canara bank :  ವಾಮಾಚಾರ ಮಾಡಿ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ

canara bank : ಕಳ್ಳರು ವಾಮಾಚಾರ ಮಾಡಿ ಚಿನ್ನಾಭರಣ ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ​ ನಡೆದಿದೆ.

canara bank : ಹೇಗಾಯ್ತು ಘಟನೆ

ಮೇ 27 ರ ರಾತ್ರಿ ಕಳ್ಳರು ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ ಕಳ್ಳತನ ಮಾಡಲು ಸ್ಕೆಚ್​ ಹಾಕಿದ್ದಾರೆ. ಹಾಗೆಯೇ  ಮೊದಲು ಬ್ಯಾಂಕ್​ನ ಬಾಗಿಲು ಹಾಗೂ ಕಿಟಕಿಯನ್ನು ಮುರಿದು ವಾಮಾಚಾರ ನಡೆಸಿದ್ದಾರೆ. ನಂತರ ಚಿನ್ನಾಭರಣ ನಗದು ಹಾಗೂ ಬ್ಯಾಂಕ್​ನಲ್ಲಿದ್ದ ಸಿಸಿ ಕ್ಯಾಮೆರಾಗಳ ಹಾರ್ಡ್​ ಡ್ರೈವ್​ಗಳನ್ನು ಕದ್ದು ಪರಾರಿಯಾಗಿದ್ದಾರೆ. ಇನ್ನೂ ಬ್ಯಾಂಕ್​ನಲ್ಲಿ ಎಷ್ಟು ನಗದು ಹಾಗೂ ಚಿನ್ನಾಭರಣಗಳು ಕಳುವು ಆಗಿದೆ ಎಂಬ ಅಂಕಿ ಅಂಶಗಳು ಇನ್ನಷ್ಟೇ ತಿಳಿದುಬರಬೇಕಿದೆ. 

ಈ ಹಿನ್ನಲೆ  ಸ್ಥಳಕ್ಕೆ ಮನಗೂಳಿ ಠಾಣೆ ಪೊಲೀಸರು, ಬ್ಯಾಂಕ್​ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಮನಗೂಳಿ ಪಟ್ಟಣ ಪಂಚಾಯತಿಯಿಂದ ಪ್ರಮುಖ ಭಾಗಗಳಲ್ಲಿ 35 ಸಿಸಿ ಕ್ಯಾಮೆರಾಮಗಳನ್ನು ಅಳವಡಿಕೆ ಮಾಡಲಾಗಿದ್ದು, ತನಿಖಾಧಿಕಾರಿಗಳು ಅವುಗಳನ್ನು ಪರಿಶೀಲಿಸುತ್ತಿದ್ದಾರೆ.

 

 

Leave a Comment