elephant attack a man 20-06-25 : ಆನೆ ತುಳಿತದಿಂದ ವ್ಯಕ್ತಿ ಸಾವು

elephant attack a man : ಆನೆ ತುಳಿತದಿಂದಾಗಿ ವ್ಯಕ್ತಿ ಸಾವು

ಭದ್ರಾವತಿ ತಾಲೂಕಿನ ಬಂಡಿಗುಡ್ಡದಲ್ಲಿ ಆನೆ ತುಳಿತದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ನಡೆದಿದೆ. ಬಂಡಿಗುಡ್ಡ ಗ್ರಾಮದ ಕುಮಾರ್ (50) ಮೃತ ದುರ್ದೈವಿ.

 ಭದ್ರಾವತಿ ತಾಲೂಕಿನ ಬಂಡಿಗ್ರಾಮದ ಅರಣ್ಯದೊಳಗೆ ಒಂಟಿ ಸಲಗವೊಂದು ಆಗಾಗ ಸಂಚರಿಸುತ್ತಿತ್ತು ಎನ್ನಲಾಗಿದೆ. ಕುಮಾರ್​ರವರು ಜೂನ್​ 19 ರಂದು ಅರಣ್ಯದೊಳಗೆ ಹೋಗಿದ್ದ ವೇಳೆ ಆದೇ ಆನೆ ಕುಮಾರ್​ರವರನ್ನು ತುಳಿದು  ಸಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

ಘಟನಾ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Comment