ಸಂಚಾರ ನಿಯಮ ಉಲ್ಲಂಘನೆ ದಂಡಕ್ಕೆ ಶೇ. 50 ರಿಯಾಯಿತಿ: 5 ದಿನದಲ್ಲಿ ಸಂಗ್ರಹವಾದ ದಂಡದ ಮೊತ್ತವೆಷ್ಟು ಗೊತ್ತಾ

Traffic fine  : ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆ ಮಾಡಿ ದಂಡ ಪಾವತಿಸದೆ ಉಳಿದುಕೊಂಡಿರುವ ಇ-ಚಲನ್‌ಗಳಿಗೆ ರಾಜ್ಯ ಸರ್ಕಾರ ಘೋಷಿಸಿರುವ ಶೇಕಡಾ 50 ರಷ್ಟು ರಿಯಾಯಿತಿ ಯೋಜನೆಗೆ ಶಿವಮೊಗ್ಗದಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ ಕೆಲವು ದಿನಗಳಲ್ಲೇ ಲಕ್ಷಾಂತರ ರೂಪಾಯಿ ದಂಡ ಸಂಗ್ರಹವಾಗಿದೆ.

ಕರ್ನಾಟಕ ಸರ್ಕಾರದ ಆದೇಶದಂತೆ, ಪೊಲೀಸ್ ಇಲಾಖೆಯು ಆಗಸ್ಟ್ 21, 2025 ರಿಂದ ಸಂಚಾರ ಇ-ಚಲನ್‌ಗಳ ದಂಡ ಪಾವತಿಗೆ ರಿಯಾಯಿತಿ ನೀಡುತ್ತಿದೆ. ಈ ಅಭಿಯಾನ ಆರಂಭವಾದ ದಿನಾಂಕ, ಅಂದರೆ ಆಗಸ್ಟ್ 23, 2025 ರಿಂದ ಇಲ್ಲಿಯವರೆಗೆ ಶಿವಮೊಗ್ಗ ಜಿಲ್ಲಾ ಸಂಚಾರ ಪೊಲೀಸರು ಒಟ್ಟು 5,709 ಇ-ಚಲನ್‌ಗಳನ್ನು ಇತ್ಯರ್ಥಪಡಿಸಿದ್ದಾರೆ. ಇದರ ಮೂಲಕ ಒಟ್ಟು ₹23,49,450 ದಂಡದ ಹಣವನ್ನು ಸಂಗ್ರಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಶೇಷ ರಿಯಾಯಿತಿ ಯೋಜನೆಯು ಸೆಪ್ಟೆಂಬರ್ 12, 2025 ರವರೆಗೆ ಮಾತ್ರ ಜಾರಿಯಲ್ಲಿರುತ್ತದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಬಾಕಿ ಉಳಿದಿರುವ ದಂಡವನ್ನು ಪಾವತಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ. 

Traffic fine

Leave a Comment