bike accident : ಎರಡು ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ | ಮಹಿಳೆ ಸಾವು

prathapa thirthahalli
Prathapa thirthahalli - content producer

bike accident : ಸಾಗರ | ಬೈಕ್​ ಹಾಗೂ ಸ್ಕೂಟಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಸಾಗರ  ತಾಲೂಕಿನ ಆನಂದಪುರ ಸಮೀಪದ ಬೊಮ್ಮತ್ತಿ ಬಳಿ ನಡೆದಿದೆ. ಅಬಸೆ ಗ್ರಾಮದ ನಾಗಮ್ಮ (75) ಅಪಘಾತದಿಂದ ಸಾವನ್ನಪ್ಪಿದ ಮಹಿಳೆ.

bike accident : ಹೇಗಾಯ್ತು ಅಪಘಾತ

ಸಾಗರದಿಂದ ಬೆಳಂದೂರು ಕಡೆ ತೆಳುತ್ತಿದ್ದ ಬೈಕಿಗೂ ಅಬಸೆಯಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್ ಗಳ ನಡುವೆ  ಡಿಕ್ಕಿ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ತೀವ್ರ ಗಾಯಗೊಂಡಿದ್ದರು, ಆಕೆಯನ್ನು ಕೂಡಲೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿತ್ತು . ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯ ಸಾವನ್ನಪ್ಪಿದ್ದಾರೆ.

- Advertisement -

 ಇತ್ತ ಬೈಕ್​ ಸವಾರನಿಗೂ ಸಹ ಹೆಚ್ಚಿನ ಗಾಯಗಳಾಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಲಾಗುತ್ತಿದೆ.ಪ್ರಕರಣ ಸಂಬಂಧ ಆನಂದ ಪುರು ಪೊಲೀಸ್​ ಠಾನೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *