Shivamogga road accident :ಶಿವಮೊಗ್ಗ: ಮದುವೆಗೆ ಕೇವಲ 15 ದಿನಗಳು ಬಾಕಿ ಇದ್ದಾಗಲೇ ರಸ್ತೆ ಅಪಘಾತದಲ್ಲಿ ಯುವತಿಯೊಬ್ಬಳು ಸಾವನ್ನಪ್ಪಿರುವ ದುರಂತ ಘಟನೆ ಶಿವಮೊಗ್ಗದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಈ ಘಟನೆಯಲ್ಲಿ ಮೃತ ಯುವತಿಯನ್ನು 26 ವರ್ಷದ ಕವಿತಾ ಎಂದು ಗುರುತಿಸಲಾಗಿದೆ.
ಕವಿತಾ ದುಮ್ಮಳ್ಳಿಯಿಂದ ತನ್ನ ಸಹೋದರ ಸಂತೋಷ್ ಜೊತೆ ಬೈಕ್‌ನಲ್ಲಿ ಶಿವಮೊಗ್ಗಕ್ಕೆ ಬರುತ್ತಿದ್ದರು, ಈ ವೇಳೆ ಮಲವಗೊಪ್ಪದ ಬಳಿ ಇರುವ ಸಕ್ಕರೆ ಕಾರ್ಖಾನೆ ಮತ್ತು ಹಾಥಿನಗರದ ನಡುವೆ (ರಾಂಗ್ ರೂಟ್‌ನಲ್ಲಿ) ಬೋಟಿ ಮಾರಾಟ ಮಾಡುವ ವಾಹನ ಅಡ್ಡಬಂದಿದ್ದು. ಆ ವಾಹನಕ್ಕೆ ಸಂತೋಷ್ ಡಿಕ್ಕಿ ಹೊಡೆದಿದ್ದಾರೆ. ಇ ಹಿನ್ನೆಲೆ ಬೈಕ್ ನೆಲಕ್ಕುರುಳಿದ್ದು ಸಂತೋಷ್ ರಸ್ತೆಯ ಫುಟ್‌ಪಾತ್ ಕಡೆ ಬಿದ್ದಿದ್ದರೆ, ಕವಿತಾ ರಸ್ತೆಯ ಮಧ್ಯೆ ಬಿದ್ದಿದ್ದಾರೆ. ಇದೇ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಖಾಸಗಿ ಬಸ್ ಕವಿತಾಳ ತಲೆ ಮೇಲೆ ಹರಿದಿದ್ದು, ಆಕೆ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.

