ಆಗುಂಬೆಯಲ್ಲಿ 7 ತಿರುವಿನಿಂದ 9 ತಿರುವಿನವರೆಗೆ ಉರುಳಿದ ಪಿಕಪ್​! ಮಂಗಳೂರಿಗೆ ಸಾಗಿಸ್ತಿದ್ದ ದಾಳಿಂಬೆ ನಾಶ

ajjimane ganesh

ಮಲೆನಾಡು ಟುಡೆ ಸುದ್ದಿ, ಸೆಪ್ಟೆಂಬರ್ 30 2025 :  ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ಆಗುಂಬೆ ಘಾಟಿಯು ಏಳನೇ ತಿರುವಿನಲ್ಲಿ ದಾಳಿಂಬೆ ಹಣ್ಣುಗಳಿದ್ದ ಪಿಕಪ್ ವಾಹನವೊಂದು ಪಲ್ಟಿಯಾದ ಬಗ್ಗೆ ವರದಿಯಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ಸಹ ದಾಖಲಾಗಿದೆ.  ಸೆಪ್ಟೆಂಬರ್ 27 ರಂದು ನಡೆದ ಘಟನೆಯಲ್ಲಿ 3:30 ಗಂಟೆಗೆ ಆಗುಂಬೆ ಘಾಟಿಯ 7 ನೇ ತಿರುವಿನಲ್ಲಿ  ಇಮಾಮ್ ಸಾಬ್ ಎಂಬವರು ತಮ್ಮ ತೋಟದಲ್ಲಿ ಬೆಳೆದಿದ್ದ ದಾಳಿಂಬೆ ಹಣ್ಣುಗಳನ್ನು ಪಿಕಪ್​ನಲ್ಲಿ ಲೋಡ್ ಮಾಡಿಕೊಂಡು ಮಂಗಳೂರಿನತ್ತ ಪ್ರಯಾಣ ಬೆಳೆಸಿದ್ದರು. ಆದರೆ ಘಾಟಿಯ ಏಳನೇ ತಿರುವಿನಲ್ಲಿ ಚಾಲಕನ ಕಂಟ್ರೋಲ್​ ತಪ್ಪಿದ ಪಿಕಪ್ ವಾಹನ 500 ರಿಂದ 600 ಅಡಿ ಆಳಕ್ಕೆ ಉರುಳಿ ಬಿದ್ದು 9 ನೇ ತಿರುವಿನ ಬಳಿ ನಿಂತಿದೆ. ಘಟನೆಯಲ್ಲಿ  ಅದೃಷ್ಟಕ್ಕೆ ಯಾರಿಗೂ ಅಪಾಯವಾಗಿಲ್ಲ ಆದರೆ ದಾಳಿಂಬೆ ಹಣ್ಣುಗಳು ಸಂಪೂರ್ಣವಾಗಿ ಹಾಳಾಗಿದ್ದು, ಈ ಸಂಬಂಧ ಚಾಲಕನ ವಿರುದ್ಧ ಮಾಲೀಕರು ದೂರು ನೀಡಿದ್ದಾರೆ. 

Pomegranate pickup  Agumbe police arrest, Ram Mandir theft, Thirthahalli crime news, temple theft Karnataka, Report a theft, find Agumbe police station, contact Thirthahalli police, Agumbe police news, ಆಗುಂಬೆ ಕಳ್ಳತನ, ರಾಮ ಮಂದಿರ, ಪೊಲೀಸ್ ಕಾರ್ಯಾಚರಣೆ, ತೀರ್ಥಹಳ್ಳಿ ಕಳ್ಳ, ಮನೋಜ್, ದೇವಾಲಯ ಕಳ್ಳತನ 
Agumbe police station, Pomegranate pickup 

Agumbe Ghat accident, Bolero pickup accident Agumbe, Pomegranate cargo loss Agumbe, Reckless driving FIR Karnataka, KA-35 D-1832 accident, Vehicle accident claim process India, ಆಗುಂಬೆ ಘಾಟಿಯಲ್ಲಿ ಅಪಘಾತ, ಪಿಕಪ್ ವಾಹನ ಜಖಂ, ದಾಳಿಂಬೆ ಹಣ್ಣು ನಷ್ಟ, ಚಾಲಕನ ನಿರ್ಲಕ್ಷ್ಯ, ಎಫ್‌ಐಆರ್ ದಾಖಲು, ಆಗುಂಬೆ 7ನೇ ತಿರುವು.Pomegranate pickup 

- Advertisement -

ಇದನ್ನು ಸಹ ಓದಿ  ಸ್ವಾತಿ ಪ್ರೇಮ ಪ್ರಕರಣ, ನಿಜಕ್ಕೂ ನಡೆದಿದ್ದೇನು, ಕೊಲೆನಾ.? ಆತ್ಮಹತ್ಯೆನಾ.? ಕಿರುಕುಳನಾ.? ಜೆಪಿ ಬರೆಯುತ್ತಾರೆ 

ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business,   malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!

Pomegranate pickup incident in Agumbe 

Share This Article
Leave a Comment

Leave a Reply

Your email address will not be published. Required fields are marked *