ಭದ್ರಾವತಿ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ನಲ್ಲಿ 20 ವರ್ಷ ಶಿಕ್ಷೆ!

ಹಂಚಿಕೊಳ್ಳಿ
WhatsApp Facebook X Telegram
Shimoga Court Sentences Two to Prison for Death Caused by Illegal Electric Fence ತಂತಿ ಬೇಲಿಗೆ ಕರೆಂಟ್ ಕೊಟ್ಟಿದ್ದಕ್ಕೆ ಇಬ್ಬರಿಗೆ ತಲಾ ಒಂದು ವರ್ಷ ಶಿಕ್ಷೆ! ಕೋಣೆಹೊಸೂರು ಕೇಸ್ ಇತ್ಯರ್ಥ! ನಡೆದಿದ್ದು ಹೀಗೆ
shivamogga court justice

shivamogga court justice / Malnad news/ shivamogga : ಭದ್ರಾವತಿ (Bhadravati) ತಾಲ್ಲೂಕಿನಲ್ಲಿ 2024 ರಲ್ಲಿ ನಡೆದ ಪೋಕ್ಸೋ (POCSO) ಪ್ರಕರಣವೊಂದರಲ್ಲಿ,  ಶಿವಮೊಗ್ಗ ನ್ಯಾಯಾಲಯ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ ಮತ್ತು ₹1,61,000 ದಂಡ ವಿಧಿಸಿ ತೀರ್ಪು ನೀಡಿದೆ.

ಭದ್ರಾವತಿ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ನಲ್ಲಿ 20 ವರ್ಷ ಶಿಕ್ಷೆ!

shivamogga court justice ಘಟನೆಯ ವಿವರ

2024ರಲ್ಲಿ ಭದ್ರಾವತಿ  ಠಾಣೆ ಒಂದರ ವ್ಯಾಪ್ತಿಯಲ್ಲಿ ನಡೆದ ಘಟನೆ ಇದಾಗಿದೆ. ಈ ಭಾಗದ ಅಪ್ರಾಪ್ತೆಯೊಬ್ಬರು ತಮ್ಮ ಮೇಲೆ ನಡೆದ  ಲೈಂಗಿಕ ದೌರ್ಜನ್ಯ (sexual assault) ದ ಬಗ್ಗೆ ದೂರು ದಾಖಲಿಸಿದ್ದರು. ಆನಂತರ  (IPC) ಕಲಂ 448, 376(2)(ಎನ್), 376(2)(ಎಫ್) ಹಾಗೂ ಪೋಕ್ಸೋ ಕಾಯ್ದೆಯ ಕಲಂ 5(ಜೆ)(2), 5(ಎಲ್), 6 ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು. ಅಂದಿನ ಸಿಪಿಐ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ಕೋರ್ಟ್​ಗೆ ಚಾರ್ಜ್​ಶೀಟ್ ಸಲ್ಲಿಸಿದ್ದರು. 

ಭದ್ರಾವತಿ ವ್ಯಕ್ತಿಗೆ ಶಿವಮೊಗ್ಗ ಕೋರ್ಟ್​ನಲ್ಲಿ 20 ವರ್ಷ ಶಿಕ್ಷೆ!

ನ್ಯಾಯಾಲಯದ ತೀರ್ಪು

ಈ ಸಂಬಂಧ ಶಿವಮೊಗ್ಗದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ FTSC-1 ರಲ್ಲಿ ವಿಚಾರಣೆ ನಡೆದಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ  ಶ್ರೀಧರ್ ಹೆಚ್. ಆರ್. ವಾದ ಮಾಡಿದ್ದರು. ಪ್ರಕರಣದ ವಿಚಾರಣೆ ಮುಗಿದು, ವಿಚಾರಣೆ ವೇಳೆಯಲ್ಲಿ ಆರೋಪ ಸಾಬೀತಾಗಿದೆ. ಹೀಗಾಗಿ ನ್ಯಾಯಾಧೀಶರಾದ ನಿಂಗನಗೌಡ ಬಿ. ಪಾಟೀಲ್ ಅವರು ಆರೋಪಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹1,61,000 ದಂಡ ವಿಧಿಸಿ ಆದೇಶ ನೀಡಿದ್ದಾರೆ. 

shivamogga court justice
shivamogga court justice

Man Gets 20 Years Imprisonment , ನ್ಯಾಯಾಲಯದ ತೀರ್ಪು, ಶಿವಮೊಗ್ಗ ಕೋರ್ಟ್,  #Bhadravati #JusticeForMinor, 

ಹಂಚಿಕೊಳ್ಳಿ
WhatsApp Facebook X Telegram
Ajjimane Ganesh
ಲೇಖಕರ ಬಗ್ಗೆ

Ajjimane Ganesh

Malenadu Today Contributor