SHIVAMOGGA | MALENADUTODAY NEWS | ಮಲೆನಾಡು ಟುಡೆ | Nov 23, 2024
ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಈಗಾಗಲೇ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನೊಂದಿಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಇದರ ನಡುವೆ ಈಗ ಕಿಚ್ಚ ಮತ್ತೊಬ್ಬ ಬಾಲಿವುಡ್ ಸ್ಟಾರ್ ಅಮೀರ್ ಖಾನ್ ರೊಂದಿಗೆ ನಟಿಸ್ತಿದ್ದಾರಾ ಅಥವಾ ಆಮೀರ್ ಖಾನ್ ಅವರನ್ನೇ ಕನ್ನಡಕ್ಕೆ ಕರೆಸಿ ಕೊಳ್ತಾರ ಎಂಬ ಅನುಮಾನ ಎಲ್ಲರಲ್ಲಿ ಮೂಡ್ತಾ ಇದೆ.
ಹೌದು ಇದಕ್ಕೆ ಕಾರಣ ಆಗಿರೋದು ಕಿಚ್ಚ ಸುದೀಪ್ ಹಾಗೂ ಬಾಲಿವುಡ್ ಮಿಸ್ಟರ್ ಫರ್ಫೆಕ್ಟ್ ಅಮೀರ್ ಖಾನ್ ಜೊತೆಗಿರುವ ಫೋಟೋಗಳು . ಆ ಫೋಟೋಗಳು ಈಗ ಎಲ್ಲೆಡೆ ವೈರಲ್ ಆಗ್ತಾ ಇದೆ. ಅಷ್ಟೇ ಅಲ್ಲದೆ ಕಿಚ್ಚ ಸುದೀಪ್ ರವರ ಅಭಿಮಾನಿಗಳ ಗ್ರೂಪ್ ಒಂದರಲ್ಲಿ cooking something big ಎಂದು ಈ ಫೋಟೋ ವನ್ನು ಶೇರ್ ಮಾಡಿದ್ದು. ಈ ಅನುಮಾನ ಮೂಡಲು ಕಾರಣವಾಗಿದೆ.

ಕಿಚ್ವಾ ಸುದೀಪ್ ಸದ್ಯ ಮ್ಯಾಕ್ಸ್ ಹಾಗೂ ಬಿಲ್ಲ ರಂಗಾ ಬಾಷಾ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇತ್ತ ಆಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ ಸಿನಿಮಾದ ನಂತರ ಅವರ ಯಾವುದೇ ಚಿತ್ರದಲ್ಲಿ ನಟಿಸಿಲ್ಲ. ರಜನಿಕಾಂತ್ ರವರ ಕೂಲಿ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದರೂ ಆಮೀರ್ ಅದರ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಹೇಳಿಲ್ಲ.
ಸದ್ಯ ಮೂರು ಜನ ಜೊತೆಗಿರುವ ಫೋಟೊ ಈ ಸಮಯದಲ್ಲಿ ರಿಲೀಸ್ ಆಗಿದ್ದು. ಮಧ್ಯದಲ್ಲಿ ಒಬ್ಬರು ವ್ಯಕ್ತಿ ಇದ್ದು, ಆ ವ್ಯಕ್ತಿ ಯಾರೆಂದು ತಿಳಿದು ಬಂದಿಲ್ಲ. ಈ ಫೋಟೋದಲ್ಲಿರುವಂತೆ ಕಿಚ್ಚ ಸುದೀಪ್ ಹಾಗೂ ಅಮೀರ್ ಖಾನ್ ಏನಾದ್ರೂ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಅಭಿನಯಿಸಿದರೆ. ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಅದ್ಭುತವಾಗಿ ಕಲೆಕ್ಷನ್ ಮಾಡಬಹುದು.
SUMMARY| Everyone is wondering if Kichcha is acting with another Bollywood star Aamir Khan or will he bring Aamir Khan to Kannada.
KEYWORDS| Kichcha sudeep, Bollywood, Aamir Khan, sandalwood, kannada,