ಭದ್ರಾ ಡ್ಯಾಮ್‌ ಬಲದಂಡೆ ಗೇಟ್‌ ಬಂದ್‌ ಮಾಡುವಾಗ ಕ್ರೇನ್‌ ಕೇಬಲ್‌ ಕಟ್‌ | 2 ದಿನ ಹೆಚ್ಚುವರಿ ನೀರು

This Article Written by / 13 / ಡಿಸೆಂಬರ್ 2, 2024

SHIVAMOGGA | MALENADUTODAY NEWS | ಮಲೆನಾಡು ಟುಡೆ Dec 2, 2024

ಬಲದಂಡೆ ಕಾಲುವೆಗೆ ಗೇಟ್‌ ಅಳವಡಿಸುವ ವೇಳೆ ಕ್ರೇನ್‌ನ ಕೇಬಲ್‌ ಕಿತ್ತು ಹೋದ ಘಟನೆಯೊಂದು ಭದ್ರಾ ಡ್ಯಾಂನಲ್ಲಿ ನಡೆದಿದೆ. ಇದರಿಂದಾಗಿ ಎರಡು ದಿನಗಳ ಕಾಲ ಬಲದಂಡೆ ನೀರು ಹೆಚ್ಚುವರಿಯಾಗಿದೆ ಹರಿದಿದೆ. ಘಟನೆ ಬೆನ್ನಲ್ಲೆ ಹೊಸ ಕ್ರೇನ್‌ ತರಿಸಿದ ಸಿಬ್ಬಂದಿ ಗೇಟ್‌ ಇಳಿಸಿ ಬಲದಂಡೆಗೆ ಹರಿಯುತ್ತಿದ್ದ ನೀರನ್ನ ತಡೆದಿದ್ದಾರೆ. 

ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರ ನವೆಂಬರ್‌ 26 ಕ್ಕೆ ಬಲದಂಡೆ ಕಾಲುವೆಗಳಿಗೆ ನೀರು ಹರಿಸುವುದನ್ನ ಬಂದ್‌ ಮಾಡಲಾಗುತ್ತದೆ ಎಂದು ತಿಳಿಸಿತ್ತು. ಆ ಬಳಿಕ ನವೆಂಬರ್‌ 29 ರವರೆಗೂ ನೀರು ಹರಿಸಲು ನಿರ್ಧರಿಸಿತ್ತು. ನಂತರ ಗೇಟ್‌ ಬಂದ್‌ ಮಾಡುವ ಪ್ರಕ್ರಿಯೆ ಆರಂಭಿಸಿದ ಸಿಬ್ಬಂಧಿ ಕ್ರೇನ್‌ ಬಳಸಿಕೊಂಡು ಗೇಟ್‌ ಇಳಿಸಲು ಮುಂದಾಗಿದ್ದರು. ಈ ವೇಳೆ ಕ್ರೇನ್‌ನ ಕೇಬಲ್‌ ಕಟ್‌ ಆಗಿತ್ತು.  ಬಳಿಕ ಹೊರಗಿನಿಂದ ಹೊಸ ಕ್ರೇನ್‌ ತರಿಸಿಕೊಂಡು ಗೇಟ್‌ ಇಳಿಸಲಾಗಿದೆ. ಇದೀಗ ಗೇಟ್‌ ಬಂದ್‌ ಆಗಿದ್ದು ನೀರಿನ ಹರಿವು ನಿಂತಿದೆ.

SUMMARY |The cable of the crane in Bhadra dam broke while installing a gate to the right bank canal

KEY WORDS  | cable of the crane in Bhadra dam broke , right bank canal

ಮುಂದಿನ ಸುದ್ದಿ ಒದಿ

Leave a Comment