ಶಿವಮೊಗ್ಗ: ಜನಶತಾಬ್ದಿ ರೈಲಿನಲ್ಲಿ ರೈಲ್ವೆ ರಕ್ಷಣಾದಳಕ್ಕೆ ಸಿಕ್ತು 1 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳಿದ್ದ ಬ್ಯಾಗ್!

ಹಂಚಿಕೊಳ್ಳಿ
WhatsApp Facebook X Telegram
RPF Shivamogga Returns Lost Bag with Rs 1.23 Lakh Worth of Valuables
RPF Shivamogga Returns Lost Bag with Rs 1.23 Lakh Worth of Valuables

ಮಲೆನಾಡು ಟುಡೆ ಸುದ್ದಿ,  ಸೆಪ್ಟೆಂಬರ್ 25 2025 : ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಬಂದ ಜನಶತಾಬ್ದಿಯಲ್ಲಿ ಸಿಕ್ಕ ಬ್ಯಾಗ್​ವೊಂದನ್ನ ರೈಲ್ವೆ ರಕ್ಷಣಾ ದಳದ ಸಿಬ್ಬಂದಿ ಅದನ್ನು ಸುರಕ್ಷಿತವಾಗಿ ಪ್ರಯಾಣಿಕರಿಗೆ ವಾಪಸ್ ಮಾಡಿದ್ದಾರೆ. 

ಜನಶತಾಬ್ದಿ ರೈಲಿನಲ್ಲಿ ಶಿವಮೊಗ್ಗಕ್ಕೆ ಬಂದ ಪ್ರಯಾಣಿಕರೊಬ್ಬರು ತಮ್ಮ ಬ್ಯಾಗ್​ವೊಂದನ್ನ ತಾವು ಪ್ರಯಾಣಿಸಿದ್ದ ಬೋಗಿಯಲ್ಲಿಯೇ ಮರೆತು ಬಿಟ್ಟಿದ್ದರು. ಈ ನಡುವೆ ಆರ್​ಪಿಎಫ್​ ಸಿಬ್ಬಂಧಿ ರೈಲಿನಲ್ಲಿ ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಈ ಬ್ಯಾಗ್​ ಸಿಕ್ಕಿದೆ. ಬ್ಯಾಗ್​ನ್ನು ಪರಿಶೀಲಿಸಿದಾಗ  ಅದರಲ್ಲಿ 1,11,900 ರೂ. ಮೌಲ್ಯದ ಆಪಲ್ ಲ್ಯಾಪ್‌ಟಾಪ್, 10,000 ರೂ. ಮೌಲ್ಯದ ಕಾಸ್ಮೆಟಿಕ್ಸ್ ಹಾಗೂ 2,000 ರೂ. ನಗದು ಸೇರಿದಂತೆ ಒಟ್ಟು 1,23,900 ರೂ. ಮೌಲ್ಯದ ವಸ್ತುಗಳಿದ್ದವು. ಬಳಿಕ ಬ್ಯಾಗ್​ನ್ನ ತಮ್ಮ ಕಚೇರಿಗೆ ಕೊಂಡೊಯ್ದ ಸಿಬ್ಬಂದಿ, ಲಭ್ಯ ಮಾಹಿತಿಯಡಿಯಲ್ಲಿ ಅದರ ಮಾಲೀಕರನ್ನು ಪತ್ತೆ ಮಾಡಿ ಅವರಿಗೆ ಬ್ಯಾಗ್ ಹಿಂತಿರುಗಿಸಿದೆ. ರೈಲ್ವೆ ರಕ್ಷಣಾ ದಳದ ಕಾರ್ಯಕ್ಕೆ ಪ್ರಯಾಣಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

RPF Shivamogga Returns Lost Bag with Rs 1.23 Lakh Worth of Valuables

RPF Shivamogga Returns Lost Bag with Rs 1.23 Lakh Worth of Valuables
RPF Shivamogga Returns Lost Bag with Rs 1.23 Lakh Worth of Valuables
ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor