SHIVAMOGGA | MALENADUTODAY NEWS | ಮಲೆನಾಡು ಟುಡೆ | Jan 27, 2025
ಭದ್ರಾವತಿ | ಬಾರಂದೂರು ಸಮೀಪ ಭದ್ರಾ ನದಿ ಸೇತುವೆ ಬಳಿ ಚಿರತೆಯ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಲೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಮೃತದೇಹ ವಶಕ್ಕೆ ಪಡೆದಿದ್ದಾರೆ. ಸ್ಥಳೀಯರು ಚಿರತೆ ಮೃತದೇಹ ಕಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ವಿಷಯ ತಿಳಿಯುತ್ತಲೆ ದೊಡ್ಡ ಸಂಖ್ಯೆಯ ಜನರು ಸೇತುವೆ ಬಳಿ ಜಮಾಯಿಸಿದ್ದರು.
ಚಿರತೆಯನ್ನು ಸಾಯಿಸಿ ತಂದು ಹಾಕಿರುವ ಶಂಕೆ

ಚಿರತೆಯನ್ನು ಸಾಯಿಸಿ ಇಲ್ಲಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.ಈ ಭಾಗದಲ್ಲಿ ಚಿರತೆ ಓಡಾಟವಿಲ್ಲ. ಆದರೆ ಬೇರಡೆ ಇದನ್ನು ಕೊಂದು ಇಲ್ಲಿಗೆ ತಂದು ಹಾಕಿರುವ ಸಾಧ್ಯತೆ ಇದೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಭದ್ರಾವತಿ ವಿಭಾಗದ ಡಿಸಿಎಫ್ ಆಶೀಶ್ ರೆಡ್ಡಿ, ತಿಳಿಸಿದರು.
SUMMARY | The body of the leopard was found near Bhadra river bridge near Barandur. Forest department officials rushed to the spot and took the body into custody.
KEYWORDS | leopard, Bhadra river, Barandur, Forest department,