military aspirants : ಸೇನೆಗೆ ಸೇರಲು ಬಯಸುವ ಆಕಾಂಕ್ಷಿಗಳಿಗೆ ಇಲ್ಲಿದೆ ಉಪಯುಕ್ತ ಮಾಹಿತಿ
ಶಿವಮೊಗ್ಗ | ಸೇನೆಗೆ ಸೇರಲು ಬಯಸುವ ಆಸಕ್ತ ಯುವಕ/ಯುವತಿಯರಿಗಾಗಿ ಶಿವಮೊಗ್ಗದಲ್ಲಿ ಜೂನ್ 21 ರಂದು ಬೆಳಗ್ಗೆ 9 ಗಂಟೆಗೆ ಮಂಗಳೂರು ಸೇನಾ ನೇಮಕಾತಿ ಕಛೇರಿಯ ನಿರ್ದೇಶಕರಿಂದ ಮಾರ್ಗದರ್ಶನ ಉಪನ್ಯಾಸವನ್ನು ಹಮ್ಮಿಕೊಳ್ಳಲಾಗಿದೆ.
ಆಸಕ್ತ ಯುವಕ/ಯುವತಿಯರು ತಮ್ಮ ಹೆಸರು, ವಿದ್ಯಾರ್ಹತೆಯ ವಿವರಗಳನ್ನು ವಾಟ್ಸಪ್ ನಂಬರ್ 9591894552 ಗೆ ಕೇವಲ ವಾಟ್ಸಪ್ ಮೇಸೇಜ್ ಮಾಡುವ ಮೂಲಕ ನೋಂದಾಯಿಸಿಕೊಳ್ಳುವುದು.
ನೋಂದಾಯಿಸಿಕೊಂಡವರು ಮಾರ್ಗದರ್ಶನ ಉಪನ್ಯಾಸಕ್ಕೆ ಹಾಜರಾಗಲು ಅರ್ಹರಾಗಿರುತ್ತಾರೆಂದು ಶಿವಮೊಗ್ಗ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
