದು ವೈರಲ್ ಆಗಿತ್ತು. ಅದನ್ನ ಗಮನಿಸಿದ ಟ್ರಾಫಿಕ್‌ ಠಾಣೆ ಇನ್ಸ್‌ಪೆಕ್ಟರ್‌ ಸಂತೋಷ್‌ ಕುಮಾರ್‌, ಪೂರ್ವ ಸಂಚಾರ ಠಾಣೆ ಪಿಎಸ್‌ಐ ನವೀನ್‌ ಕುಮಾರ್ ಮಠಪತಿ ಹಾಗೂ ಸಿಬ್ಬಂದಿ ಶ್ರೀನಿವಾಸ್‌ ವೀಲಿಂಗ್‌ ವಿಡಿಯೋದ ರಾಶಿಗಿಳಿದು ಆತನ ಪೂರ್ವಪರ ಹಾಗೂ ಮೂಲ ಹುಡುಕಿದ್ದಾರೆ. 

READ : ಭದ್ರಾವತಿ ಕಾರೇಹಳ್ಳಿಯಲ್ಲಿ ದೈತ್ಯ ಚಿರತೆ ಸೆರೆ! ನಾಯಿಯು ಸೇಫ್​! ಹೇಗಿದೆ ನೋಡಿ

ಪೊಲೀಸರ ಹುಡುಕಾಡಿದ ಮೇಲೆ ಯಾರಾದರೂ ಸಿಗಲೇಬೇಕಲ್ಲ . ಅದೇರೀತಿ ನ್ಯೂ ಮಂಡ್ಲಿಯ ಸಾದಿಕ್‌ ಶೇಕ್‌ ಎಂಬ ಯುವಕ ಪೊಲೀಸರಿಗೆ ಸಿಕ್ಕಿದ್ದಾನೆ. ಆತ ಹಾಗೂ ಆತನ ವಾಹನದ ಗುರುತು ಪತ್ತೆ ಮಾಡಿದ ಪೊಲೀಸರು  ಅಪಾಯಕಾರಿ ಸ್ಥಿತಿಯಲ್ಲಿ ವಾಹನ ಚಲಾಯಿಸಿದ್ದಕ್ಕೆ, ಹೆಲ್ಮೆಟ್ ಇಲ್ಲದೇ ಬೈಕ್ ಓಡಿಸಿದ್ದಕ್ಕೆ ಹಾಗೂ ಲೈಸೆನ್ಸ್​ ಮಾಡಿಸದೆ ಚಲಾಯಿಸಿದ್ದಕ್ಕೆ ಅಂತೆಲ್ಲಾ ಸೇರಿ  ಸಾದಿಕ್‌ ಶೇಕ್‌ನ ತಂದೆ ಸಲೀಂ ಶೇಕ್‌ಗೆ 9 ಸಾವಿರ ರೂ. ದಂಡ ವಿಧಿಸಿದ್ದಾರೆ. 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor