ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

ಹಂಚಿಕೊಳ್ಳಿ
WhatsApp Facebook X Telegram

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 19, 2025 ‌‌ 

ಸಿನಿಮಾಕ್ಕೂ ಯಕ್ಷಗಾನಕ್ಕೂ ಸಾಕಷ್ಟು ವ್ಯತ್ಯಾಸಗಳಿವೆ. ರಂಗಭೂಮಿಯಲ್ಲಿ ಅಭಿನಯಿಸಿದವರಿಗೂ ಯಕ್ಷಗಾನ ಎನ್ನುವ ಕಲೆಯನ್ನು ಕರಗತ ಮಾಡಿಕೊಳ್ಳುವುದು ಕಷ್ಟ. ಹೀಗಿರುವಾಗ ಕನ್ನಡದ ಹೆಮ್ಮೆಯ ನಟಿ ಉಮಾಶ್ರೀಯವರು ಯಕ್ಷಗಾನವೊಂದರಲ್ಲಿ ಹೆಜ್ಜೆಹಾಕಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. 

ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

ಯಕ್ಷಗಾನದಲ್ಲಿ ಮೊಟ್ಟ ಮೊದಲ ಬಾರಿಗೆ ಹೆಜ್ಜೆ ಹಾಕಿದ ನಟಿ ಉಮಾಶ್ರೀಯವರು ಹೊನ್ನಾವರದಲ್ಲಿ ಶುಕ್ರವಾರ ರಾತ್ರಿ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗದಲ್ಲಿ ಮಂಥರೆಯಾಗಿ ಅಭಿನಯಿಸಿದರು. 

ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

ಸುಮಾರು ಒಂದು ಗಂಟೆ ಕಾಲ ರಂಗಸ್ಥಳದಲ್ಲಿ ವೇಷ ನಿರ್ವಹಿಸಿದರು. ರಾಘವೇಂದ್ರ ಜನ್ಸಾಲೆ ಅವರ ನಾಳೆ ರಾಮ ಚಂದ್ರಗೆ ಅಭಿಷೇಕ ಹಾಡಿಗೆ ಮರೆಯಲ್ಲಿ ನಿಂತು ಮಾತುಕತೆಯನ್ನು ಕೇಳಿಸಿಕೊಳ್ಳುವ ಅಭಿನಯವನ್ನು ಮಾಡಿದ್ದು ವಿಶೇಷವಾಗಿತ್ತು. 

 ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

ಸುಬ್ರಮಣ್ಯ ಚಿಟ್ಟಾಣಿಯವರು ಬಂದು ಉಮಾ‍ಶ್ರಿಯವರನ್ನು ಯಕ್ಷಗಾನ ಮಾಡುವಂತೆ ಕೋರಿಕೊಂಡಿದ್ದರಂತೆ. ಆದರೆ  ಕಷ್ಟ ಆಗುತ್ತದೆ ಎಂದು ಉಮಾಶ್ರೀಯವರು ಮಾಡುವುದಿಲ್ಲ ಎಂದಿದ್ದರಂತೆ. ಆನಂತರ ರಾಮಚಂದ್ರ ಚಿಟ್ಟಾಣಿಯವರು  ತಮ್ಮ ಬಳಿ ಮಂತರೆಯ ಪಾತ್ರ ಮಾಡಿಸಬೇಕು ಎಂದು ಹೇಳಿದ್ದರು ಎಂದು ಸುಬ್ರಮಣ್ಯ ಚಿಟ್ಟಾಣಿಯವರು ತಿಳಿಸಿದ ಬಳಿಕ, ಅವರ ಕಾರಣಕ್ಕೆ ಯಕ್ಷಗಾನದಲ್ಲಿ ಹೆಜ್ಜೆ ಹಾಕಲು ಉಮಾಶ್ರಿಯವರು ಒಪ್ಪಿದರು ಎನ್ನಲಾಗಿದೆ.  

ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

SUMMARY | Kannada’s proud actress Umashree has made a name for herself by acting in a Yakshagana.

ಪೆರ್ಡೂರು ಮೇಳದಲ್ಲಿ ಮಂಥರೆಯಾಗಿ ಹೆಜ್ಜೆಹಾಕಿದ ಉಮಾಶ್ರಿ | ಯಕ್ಷಗಾನಕ್ಕೂ ಸೈ ಎಂದಿದ್ದರ ಹಿಂದಿದೆ ಚಿಟ್ಟಾಣಿ ಕನಸು

KEY WORDS |Kannada’s proud actress Umashree has made a name for herself by acting in a Yakshagana. 

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor