ಮನೆಬಿಟ್ಟಿದ್ದ ತಂದೆ, 112 ಗೆ ಕರೆ ಮಾಡಿದ ಮಗ! ಕೆಲವೇ ಹೊತ್ತಿನಲ್ಲಿ ರಕ್ಷಣೆ! ಹೇಗಿತ್ತು ಕಾರ್ಯಾಚರಣೆ ಓದಿ

ಶಿವಮೊಗ್ಗ /ಮಲೆನಾಡು ಟುಡೆ ಸುದ್ದಿ / ನಾಪತ್ತೆಯಾಗಿದ್ದ ವಯೋವೃದ್ಧರೊಬ್ಬರನ್ನು 112 ತುರ್ತು ಸ್ಪಂದನಾ ವ್ಯವಸ್ಥೆಯ ಸಿಬ್ಬಂದಿಯು ಕಾರ್ಯಾಚರಣೆ ನಡೆಸಿ ಕೆಲವೇ ಹೊತ್ತಿನಲ್ಲಿ ಸುರಕ್ಷಿತವಾಗಿ ಪತ್ತೆಹಚ್ಚಿ ಕುಟುಂಬಸ್ಥರಿಗೆ ಒಪ್ಪಿಸಿದ ಘಟನೆ ವರದಿಯಾಗಿದೆ. ಈ ಬಗ್ಗೆ ಕಾಣೆಯಾಗಿದ್ದ ತಂದೆಯ ಪುತ್ರ ವಿಡಿಯೋವೊಂದನ್ನು ಮಾಡಿದ್ದು 112 ಪೊಲೀಸರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 

112 emergency response staff help save an elderly man
112 emergency response staff help save an elderly man

ನಡೆದಿದ್ದೇನು?

ಮೂಲಗಳ ಪ್ರಕಾರ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ನಿವಾಸಿಯೊಬ್ಬರು ಮನಸ್ಸಿಗೆ ಬೇಸರ ಮಾಡಿಕೊಂಡು ಮನೆಯಿಂದ ಹೊರಟಿದ್ದರು. ಈ ಬಗ್ಗೆ ಗೊತ್ತಾದ ಬೆನ್ನಲ್ಲೆ ಅವರ ಮಗ 112 ಪೊಲೀಸರಿಗೆ ಕರೆ ಮಾಡಿ ತಮ್ಮ ತಂದೆಯನ್ನು ಪತ್ತೆ ಮಾಡುವಂತೆ ಮನವಿ ಮಾಡಿದ್ದರು. ಇದರ ಬೆನ್ನಲ್ಲೆ 112 ಸಿಬ್ಬಂದಿ, ಪುತ್ರ ನೀಡಿದ ಮಾಹಿತಿ ಅನ್ವಯ ತೀರ್ಥಹಳ್ಳಿ ಬಸ್​ ನಿಲ್ದಾಣ ಸೇರಿದಂತೆ ವಿವಿದೆಡೆ ಮಾಹಿತಿ ರವಾನೆ ಮಾಡಿ, ವೃದ್ಧರನ್ನು ಪತ್ತೆ ಮಾಡಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಅದೃಷ್ಟವಶಾತ್ ಹಿರಿಯರು  ತೀರ್ಥಹಳ್ಳಿ ಬಸ್ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ. 

ತೀರ್ಥಹಳ್ಳಿಯ ಶಿವರಾಜಪುರದಲ್ಲಿ ಅಪಘಾತ, ವ್ಯಕ್ತಿ ಸಾವು

ಇನ್ನೂ ತಮ್ಮ ತಂದೆ ಪತ್ತೆಯಾಗಿರುವುದನ್ನ ತಿಳಿದು ಸ್ಥಳಕ್ಕೆ ಬಂದ ಪುತ್ರ 112 ಸಿಬ್ಬಂದಿಯ ಕಾರ್ಯವನ್ನು ಹಾಡಿಹೊಗಳಿದ್ದಾರೆ. ಇದರ ವಿಡಿಯೋ ದೃಶ್ಯವನ್ನು ಎಸ್​ಪಿ ನಿಖಿಲ್ ತಮ್ಮ ಎಕ್ಸ್ ಅಕೌಂಟ್​ನಲ್ಲಿ ಷೇರ್ ಮಾಡಿದ್ದಾರೆ.  

ತಂದೆಯನ್ನು ಮರಳಿ ಪಡೆದ ಆನಂದದಲ್ಲಿದ್ದ ಮಗ ವಿಡಿಯೋದಲ್ಲಿ 112 ಸಹಾಯವಾಣಿಗೆ ಕರೆ ಮಾಡಿದ ಕೂಡಲೇ ಸ್ಪಂದಿಸಿದ ಸಿಬ್ಬಂದಿ ತಮಗೆ ಒಂದು ರೀತಿಯಲ್ಲಿ ಮರುಜೀವ ನೀಡಿದ್ದಾರೆ. ಹಣದ ಮುಖಾಂತರ ಈ ಉಪಕಾರವನ್ನು ತೀರಿಸಲಾಗದು ಎಂದು ತಿಳಿಸಿದ ಅವರು, ತಮ್ಮ ಪಾಲಿಗೆ ಅತ್ಯಮೂಲ್ಯವಾದ ತಂದೆಯನ್ನು ಸುರಕ್ಷಿತವಾಗಿ ಕರೆತಂದುಕೊಟ್ಟ ಪ್ರತಿಯೊಬ್ಬ ಪೊಲೀಸ್ ಸಿಬ್ಬಂದಿಗೂ, ವಾಹನ ಚಾಲನೆ ಮಾಡಿ ಸಮಯಕ್ಕೆ ಸರಿಯಾಗಿ ತಲುಪಿಸಿದ ವಾಹನ ಚಾಲಕರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ..

Malenadu Today Shivamogga
112 emergency response staff help save an elderly man

ಹವಾಮಾನ ಮುನ್ಸೂಚನೆ! ಶಿವಮೊಗ್ಗ : ಇನ್ನೈದು ದಿನ ಗುಡುಗು, ಗಾಳಿ, ಮಳೆ!

ಮಲೆನಾಡು ಟುಡೆ ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ದ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಸುದ್ದಿಗಳಿಂದ ಸ್ತಳೀಯ ವಿಶೇಷ ವಿಡಿಯೋ ಸುದ್ದಿಗಳನ್ನು ನೀವು ನೋಡಬಹುದು…ಇಲ್ಲಿದೆ ಅವುಗಳ ಲಿಂಕ್  Facebook whatsapp  , whatsapp chanel  instagram,  youtube,  telegram , ನಮ್ಮದು ಅಧಿಕೃತವಾದ ಮತ್ತು ಉತ್ಪ್ರೇಕ್ಷೆಗಳಲ್ಲಿದ ನೈಜ ಸುದ್ದಿಯ ಸಂಸ್ಥೆ. ನಮ್ಮ ಬಗ್ಗೆ  google business, ನಲ್ಲಿ ಮಾಹಿತಿ ಪಡೆಯಬಹುದು. ಅಲ್ಲದೆ   malenadu today epaper malenadutoday web ನಲ್ಲಿ ಆಯಾ ದಿನದ ಈ ಪೇಪರ್​ಗಳನ್ನು ಕ್ಲಿಕ್ ಮಾಡಿ ಓದಬಹುದು.

How did the prompt action of the 112 emergency response staff help save an elderly man who was heading to Agumbe to end his life on March 16, 2026?