ಹಿಂದೂಮಹಾಸಭಾ ಗಣಪತಿ ರಾಜಬೀದಿ ಉತ್ಸವದ ವೇಳೆ ಟ್ರಾಕ್ಟರ್ ತಡೆದ ಯುವಕ : ಕಾರಣವೇನು ಗೊತ್ತಾ…

prathapa thirthahalli
Prathapa thirthahalli - content producer

Ganapati shivamogga :  ಹಿಂದೂ ಮಹಾಸಭಾ ಗಣಪತಿಯ ರಾಜಬೀದಿ ಉತ್ಸವ ಅತ್ಯಂತ ವಿಜೃಂಭಣೆಯಿಂದ ಇಂದು ನಡೆಯುತ್ತಿದೆ. ಈ ರಾಜಬೀದಿ ಉತ್ಸವದಲ್ಲಿ ಸಾವಿರಾರು ಜನ ಭಾಗವಹಿಸಿದ್ದಾರೆ. ಇದರ ನಡುವೆ ಪುನೀತ್​ ರಾಜ್​​ಕುಮಾರ್ ರವರ ಅಭಿಮಾನಿಯೊಬ್ಬ ಗಣಪತಿ ಸಾಗಿಸುತ್ತಿದ್ದ ಟ್ರಾಕ್ಟರ್​ನ್ನು ಮುಂದೆ ಹೋಗದಂತೆ ತಡೆದ ಘಟನೆ ನಡೆಯಿತು.

ಮೆರವಣಿಗೆ ಸಾಗುತ್ತಿದ್ದಾಗ, ಯುವಕನೊಬ್ಬ ದಿಢೀರನೇ ಟ್ರ್ಯಾಕ್ಟರ್ ಹತ್ತಿ ಕುಳಿತ. “ದೊಡ್ಮನೆಯಿಂದ ಯಾರೂ ಗಣಪತಿ ಉತ್ಸವಕ್ಕೆ ಬಂದಿಲ್ಲ, ಆದ್ದರಿಂದ ನಾನು ಟ್ರ್ಯಾಕ್ಟರ್ ಅನ್ನು ಮುಂದೆ ಹೋಗಲು ಬಿಡುವುದಿಲ್ಲ,” ಎಂದು ಹಠ ಹಿಡಿದ. ಅಲ್ಲಿದ್ದ ಜನರು ಆತನನ್ನು ಸಮಾಧಾನಪಡಿಸಲು ಯತ್ನಿಸಿದರೂ, ಆತ ತನ್ನ ಹಠ ಬಿಡಲಿಲ್ಲ. “ದೊಡ್ಮನೆಯಿಂದ ಯಾರಾದರೂ ಬರುವವರೆಗೂ ನಾನು ಮುಂದೆ ಹೋಗಲು ಬಿಡುವುದಿಲ್ಲ” ಎಂದು ಅಳಲು ಆರಂಭಿಸಿದ.

ಯುವಕನ ವರ್ತನೆಯಿಂದ ಮೆರವಣಿಗೆಗೆ ಅಡ್ಡಿಯುಂಟಾದಾಗ, ಅಲ್ಲಿದ್ದ ಜನರು ಆತನನ್ನು  ಟ್ರ್ಯಾಕ್ಟರ್‌ನಿಂದ ಕೆಳಗಿಳಿಸಿ ಸಮಾಧಾನ ಪಡಿಸಿ ಕಳುಹಿಸಿದರು. 

Ganapati shivamogga

Ganapati shivamogga

Share This Article