railway tatkal ticket 06-06-25 ತತ್ಕಾಲ್ ಟಿಕೆಟ್ ಬುಕಿಂಗ್‌ಗೆ ಆಧಾರ್ ಕಡ್ಡಾಯ | ರೈಲ್ವೆ ಇಲಾಖೆಯಿಂದ ಹೊಸ ನಿಯಮ ಜಾರಿ

ಹಂಚಿಕೊಳ್ಳಿ
WhatsApp Facebook X Telegram
railway tatkal ticket
railway tatkal ticket ಆಧಾರ್​ ಕಡ್ಡಾಯ

railway tatkal ticket ಭಾರತೀಯ ರೈಲ್ವೆ ತತ್ಕಾಲ್ ಟಿಕೆಟ್‌ಗಳ ಬುಕಿಂಗ್‌ನಲ್ಲಿ ಪಾರದರ್ಶಕತೆ ಮತ್ತು ನ್ಯಾಯಸಮ್ಮತತೆಯನ್ನು ತರುವ ಉದ್ದೇಶದಿಂದ ಇನ್ಮುಂದೆ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಆಧಾರ್ ಕಾರ್ಡ್ ಕಡ್ಡಾಯ ಎಂಬ ನಿಯಮವನ್ನು ಜಾರಿಗೆ ತಂದಿದೆ. ಈ ಹೊಸ ನಿಯಮ 2025ರ ಜೂನ್ ಅಂತ್ಯದ ವೇಳೆಗೆ ಜಾರಿಗೆ ಬರಲಿದೆ.

ಈ ಕುರಿತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ತಮ್ಮ ‘X’ ಖಾತೆಯಲ್ಲಿ ಟ್ವೀಟ್ ಮಾಡಿ, “ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸಲು ಭಾರತೀಯ ರೈಲ್ವೆ ಶೀಘ್ರದಲ್ಲೇ ಇ-ಆಧಾರ್ ದೃಢೀಕರಣವನ್ನು ಬಳಸಲು ಪ್ರಾರಂಭಿಸುತ್ತದೆ. ಇದು ನಿಜವಾದ ಬಳಕೆದಾರರಿಗೆ ಅಗತ್ಯವಿದ್ದಾಗ ದೃಢೀಕೃತ ಟಿಕೆಟ್‌ಗಳನ್ನು ಪಡೆಯಲು ಸಹಾಯ ಮಾಡುತ್ತದೆ,” ಎಂದು ಬರೆದುಕೊಂಡಿದ್ದಾರೆ.

railway tatkal ticket ಈ ಹಿಂದೆ ಪ್ರಯಾಣಿಕರು ಅಲ್ಪಾವಧಿಯಲ್ಲಿ ತುರ್ತು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದನ್ನು ಅನುಮತಿಸಲು ತತ್ಕಾಲ್​ ಯೋಜನೆಯನ್ನು ಪರಿಚಯಿಸಲಾಗಿತ್ತು. ಆದರೆ ಅದು ನಂತರ ದಿನಗಳಲ್ಲಿ ದಲ್ಲಾಳಿಗಳು ಮತ್ತು ಸ್ವಯಂಚಾಲಿತ ಬಾಟ್‌ಗಳಿಂದ ವ್ಯಾಪಕ ದುರುಪಯೋಗ ಉಂಟಾಯಿತು. ಅಧಿಕಾರಿಗಳ ಪ್ರಕಾರ, ಅನೇಕ ಮೋಸದ ಏಜೆಂಟರು ನಕಲಿ ಗುರುತು ಅಥವಾ ಸ್ವಯಂಚಾಲಿತ ಸಾಫ್ಟ್‌ವೇರ್ ಬಳಸಿ ಬುಕಿಂಗ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದರು. ಇದರಿಂದಾಗಿ ನಿಜವಾದ ಪ್ರಯಾಣಿಕರು ತತ್ಕಾಲ್ ಟಿಕೆಟ್‌ಗಳನ್ನು ಪಡೆಯುವುದು ಕಷ್ಟವಾಗುತ್ತಿತ್ತು. ಇದರಿಂದಾಗಿ ಕೊನೆಯ ಕ್ಷಣದ ರೈಲ್ವೆ ಬುಕಿಂಗ್‌ಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದ್ದ ದುರ್ಬಳಕೆಗೆ ಕಡಿವಾಣ ಹಾಕಲಿದೆ.

railway tatkal ticket : ಹೊಸ ನಿಯಮ ಹೇಗೆ ಕಾರ್ಯನಿರ್ವಹಿಸುತ್ತದೆ

ಹೊಸ ನಿಯಮದ ಪ್ರಕಾರ, ತತ್ಕಾಲ್ ಟಿಕೆಟ್‌ಗಳನ್ನು ಖರೀದಿಸುವಾಗ ಗ್ರಾಹಕರು ತಮ್ಮ ಗುರುತನ್ನು ಆಧಾರ್ ಆಧಾರಿತ ಪರಿಶೀಲನೆಯ ಮೂಲಕ ದೃಢೀಕರಿಸಬೇಕಾಗುತ್ತದೆ. ಈ ಪ್ರಕ್ರಿಯೆಯು ರೈಲ್ವೆ ಕೌಂಟರ್‌ಗಳಲ್ಲಿ ಮತ್ತು IRCTC ಆನ್‌ಲೈನ್ ಬುಕಿಂಗ್‌ಗಳಿಗೂ ಅನ್ವಯಿಸುತ್ತದೆ. ಈ ಹೊಸ ವ್ಯವಸ್ಥೆ ಜಾರಿಗೆ ಬಂದ ನಂತರ, ಬುಕ್ ಮಾಡಿದ ಪ್ರತಿ ತತ್ಕಾಲ್ ಟಿಕೆಟ್ ಕೂಡ ಮಾನ್ಯ ಆಧಾರ್ ಗುರುತಿನ ಚೀಟಿಯೊಂದಿಗೆ ಡಿಜಿಟಲ್ ಆಗಿ ಸಂಪರ್ಕಗೊಳ್ಳುತ್ತದೆ.ಈ ಕ್ರಮವು ತತ್ಕಾಲ್ ಟಿಕೆಟ್‌ಗಳ ದುರ್ಬಳಕೆಯನ್ನು ತಡೆಯಲು ಮತ್ತು ನಿಜವಾದ ಪ್ರಯಾಣಿಕರಿಗೆ ಸುಲಭವಾಗಿ ಟಿಕೆಟ್‌ಗಳು ಸಿಗುವುದನ್ನು ಖಚಿತಪಡಿಸಿಕೊಳ್ಳಲು ರೈಲ್ವೆ ಇಲಾಖೆ ಕೈಗೊಂಡಿರುವ ಮಹತ್ವದ ನಿರ್ಧಾರವಾಗಿದೆ. ಇದರಿಂದಾಗಿ ದಲ್ಲಾಳಿಗಳ ಹಸ್ತಕ್ಷೇಪ ಕಡಿಮೆಯಾಗಿ, ಅರ್ಹ ಪ್ರಯಾಣಿಕರಿಗೆ ನ್ಯಾಯಯುತವಾಗಿ ಟಿಕೆಟ್‌ಗಳು ಲಭ್ಯವಾಗಲಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor