Shivamogga Akka Pade ಶಿವಮೊಗ್ಗ: ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಾ ಗಲಾಟೆ ಎಬ್ಬಿಸುತ್ತಿದ್ದ ವ್ಯಕ್ತಿಗಳನ್ನು ಅಕ್ಕ ಪಡೆ ಸಿಬ್ಬಂದಿಗಳು ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿದ್ದಾರೆ. ಶಿವಮೊಗ್ಗ: ಆನ್‌ಲೈನ್‌ನಲ್ಲಿ ಘರ್ ಸೋಪ್ ಬುಕ್ ಮಾಡಿದ ವ್ಯಕ್ತಿ: ಶಾಲೆಗೆ ಮಗನ ಫೀಸ್ ಕಟ್ಟಲು ಹೋದಾಗ ಕಾದಿತ್ತು ಶಾಕ್! ಶಿವಮೊಗ್ಗ ನಗರದ ಆದ…
Shivamogga Akka Pade ಶಿವಮೊಗ್ಗ: ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಾ ಗಲಾಟೆ ಎಬ್ಬಿಸುತ್ತಿದ್ದ ವ್ಯಕ್ತಿಗಳನ್ನು ಅಕ್ಕ ಪಡೆ ಸಿಬ್ಬಂದಿಗಳು ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಿದ್ದಾರೆ.
ಶಿವಮೊಗ್ಗ: ಆನ್‌ಲೈನ್‌ನಲ್ಲಿ ಘರ್ ಸೋಪ್ ಬುಕ್ ಮಾಡಿದ ವ್ಯಕ್ತಿ: ಶಾಲೆಗೆ ಮಗನ ಫೀಸ್ ಕಟ್ಟಲು ಹೋದಾಗ ಕಾದಿತ್ತು ಶಾಕ್!
ಶಿವಮೊಗ್ಗ ನಗರದ ಆದ ಎಂ.ಆರ್.ಎಸ್ ಸರ್ಕಲ್ ಸಮೀಪದ ಬಸ್ ಸ್ಟಾಂಡ್ ಬಳಿ ಕೆಲವರು ಸಾರ್ವಜನಿಕರಿಗೆ ತೊಂದರೆ ನೀಡುತ್ತಾ ಗಲಾಟೆ ಮಾಡುತ್ತಿದ್ದಾರೆಂಬ ಮಾಹಿತಿ ಅಕ್ಕ ಪಡೆಗೆ ಲಭಿಸಿತ್ತು. ಮಾಹಿತಿ ತಲುಪಿದ ತಕ್ಷಣವೇ ಎಎಸ್‌ಐ ಅಮೃತಾ ಬಾಯಿ ಹಾಗೂ ಮಹಿಳಾ ಹೆಡ್ ಕಾನ್‌ಸ್ಟೇಬಲ್ ನಿರ್ಮಲಾ ಅವರು ಸ್ಥಳಕ್ಕೆ ಧಾವಿಸಿದ್ದಾರೆ.
ನಂತರ ಗಲಾಟೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತಕ್ಷಣವೇ ವಶಕ್ಕೆ ಪಡೆದು ಕೋಟೆ ಪೊಲೀಸ್ ಠಾಣೆಗೆ ಕರೆತಂದರು. ಹಾಗೆಯೇ ಅವರ ವಿರುದ್ಧ ಲಘು ಪ್ರಕರಣ ದಾಖಲಿಸಿಕೊಂಡು, ಮುಂದಿನ ದಿನಗಳಲ್ಲಿ ಇಂತಹ ಕೃತ್ಯವೆಸಗದಂತೆ ಸೂಕ್ತ ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ.
