Sad news in rcb celebration / ಆರ್​ಸಿಬಿ ಸಂಭ್ರಮದ ನಡುವೆ ಶಿವಮೊಗ್ಗದಲ್ಲಿ ನಡೀತು ದುರಂತ! 21 ವರ್ಷದ ಯುವಕ ಸಾವು

ಹಂಚಿಕೊಳ್ಳಿ
WhatsApp Facebook X Telegram
Sad news in rcb celebration
Sad news in rcb celebration

Sad news in rcb celebration  ಶಿವಮೊಗ್ಗದಲ್ಲಿ ಆರ್‌ಸಿಬಿ ಗೆಲುವಿನ ಸಂಭ್ರಮ ಮಾರಣಾಂತಿಕ ಅಪಘಾತಕ್ಕೆ ಕಾರಣವಾಗಿದೆ. ನಿನ್ನೆ ರಾತ್ರಿ ಉಷಾ ನರ್ಸಿಂಗ್ ಹೋಮ್ ಬಳಿ ನಡೆಯುತ್ತಿದ್ದ ಸಂಭ್ರಮಾಚರಣೆಯ ನಡುವೆ ಅಲ್ಲಿಯೇ ಸಮೀಪದ  ರವೀಂದ್ರ ನಗರದ ಗಣಪತಿ ದೇವಸ್ಥಾನದ ಬಳಿ ನಡೆದ ಬೈಕ್ ವೊಂದು ಅಪಘಾತಕ್ಕೀಡಾಗಿದೆ. ಎರಡು ಬೈಕ್​ಗಳು  ಡಿಕ್ಕಿಯಾದ ಪರಿಣಾಮ 21 ವರ್ಷದ ಅಭಿ ಪ್ರಾಣ ಕಳೆದುಕೊಂಡಿದ್ದಾರೆ. ಘಟನೆ ಬೆನ್ನಲ್ಲೆ ಹಲವೆಡೆ ನಡೆಯುತ್ತಿದ್ದ RCB  ಅಭಿಮಾನಿಗಳ ಸಂಭ್ರಮಕ್ಕೆ ಪೊಲೀಸರು ಬ್ರೇಕ್ ಹಾಕಿದ್ದಾರೆ. 

ನಡೆದಿದ್ದೇನು? Sad news in rcb celebration 

ನಿನ್ನೆ ರಾತ್ರಿ ಆರ್​ಸಿಬಿ ಮ್ಯಾಚ್​ ಗೆಲ್ಲುತ್ತಲೇ ಅಭಿಮಾನಿಗಳು ರೋಡಿಗೆ ಇಳಿದಿದ್ದು ಬೈಕ್​​ಗಳಲ್ಲಿ ರ್ಯಾಲಿ ಮಾಡಲು ಆರಂಭಿಸಿದ್ದರು. ಪ್ರಮುಖ ಸರ್ಕಲ್​ಗಳಲ್ಲಿ ಕುಣಿಯುತ್ತಿದ್ದರು. ಈ ನಡುವೆ ಸ್ಪೀಡ್​ನಲ್ಲಿ ಬಂದ ಎರಡು ಬೈಕ್​ಗಳು ಪರಸ್ಪರ ಡಿಕ್ಕಿಯಾಗಿವೆ. ಘಟನೆಯಲ್ಲಿ ವೆಂಕಟೇಶ್ವರ ನಗರ ನಿವಾಸಿ ಅಭಿ ಗಂಭೀರವಾಗಿ ಗಾಯಗೊಂಡಿದ್ದ. ಘಟನೆ ಬೆನ್ನಲ್ಲೆ ಸ್ಥಳದಲ್ಲಿದ್ದವರು ಆತನ ರಕ್ಷಣೆ ಬಂದರಾದರೂ ಆತ ಸಾವನ್ನಪ್ಪಿದ್ದ. ಈ ಸಂಬಂಧ  ಜಯನಗರ ಪೊಲೀಸ್ ಠಾಣೆ ಪೊಲೀಸರು ಈ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತದ್ದಾರೆ. 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor