ಭದ್ರಾವತಿ ತಂಗಿ ಗಂಡನ ಕೊಲೆ ಕೇಸ್‌ | ಎಸ್‌ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು? | ನಡೆದಿದ್ದೇನು?

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ |‌ Dec 18, 2024

ಶಿವಮೊಗ್ಗ | ಇತ್ತೀಚೆಗೆ ಕೌಟುಂಬಿಕ ಕಲಹದ ಹಿನ್ನಲೆ ಕೊಲೆ ಪ್ರಕರಣಗಳು ಜಾಸ್ತಿಯಾಗುತ್ತಿದೆ. ಗಂಡ ಹೆಂಡತಿ ಅಕ್ಕ ತಮ್ಮ ಅಣ್ಣ ತಂಗಿ ಹೀಗೆ ಸಂಬಂಧಿಕರೇ ತಮ್ಮ ತಮ್ಮ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿಕೊಂಡು ಕೊಲೆ ಕೃತ್ಯಕ್ಕೆ ಮುಂದಾಗುತ್ತಿದ್ದಾರೆ. ಅದೇ ರೀತಿಯ ಘಟನೆಯೊಂದು ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕುನಲ್ಲಿ ನಡೆದಿತ್ತು. ಅದರ ಹಿನ್ನೆಲೆಯು ಇದೀಗ ಹೊರಬಿದ್ದಿದೆ. ಈ ಸಂಬಂಧ ಎಸ್‌ಪಿ ಮಿಥುನ್‌ ಕುಮಾರ್‌ ಕೂಡ ಮಾಹಿತಿ ನೀಡಿದ್ದಾರೆ.

 ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಹೊಳೆಹೊನ್ನೂರು ಮಲ್ಲಾಪುರ  ಗ್ರಾಮದ ನಿವಾಸಿ ಪರಶುರಾಮನನ್ನ ಭದ್ರಾವತಿ ತಾಲೂಕು ಗೊಂದಿ ಗ್ರಾಮದ ನಿವಾಸಿ  ಮಹಾಂತೇಶ್ ಎಂಬಾತ ಕೊಲೆ ಮಾಡಿದ್ದ.

ಏನಿದು ಘಟನೆ 

ಮಹಾಂತೇಶ್ ತನ್ನ ಸಹೋದರಿಯನ್ನು ಪರಶುರಾಮ್‌ ಎಂಬಾತನಿಗೆ ಕೊಟ್ಟು ಮದುವೆಮಾಡಿದ್ದ. ಈ ನಡುವೆ ಪರಶುರಾಮ್‌ ಮದ್ಯ ಕುಡಿದು ಬಂದು ಮಹಾಂತೇಶನ ಜೋಡಿ ಜಗಳವಾಡುತ್ತಿದ್ದನಂತೆ. ಇದೇ ಕಾರಣಕ್ಕೆ ಪರಶುರಾಮ ಮೇಲೆ  ಮಹಾಂತೇಶ್ ಕೋಪಗೊಂಡಿದ್ದ. ಅಲ್ಲದೆ ಸುಪಾರಿ ನೀಡಿ ಪರುಶುರಾಮನನ್ನ ಕೊಲೆ ಮಾಡಿಸಿದ್ದಾನೆ. 

ಮದ್ಯ ಕುಡಿಸಿ ಟವಲ್‌ನಿಂದ ಕುತ್ತಿಗೆ ಬಿಗಿದು ಹತ್ಯೆ

ಮಹಾಂತೇಶ್ ಕೊಲೆ ಮಾಡಲು ತನ್ನ ಸ್ನೇಹಿತನಾದ ಸುದೀಪ್ ಹಾಗೂ ಅರುಣ್‌ ಎಂಬುವವನಿಗೆ ಸುಪಾರಿ ಕೊಟ್ಟಿದ್ದ. ಹಾಗೆಯೇ ಕೊಲೆ ಮಾಡಿದರೆ ಇಂತಿಷ್ಟು ಹಣ ಕೊಡುತ್ತೇನೆ ಎಂದು ಹೇಳಿದ್ದನಂತೆ. ಹಣದ ಅವಶ್ಯಕತೆ ಹೊಂದಿದ್ದ ಸುದೀಪ್ ಹಾಗೂ ಅರುಣ್‌ ಪರುಶುರಾಮನನ್ನ ಕೊಲೆ ಮಾಡಿದ್ದಾರೆ. ಈ ಮೂವರು ಪರುಶುರಾಮನನ್ನ ಕುಡಿಯಲು ಕರೆಸಿಕೊಂಡು ಆ ಬಳಿಕ ಕುತ್ತಿಗೆಗೆ ಟವಲ್ ನಿಂದ ಬಿಗಿದು ಕೊಲೆ ಮಾಡಿದ್ದರು. ಬಳಿಕ ಶವ ಅಲ್ಲಿಯೇ ಎಸೆದು ಸ್ಥಳದಿಂದ ಪರಾರಿಯಾಗಿದ್ದರು 

ಕೊಲೆ ಸುಳಿವು ಸಿಕ್ಕಿದ್ದು ಹೇಗೆ

ಮೂಲಗಳ ಪ್ರಕಾರ, ಪರಶುರಾಮ್‌ ಹಾಗೂ ಮಹಾಂತೇಶ್‌ ನಡುವೆ ಹಣದ ವಿಚಾರವಾಗಿ ವ್ಯಾಜ್ಯ ನಡೆದಿದೆ ಎನ್ನಲಾಗಿದೆ. ಅಲ್ಲದೆ ಮಹಾಂತೇಶ್‌ ತನ್ನಿಬ್ಬರು ಸ್ನೇಹಿತರಿಗೆ ಸುಪಾರಿ ಡೀಲ್‌ನಂತೆ ನಡೆದುಕೊಂಡಿಲ್ಲ ಎನ್ನಲಾಗುತ್ತದೆ. ಇದೇ ಕಾರಣಕ್ಕೆ ಕೊಲೆಕೃತ್ಯ ಬಹಿರಂಗವಾಗಿದೆ ಎನ್ನುವ ಮಾಹಿತಿಯು ಇದೆ. 

ಎಸ್‌ ಪಿ ಮಿಥುನ್‌ ಕುಮಾರ್‌ ಹೇಳಿದ್ದೇನು

ಪರಶುರಾಮ್‌ರರನ್ನ ಮಹಾಂತೇಶ್‌ ಕೊಲೆಮಾಡಿಸಿದ್ದಾನೆ. ಈ ವಿಚಾರವಾಗಿ ಕೊಲೆ ಮಾಡಿರುವ ಹಾಗೂ ಮಹಾಂತೇಶ್‌ನ ಸ್ನೇಹಿತರಾದ ಅರುಣ್‌ ಹಾಗೂ ಸುದೀಪ್‌ನನ್ನು ಬಂಧಿಸಿ ವಿಚಾರಣೆ ನಡೆಸಿದ್ದೇವೆ. ವಿಚಾರಣೆ ವೇಳೆ ನಮಗೆ ಸಿಕ್ಕ ಮಾಹಿತಿ ಎಂದರೆ ಪರಶುರಾಮ್‌ ಮಹಾಂತೇಶ್‌ನ ತಂಗಿಯನ್ನು ಮದುವೆಯಾಗಿದ್ದ, ಕೆಲವು ದಿನಗಳ ಬಳಿಕ ಪರಶುರಾಮ್‌ ಮಹಾಂತೇಶ್‌ನ ಮನೆಗೆ ಕುಡಿದು ಬಂದು ಜಗಳ ಮಾಡುತ್ತಿದ್ದ,ಹಾಗೆಯೇ ಮಹಾಂತೇಶ್‌ನ ತಾಯಿಗೆ ಅವಾಚ್ಯ ಶಬ್ದದಿಂದ ನಿಂಧಿಸುತ್ತಿದ್ದ. ಇದರಿಂದಾಗಿ ಮಹಾಂತೇಶ್‌ ಕೋಪಗೊಂಡು ತನ್ನ ಸ್ನೇಹಿತರಾದ ಸುದೀಪ್‌ ಹಾಗೂ ಅರುಣ್‌ ಗೆ ಕೊಲೆ ಮಾಡಲು ಹೇಳಿದ್ದ. ಸುದೀಪ್‌ಗೂ ಸಹ ಹಣದ ಅವಶ್ಯಕತೆ ಇದ್ದಿದ್ದರಿಂದ ಇದನ್ನು ಒಪ್ಪಿಕೊಂಡು ಕೊಲೆಮಾಡಿದ್ದಾನೆ ಎಂದರು. 


SUMMARY | He gave his sister’s husband a supari and killed him. The incident took place recently under bhadravathi paper town police station limits. 

KEYWORDS | bhadravathi murder,  police station, crime news,

 

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor