ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

ರಿಪ್ಪನ್‌ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಜಂಬಳ್ಳಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿರುವ ಘಟನೆ ನಡೆದಿದೆ. ಜೈನರ ದಕ್ಷಿಣದ ಕಾಶಿ ಹೊಂಬುಜ ಮಠಕ್ಕೆ ತೆರಳುತಿದ್ದ ಭಕ್ತರ ಕಾರು ಹೆದ್ದಾರಿಪುರ ಸಮೀಪದ ಜಂಬಳ್ಳಿ ತಿರುವಿನಲ್ಲಿ ಪಲ್ಟಿಯಾಗಿದ್ದು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಮಹಾರಾಷ್ಟ್ರ ರಾಜ್ಯದ ಪೂನ ನಗರದಿಂದ ಹೊಂಬುಜಾ ಮಠಕ್ಕೆ ಆಗಮಿಸುತಿದ್ದಾಗ ಮುಂಜಾನೆ ಜಂಬಳ್ಳಿ ತಿರುವಿನಲ್ಲಿ ಈ ಘಟನೆ ನಡೆದಿದೆ. ಕಾರಿನಲ್ಲಿ ಒಂದೇ ಕುಟುಂಬದ 4 ಜನರು ಪ್ರಯಾಣಿಸುತಿದ್ದರು.ಅಪಘಾತದ ವೇಳೆ ಕಾರಿನಲ್ಲಿದ್ದ ಏರ್ ಬ್ಯಾಗ್ ಕಾರ್ಯನಿರ್ವಹಿಸಿದ್ದರಿಂದ ಯಾರಿಗೂ ಗಂಭೀರ ಗಾಯಗಳಾಗಿರುವುದಿಲ್ಲ. ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ರಿಪ್ಪನ್ ಪೇಟೆ ಹೆದ್ದಾರಿ ಪುರದಲ್ಲಿ ಕಾರು ಪಲ್ಟಿ ನಂತರ ನಡೆದಿದ್ದೇನು?

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor