ಮಲೆನಾಡು ಟುಡೆ ಸುದ್ದಿ ಅಕ್ಟೋಬರ್ 4 2025: ಶಿವಮೊಗ್ಗದ ಪ್ರಸಿದ್ಧ ಕೋಟೆ ಮಾರಿಕಾಂಬ ಜಾತ್ರೆಗೆ ದಿನಾಂಕ ಫಿಕ್ಸ್ ಆಗಿದೆ. ಇವತ್ತು ನಡೆದ ಶ್ರೀ ಕೋಟೆ ಮಾರಿಕಾಂಬ ದೇಗುಲದ ಆಡಳಿತ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಮಹತ್ವದ ನಿರ್ಣಯ ಹೊರಬಿದ್ದಿದೆ. ಮಾರಿಕಾಂಬ ಜಾತ್ರೆಗೆ ಸಂಬಂಧಿಸಿದಂತೆ ಆಡಳಿತ ಮಂಡಳಿಯ ಸದಸ್ಯರು ಸರ್ವಾನುಮತದಿಂದ ದಿನಾಂಕ ನಿಗದಿ ಪಡಿಸಿದ್ದಾರೆ. ಇಲ್ಲಿವರೆಗೂ ನಡೆದುಕೊಂಡು ಬಂದಂತೆ ಸಂಪ್ರದಾಯ ಬದ್ಧವಾಗಿ ಅದ್ದೂರಿಯಾಗಿ ಮಾರಿಕಾಂಬ ಜಾತ್ರೆ ನಡೆಸಲು ನಿರ್ಧರಿಸಲಾಗಿದೆ.
ಇನ್ನೂ ಮಾರಿ ಜಾತ್ರೆಯು ಮುಂದಿನ ವರ್ಷ ಅಂದರೆ 2026 ರಲ್ಲಿ ಫೆಬ್ರವರಿ 24 ರಂದು ಮಂಗಳವಾರ ಆರಂಭಗೊಳ್ಳಲಿದೆ. ಫೆಬ್ರವರಿ 28 ರಂದು ಸಂಪನ್ನಗೊಳ್ಳಲಿದೆ. ಜಾತ್ರೆಗೆ ಸಂಬಂಧಿಸಿದಂತೆ ಇನ್ನಷ್ಟು ವಿವರಗಳು ಲಭ್ಯವಾಗಬೇಕಿದೆ. ಈ ಸಂಬಂಧ ಮಲೆನಾಡು ಟುಡೆಯ ಜೊತೆಗೆ ಮಾತನಾಡಿದ ಮಾರಿಕಾಂಬ ಸೇವಾ ಸಮಿತಿಯ ಎನ್ ಮಂಜುನಾಥ್ ಜಾತ್ರೆಯ ದಿನಾಂಕ ನಿಗದಿಯ ಬಗ್ಗೆ ಮಾಹಿತಿ ನೀಡಿದ್ದು, ಮಾರಿಕಾಂಬಾ ಜಾತ್ರೆಯನ್ನು ಸಂಪ್ರದಾಯಬದ್ಧವಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದಿದ್ದಾರೆ.
Shivamogga Kotemarikamba Jatre Dates Finalized for 2026
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!


