ಶಿವಮೊಗ್ಗ : ನಿಮಗೂ ಹೀಗಾಗಬಹುದು,  ಪರಿಚಯಸ್ಥರ ಹೆಸರಲ್ಲಿ ವಂಚಕರು ಪೀಕಿದ ಹಣವೆಷ್ಟು ಗೊತ್ತಾ.. 

prathapa thirthahalli
Prathapa thirthahalli - content producer

Cyber crime shivamogga  ತಂತ್ರಜ್ಞಾನ ಮುಂದುವರೆದ ಯುಗದಲ್ಲಿ ಮೊಬೈಲ್ ಹ್ಯಾಕ್ ಮಾಡುವುದು, ವಂಚಕರು ಪರಿಚಯಸ್ಥರ  ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಹ್ಯಾಕ್ ಮಾಡಿ ಹಣಕ್ಕೆ ಬೇಡಿಕೆ ಇಡುವುದು ಸಾಮಾನ್ಯವಾಗಿದೆ. ಕೆಲವರು ಇಂತಹ ಕರೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ, ಇನ್ನೂ ಕೆಲವರು ಅನುಕಂಪದಿಂದಾಗಿ ಅಥವಾ ಏನೋ ಸಮಸ್ಯೆ ಇರಬಹುದೆಂದು ಭಾವಿಸಿ, ಹ್ಯಾಕ್ ಆಗಿರುವ ಅರಿವಿಲ್ಲದೆ ಹಣವನ್ನು ಕಳುಹಿಸಿಬಿಡುತ್ತಾರೆ. ಇದೇ ರೀತಿಯ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದ್ದು, ಓರ್ವ ವ್ಯಕ್ತಿ ₹95,000 ಕಳೆದುಕೊಂಡಿದ್ದಾರೆ.

ಶಿವಮೊಗ್ಗ ನಿವಾಸಿಯೊಬ್ಬರಿಗೆ ಅವರ ಪರಿಚಿತರ ವಾಟ್ಸ್‌ಆ್ಯಪ್‌ನಿಂದ ಒಂದು ಸಂದೇಶ ಬಂದಿದೆ. ಆ ಸಂದೇಶದಲ್ಲಿ ಒಂದು ನಂಬರ್ ಕಳುಹಿಸಿ, ತುರ್ತಾಗಿ ₹65,000 ಅಗತ್ಯವಿದೆ, ತಕ್ಷಣವೇ ಯುಪಿಐ ಮೂಲಕ ಹಣ ಕಳುಹಿಸುವಂತೆ ಕೇಳಲಾಗಿದೆ. ಇದನ್ನು ನಂಬಿದ ವ್ಯಕ್ತಿ ಹಣವನ್ನು ವರ್ಗಾಯಿಸಿದ್ದಾರೆ. ಇದಾದ ಸ್ವಲ್ಪ ಸಮಯದ ನಂತರ, ಅದೇ ನಂಬರ್‌ನಿಂದ ಮತ್ತೆ ₹30,000 ಹಣದ ಅಗತ್ಯವಿದೆ, ಕಳುಹಿಸಿ ಎಂದು ಕೇಳಿದ್ದಾರೆ.  ಆಗಲೂ ಸಹ ಆ ವ್ಯಕ್ತಿ ಹಣವನ್ನು ಕಳೂಹಿಸಿದ್ದಾರೆ. ಆದರೆ  ಪರಿಚಿತರ ಮೊಬೈಲ್ ಹ್ಯಾಕ್ ಆಗಿದ್ದು, ಯಾರು ಹಣ ಕಳುಹಿಸಬೇಡಿ ಎಂಬ ಸಂದೇಶ ವ್ಯಕ್ತಿಯ ಮೊಬೈಲ್‌ಗೆ ಬಂದಿದೆ. ಆಗ ತಾವು ವಂಚನೆಗೆ ಒಳಗಾಗಿರುವುದು ವ್ಯಕ್ತಿಗೆ ಅರಿವಾಗಿದ್ದು ಈ ಸಂಬಂಧ ಅವರು ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ

Cyber crime shivamogga

Share This Article