ghibli photos ಘಿಬ್ಲಿ ಫೋಟೋ ಹಂಚಿಕೊಂಡು ರಿಷಬ್ ಶೆಟ್ಟಿ ಭಾವನಾತ್ಮಕ ಪೋಸ್ಟ್
ಕನ್ನಡದ ನಟ ಹಾಗೂ ನಿರ್ದೇಶಕ ರಕ್ಷಿತ್ ಶೆಟ್ಟಿ ಇಂದು 42 ನೇ ವಂಸತಕ್ಕೆ ಕಾಲಿಡುತ್ತಿದ್ದು, ಇದರ ನಡುವೆ ರಕ್ಷಿತ್ ಶೆಟ್ಟಿಗೆ ಅನೇಕ ಗಣ್ಯರು ಹುಟ್ಟುಹಬ್ಬದ ಶುಭಾಶಯವನ್ನು ಕೋರಿದ್ದಾರೆ. ಅದರಂತೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸಹ ರಕ್ಷಿತ್ ಶೆಟ್ಟಿಯೊಂದಿಗಿನ ಘಿಬ್ಲಿ ಫೋಟೋ ಹಂಚಿಕೊಂಡು ಭಾವನಾತ್ಮಕವಾಗಿ ಶುಭಕೋರಿದ್ದಾರೆ.
ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು.
ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ.… pic.twitter.com/ZXdN9uTUOd— Rishab Shetty (@shetty_rishab) June 6, 2025
ghibli photos ಈ ಕುರಿತು ರಕ್ಷಿತ್ ಶೆಟ್ಟಿಯೊಂದಿಗೆ ಬೈಕ್ನಲ್ಲಿ ತೆರಳುತ್ತಿರುವ ಫೋಟೋವನ್ನು ಶೇರ್ ಮಾಡಿರುವ ರಿಷಬ್ ಶೆಟ್ಟಿ ನನ್ನ ಪಾಲಿಗೆ ನೀನು ಅತ್ಯಂತ ದೊಡ್ಡ ಶಕ್ತಿಯ ಆಧಾರಸ್ತಂಭ. ಒಳ್ಳೆಯ ದಿನಗಳಲ್ಲಿ, ಕಷ್ಟದ ದಿನಗಳಲ್ಲಿ, ಸದಾ ಗಟ್ಟಿಯಾಗಿ ನನ್ನ ಜೊತೆ ನಿಂತವನು ನೀನು. ಇಷ್ಟೆಲ್ಲಾ ಏರಿಳಿತಗಳ ಈ ಪಯಣದಲ್ಲಿ, ನನ್ನ ಕೈ ಬಿಡದೆ, ಜೊತೆಗಿದ್ದ ನಿನಗೆ ಧನ್ಯವಾದಗಳು. ನಿನ್ನ ಎಲ್ಲಾ ಕನಸುಗಳು ನನಸಾಗಲಿ, ಉತ್ತಮ ಆರೋಗ್ಯ ಮತ್ತು ಅಗಾಧ ಯಶಸ್ಸು ಸದಾ ನಿನ್ನದಾಗಲಿ. ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಮಗಾ ಎಂದು ಭಾವನಾತ್ಮಕವಾಗಿ ಬರೆದು ಕೊಂಡಿದ್ದಾರೆ.
