BREAKINEG NEWS / ಮಂಗಳೂರು ಕುಕ್ಕರ್ ಸ್ಫೋಟ ಕೇಸ್/ ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಬಳಸುವ ವಸ್ತು ಪತ್ತೆ! ಶಂಕಿತ ಯಾಸಿನ್​ ಸ್ಥಳ ಮಹಜರ್​ನಲ್ಲಿ NIA ಗೇ ಸಿಕ್ಕಿದ್ದೇನು?

This Article Written by / Malenadu Today / ಜುಲೈ 29, 2023

KARNATAKA NEWS/ ONLINE / Malenadu today/ Jul 29, 2023 SHIVAMOGGA NEWS

ಬೆಂಗಳೂರು:  ಮಂಗಳೂರಿನಲ್ಲಿ ನಡೆದಿದ್ದ ಕುಕ್ಕರ್ ಬಾಂಬ್​ ಸ್ಫೋಟದ ಪ್ರಕರಣದ ವೇಳೆ ಎನ್​ಐಎ ಅಧಿಕಾರಿಗಳಿಗೆ ಶಿವಮೊಗ್ಗದಲ್ಲಿ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದು ಸಿಕ್ಕಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಎನ್​ಐಎ ಅಧಿಕಾರಿಗಳು ಇದೇ ಗುರುವಾರದಂದು ಶಿವಮೊಗ್ಗದಲ್ಲಿ ಶಂಕಿತ ಯಾಸಿನ್​ನನ್ನ ಸ್ಥಳ ಮಹಜರ್​ಗೆ ಕರೆತಂದಿದ್ದಾರೆ. ಈ ವೇಳೆ ಆತನಿಗೆ ಸಂಬಂಧಿಸಿದ ಮನೆಯೊಂದರಲ್ಲಿ ಸ್ಫೋಟಕದ ವಸ್ತು ಅಧಿಕಾರಿಗಳಿಗೆ ಲಭ್ಯವಾಗಿದೆ. 

ಕಳೆದ ಗುರುವಾರದಂದು ಯಾಸಿನ್​ನನ್ನ ಕರೆದುಕೊಂಡು ಬಂದಿದ್ದ ಎನ್​ಐಎ ಅಧಿಕಾರಿಗಳು ಶಿವಮೊಗ್ಗ, ತೀರ್ಥಹಳ್ಳಿ, ಹೊನ್ನಾಳಿ ಸುತ್ತಮುತ್ತ ಸ್ಥಳಮಹಜರು ನಡೆಸಿದ್ದಾರೆ. ಈ ಮಹಜರ್​ ವೇಳೆ ಯಾಸಿನ್​ ತನ್ನ ಸಂಬಂಧಿಕರ ಮನೆಯೊಂದರ ಸ್ಲಾಬ್​ ಮೇಲೆ ಅಡಗಿಸಿಟ್ಟಿದ್ದ ಸ್ಫೋಟಕಕ್ಕೆ ಸಂಬಂಧಿಸಿದ ವಸ್ತುವೊಂದನ್ನ ತೆಗೆದು ಅಧಿಕಾರಿಗಳಿಗೆ ನೀಡಿದ್ಧಾನೆ. ರೆಡ್​ ಪಾಸ್ಪರಸ್​ ಪೌಡರ್ ಇದಾಗಿದ್ದು, ಸ್ಫೋಟಕದಲ್ಲಿ ಬಳಸುವ ಗನ್​ಪೌಡರ್​ಗೆ ಪರ್ಯಾಯವಾಗಿ ಬಳಕೆ ಮಾಡಲಾಗುತ್ತದೆ ಎಂದು ವಿಚಾರಣೆಯಲ್ಲಿ ಗೊತ್ತಾಗಿದ್ದು,  ಎನ್​ಎಐ ಅಧಿಕಾರಿಗಳು ವಸ್ತುವನ್ನು ಕೋರ್ಟ್​ಗೆ ಹಾಜರು ಪಡಿಸಿದ್ದಾರೆ. 


SHIVAMOGGA AIRPORT / ಶಿವಮೊಗ್ಗ-ಬೆಂಗಳೂರು ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್!

 ರೈಲ್ವೆ ಪ್ರಯಾಣಿಕರಿಗೆ ಸೂಚನೆ! ಜನಶತಾಬ್ದಿ ಸೇರಿ ಹಲವು ಟ್ರೈನ್​ಗಳ ಸಂಚಾರದಲ್ಲಿ ವ್ಯತ್ಯಯ! ವಿವರ ಇಲ್ಲಿದೆ

Malenadu Today Shivamogga

 ​ 

 

 

SHIVAMOGGA

ಮುಂದಿನ ಸುದ್ದಿ ಒದಿ

Leave a Comment