ರಾಗಿಗುಡ್ಡದ ಘಟನೆಯಲ್ಲಿ 60 ಆರೋಪಿಗಳು ಅರೆಸ್ಟ್! ಬಳ್ಳಾರಿ, ಚಿತ್ರದುರ್ಗಾ ಜೈಲಿಗೆ ಶಿಫ್ಟ್​! ಇನ್ನಷ್ಟು ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Oct 3, 2023 SHIVAMOGGA NEWS

ಶಿವಮೊಗ್ಗ ನಗರದ ರಾಗಿಗುಡ್ಡದಲ್ಲಿ ನಡೆದ ಘಟನೆಯಲ್ಲಿ ಇದುವರೆಗೂ 24 ಕೇಸ್ ಗಳು ದಾಖಲಾಗಿದ್ದು, ಘಟನೆ ಸಂಬಂಧ 60 ಮಂದಿಯನ್ನು ಬಂಧಿಸಲಾಗಿದೆ. ಈ ಆರೋಪಿಗಳನ್ನು  ಬಳ್ಳಾರಿ ಮತ್ತು ಚಿತ್ರದುರ್ಗ ಜೈಲಿನಲ್ಲಿ ಇರಿಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ 

ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ್ದ ಎಸ್​ಪಿ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದುವರೆಗೂ 60 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದರು. ಅಲ್ಲದೆ ಒಂದು 4 ಚಕ್ರ,  ಒಂದು 3 ಚಕ್ರ ಮತ್ತು 2 ದ್ವಿಚಕ್ರ ವಾಹನಗಳು ಘಟನೆಯಲ್ಲಿ ಜಖಂಗೊಂಡಿದ್ದು, ಒಟ್ಟು. 7 ಮನೆಗಳ ಗಾಜು ಒಡೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. 

ಇನ್ನೂ ಸ್ಥಳದಲ್ಲಿ ಘಟನೆ ನಡೆದು ಅರ್ಧಗಂಟೆಯ ಒಳಗಾಗಿ  ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಶಿವಮೊಗ್ಗ ನಗರದಲ್ಲಿ ಘಟನೆಯು ಯಾವುದೇ ಪರಿಣಾಮ ಬೀರಿಲ್ಲ.. ಪರಿಸ್ಥಿತಿ ಶಾಂತವಾಗಿದ್ದು, ಇಲ್ಲಿ ಯಾವುದೇ ಧಗಾ ಧಗಾ ಅಥವಾ ಕೊತ ಕೊತ ನಡೆಯುತ್ತಿಲ್ಲ.. ಸಾರ್ವಜನಿಕರು ಗಾಬರಿಯಾಗುವ ಅಥವಾ ವಿಚಲಿತರಾಗುವ ಅವಶ್ಯಕತೆ ಇಲ್ಲ ಎಂದು ತಿಳಿಸಿದ್ದರು. 

ಇದೀಗ ಆರೋಪಿಗಳನ್ನು ಶಿವಮೊಗ್ಗ ಕೋರ್ಟ್​ಗೆ ಹಾಜರುಪಡಿಸಿ , ಅಲ್ಲಿ ಪರಿಸ್ತಿತಿ ಹಾಗೂ ಸನ್ನಿವೇಶದ ಬಗ್ಗೆ ಕೋರ್ಟ್​ಗೆ ಮನವರಿಕೆ ಮಾಡಿ ಆರೋಪಿಗಳನ್ನು ಬಳ್ಳಾರಿ ಹಾಗೂ ಚಿತ್ರದುರ್ಗದ ಜೈಲಿಗೆ ಪೊಲೀಸರು ಶಿಫ್ಟ್ ಮಾಡಿದ್ದಾರೆ


ಇನ್ನಷ್ಟು ಸುದ್ದಿಗಳು 

  1.  ರಾಗಿಗುಡ್ಡದಲ್ಲಿ ಪರಿಸ್ಥಿತಿ ತಿಳಿಗೊಳಿಸಲು ತೆರಳಿದ್ದ ಎಸ್​ಪಿ ಮತ್ತು ಪೊಲೀಸರ ಮೇಲೆ ಕಲ್ಲು ! ಸ್ಥಳದಲ್ಲಿ 144 ಸೆಕ್ಷನ್​ ಜಾರಿ! ಲಾಠಿ ಪ್ರಹಾರ

  2. ನಮಗೆ ಬೆಲೆ ಇರುತ್ತಲ್ಲ ಎಂದು ಪ್ರಶ್ನಿಸಿದ ಬಾಲಕಿ! ಶಿಕ್ಷಕರ ಹಾಗೆ ವಿದ್ಯಾರ್ಥಿನಿಗೆ ಅರ್ಥ ಮಾಡಿಸಿದ ಸಚಿವ! ವೈರಲ್​ ಆಯ್ತು ವಿಡಿಯೋ!


 

Leave a Comment