ದ್ವಾರಕೆಗೆ  140 ಕಿ.ಮಿ ಪಾದಯಾತ್ರೆ ನಡೆಸುತ್ತಿರುವ ಅನಂತ್ ಅಂಬಾನಿ | ಕಾರಣವೇನು

Published: 01 ಏಪ್ರಿಲ್ 2025, 7:00 ಅಪರಾಹ್ನ • 1 min read

▶️
ಸುದ್ದಿ ಆಲಿಸಿ




✨ AI ಓವರ್‌ವ್ಯೂ (ಮುಖ್ಯಾಂಶ)

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 1, 2025 ಜಗತ್ತಿನ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸಹ ಒಬ್ಬರು. ಅವರು ಮನಸ್ಸು ಮಾಡಿದರೆ ಅಂದುಕೊಂಡ ಪ್ರದೇಶಕ್ಕೆ ತಮಗೆ ಸೂಕ್ತವೆನಿಸಿದ ಕಾರಿನಲ್ಲಿ ಯಾವುದೇ ತೊಂದರೆ ಇಲ್ಲದೆ ತಲುಪಬಹುದು. ಆದರೆ ಈಗ ಅವರ ಪುತ್ರ ಅನಂತ್ ಅಂಬಾನಿ ಜಾಮ್ ನಗರದಿಂದ…

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Apr 1, 2025

ಜಗತ್ತಿನ ಅತಿ ಶ್ರೀಮಂತ ಉದ್ಯಮಿಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಸಹ ಒಬ್ಬರು. ಅವರು ಮನಸ್ಸು ಮಾಡಿದರೆ ಅಂದುಕೊಂಡ ಪ್ರದೇಶಕ್ಕೆ ತಮಗೆ ಸೂಕ್ತವೆನಿಸಿದ ಕಾರಿನಲ್ಲಿ ಯಾವುದೇ ತೊಂದರೆ ಇಲ್ಲದೆ ತಲುಪಬಹುದು. ಆದರೆ ಈಗ ಅವರ ಪುತ್ರ ಅನಂತ್ ಅಂಬಾನಿ ಜಾಮ್ ನಗರದಿಂದ ದ್ವಾರಕೆಗೆ ಪಾದಯಾತ್ರೆಯನ್ನು ಆರಂಭಿಸಿದ್ದಾರೆ.

ಹೌದು ಅನಂತ್ ಅಂಬಾನಿ ಏಪ್ರಿಲ್ 10 ರಂದು ತಮ್ಮ ಹುಟ್ಟು ಹಬ್ಬದ ಸಲುವಾಗಿ  ಜಾಮ್ ನಗರದಿಂದ 140 ಕಿಲೋಮೀಟರ್ ದೂರದಲ್ಲಿರುವ ಗುಜರಾತ್ ನ  ದ್ವಾರಕೆಗೆ ಕಾಲ್ನಡಿಗೆಯಲ್ಲಿ ಪ್ರಯಾಣ ಬೆಳೆಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ಪ್ರಯಾಣ ಬೆಳೆಸುತ್ತಿರುವ ಇವರು ಬೆಳಗ್ಗಿನ ಸಮಯದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ ಎಂಬ ಕಾರಣದಿಂದ ರಾತ್ರಿ ಸಮಯದಲ್ಲಿ ಪ್ರಯಾಣ ಬೆಳೆಸಿದ್ದಾರೆ. ಒಂದು ರಾತ್ರಿ ಸರಿ ಸುಮಾರು 20 ಕಿಲೋ ಮೀಟರ್ ನಡೆಯುತ್ತಾರೆ ಎನ್ನಲಾಗಿದೆ.

ಅನಂತ್ ಅಂಬಾನಿಯವರ ಕೆಲವು ವೀಡಿಯೊಗಳು ಸಾಮಾಜಿಕ  ವೈರಲ್ ಆಗುತ್ತಿವೆ. ಇದರಲ್ಲಿ ಅನಂತ್ ತನ್ನ ಭದ್ರತಾ ಸಿಬ್ಬಂದಿಯೊಂದಿಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ. ಅನಂತ್ ಅಂಬಾನಿ ಸುಮಾರು 140 ಕಿ.ಮೀ ನಡೆದು ದ್ವಾರಕೆ ತಲುಪಿ ಅಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಪ್ರತಿದಿನ 15 ರಿಂದ 20 ಕಿ.ಮೀ ಪ್ರಯಾಣಿಸಿದರೆ ಈ ಪ್ರಯಾಣವು ಸುಮಾರು 12 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.

SUMMARY | Anant Ambani has started his padyatra from Jamnagar to Dwarka.

KEYWORDS | Anant Ambani, padyatra,  Jamnagar,  Dwarka,

END OF STORY

131

Senior Journalist | Malenadu Today
✓ Verified Journalist