ಯೋಗರಾಜ್ ಭಟ್ ಮತ್ತು ಶರಣ್ ಕಾಂಬಿನೇಷನ್‌ನಿಂದ ಹೊಸ ಸಾಂಗ್ ರಿಲೀಸ್, ಈ ಹಾಡು ಡಿಗ್ನಿಫೈಡ್ ಕುಡುಕರಿಗೆ ಮಾತ್ರ..

ಹಂಚಿಕೊಳ್ಳಿ
WhatsApp Facebook X Telegram
 Yogaraj Bhat and Sharan Team Up for New Year Song
 Yogaraj Bhat and Sharan Team Up for New Year Song

ಪ್ರತಿ ವರ್ಷ ನವಹರ್ಷವನ್ನು ತರೋ ಹೊಸವರ್ಷವನ್ನು ನಾವೆಲ್ಲರೂ ಬಹಳ ಅದ್ದೂರಿಯಾಗಿ ಸ್ವಾಗತಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ಈ ಸ್ವಾಗತವು ಹಲವು ಬದಲಾವಣೆಗಳನ್ನು ಕಂಡಿದೆ.  ಕೆಲವರಿಗೆ ಹೊಸ ವರ್ಷ ಬಂತು ಅಂದರೆ, ಅದ್ಧೂರಿ ಪಾರ್ಟಿ ಮಾಡಬೇಕು, ಕೇಕ್ ಕಟ್ ಮಾಡಬೇಕು, ಸ್ನೇಹಿತರ ಜೊತೆ ಸೇರಿ ಸಂತೋಷವಾಗಿರಬೇಕು. ಇದರ ನಡುವೆ, ಡ್ಯಾನ್ಸ್ ಮಾಡಲು ಮತ್ತು ನಮ್ಮಲ್ಲಿರುವ ನೋವನ್ನು ಮರೆತು ಸಂಭ್ರಮಿಸಲು ಒಂದು ಉತ್ತಮವಾದ ಮದ್ಯದ ಕುರಿತಾದ ಹಾಡು ಇರಬೇಕು. ಇವಿಷ್ಟೂ ಇದ್ದರೆ ಪಾರ್ಟಿಗೆ ಒಂದು ವಿಶೇಷ ಅರ್ಥ ಬರುತ್ತದೆ. ಈಗ ಈ ವಿಷಯವೇಕೆಂದರೆ, ನಮ್ಮ ವಿಕಟಕವಿ ಯೋಗರಾಜ್ ಭಟ್ ಹಾಗೂ ನಟ ಶರಣ್ ಸೇರಿಕೊಂಡು ಹೊಸ ವರ್ಷಕ್ಕೆಂದು ಒಂದು ಹಾಡನ್ನು ಬಿಡುಗಡೆ ಮಾಡಿದ್ದಾರೆ.

 Yogaraj Bhat and Sharan Team Up for New Year Song
Yogaraj Bhat and Sharan Team Up for New Year Song

ಶಿವಮೊಗ್ಗ: ನಾಳೆ ಆರ್.ಎಂ.ಎಲ್. ನಗರದ ಹಲವೆಡೆ ವಿದ್ಯುತ್ ವ್ಯತ್ಯಯ 

ಹೌದು, ಯೋಗರಾಜ್ ಭಟ್ ಬರೆದು ಶರಣ್ ಹಾಡಿರುವ ‘ಅಮಲು’ ಎಂಬ ಹೊಸ ಹಾಡು ಇದೀಗ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಈ ಹಿಂದೆ ಬರೆದ ‘ಹಾಲು ಕುಡಿದ ಮಕ್ಕಳೇ ಬದುಕಲ್ಲ’ (ದನ ಕಾಯೋನು ಚಿತ್ರ) ಮತ್ತು ‘ಕಾಲಿ ಕ್ವಾಟರ್ ಬಾಟ್ಲಿ ಹಂಗೆ ಲೈಫ್.. ನಾವ್ ಮನೆಗೆ ಹೋಗೋದಿಲ್ಲ’ ಹಾಡು ಸೇರಿದಂತೆ ಇನ್ನೂ ಅನೇಕ ಮದ್ಯದ ಹಾಡುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಅದರಲ್ಲಿ ‘ಹಾಲು ಕುಡಿದ ಮಕ್ಲೇ ಬದುಕಲ್ಲ’ ಎಂಬ ಶರಣ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಸಾಂಗ್ ಸಖತ್ ಹಿಟ್ ಆಗಿತ್ತು. ಇಷ್ಟು ಅದ್ಭುತವಾಗಿ ಶರಣ್ ಹಾಡಬಲ್ಲರು ಎಂಬ ವಿಚಾರ ಅನೇಕರಿಗೆ ಗೊತ್ತಾಗಿದ್ದು ಅದೇ ಹಾಡಿನಿಂದ. ಇದೀಗ ‘ಅಮಲು’ ಎಂಬ ಹಾಡಿನ ಮೂಲಕ ಇವರಿಬ್ಬರು ಮತ್ತೆ ಒಂದಾಗಿದ್ದು, ಈ ಹಾಡು ಅಮಲಿನ ರೀತಿಯಲ್ಲಿಯೇ ಒಂದು ಉತ್ತಮ ಅನುಭವ ನೀಡುತ್ತಿದೆ.

 Yogaraj Bhat and Sharan Team Up for New Year Song

ಪಂಚರಂಗಿ ಆಡಿಯೋ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ಇಂದು ಬಿಡುಗಡೆಯಾದ ಈ ಹಾಡು ಉತ್ತಮ ಫೀಲ್ ನೀಡುವುದರಲ್ಲಿ ಸಂದೇಹವಿಲ್ಲ. ಕೆಲವೊಮ್ಮೆ ಹೊಸ ವರ್ಷಕ್ಕೆ ಬಿಡುಗಡೆಯಾಗುವ ಹಾಡುಗಳು ಹೆಚ್ಚು ಕುಣಿಯುವ ಹಾಗೆಯೇ, ಬೀಟ್ಸ್ ಹೆಚ್ಚಿರುವಂತೆ ಇರಬೇಕು ಎನಿಸುವುದು ಸಹಜ. ಆದರೆ, ಈ ಹಾಡು ಅದಕ್ಕೆ ವಿಭಿನ್ನವಾಗಿದೆ. ಇಲ್ಲಿ ಭಟ್ಟರು ಉಪಯೋಗಿಸಿರುವ, “ನನ್ನೊಳಗೆ ಇದ್ದ ಇನ್ನೊಬ್ಬನಿಗೆ ನಾ ತುಂಬಾ ಕುಡಿಸಿದೆ, ನಾನು ಕುಡಿಯದೆ” ಎಂಬಂತಹ ಕೆಲವು ಸಾಲುಗಳು ಭಟ್ಟರ ವಿಶಿಷ್ಟ ಶೈಲಿಯಲ್ಲಿದ್ದು, ವ್ಯಂಗ್ಯ ಮತ್ತು ಹಾಸ್ಯವನ್ನು ಒಳಗೊಂಡಿವೆ. ಕುಡಿದು ನಶೆಯಲ್ಲಿರುವವರಿಗೂ ಸಹ, “ಇದು ನಿಜ ಹೌದಲ್ಲವೇ?” ಎನಿಸುವ ಭಾವ ಮೂಡಿಸುವಂತಿದೆ. ಶರಣ್ ಕೂಡ ಅದೇ ರೀತಿಯ ಭಾವವನ್ನು ತುಂಬಿ ಹಾಡನ್ನು ತುಂಬಾ ಅದ್ಭುತವಾಗಿ ಹಾಡಿದ್ದಾರೆ. ಒಟ್ಟಾರೆಯಾಗಿ, ಈ ಹಾಡು ಕೇಳುತ್ತಾ ಕೇಳುತ್ತಾ ಅಡಿಕ್ಟ್ ಆಗಿಬಿಡುತ್ತೇವೆ ಎಂಬ ಹಾಡುಗಳ ಸಾಲಿಗೆ ಸೇರುತ್ತದೆ. ಭಟ್ಟರೇ ಹೇಳಿದಂತೆ, ಈ ಹಾಡು ಡಿಗ್ನಿಫೈಡ್ ಕುಡುಕರಿಗೆ ಮಾತ್ರ!

ಈ ಹಾಡು ಬಿಡುಗಡೆಯಾದ ನಂತರ,  ‘ಬಾಯಾರಿಕೆ’ ಎಂಬ ಮದ್ಯದ ಹಾಡನ್ನೂ ಸಹ ಘೋಷಿಸಲಾಗಿದೆ. ಈ ಹಾಡನ್ನು ವಾಸುಕಿ ವೈಭವ್ ಹಾಡುತ್ತಿದ್ದು, ಇದು ಸಹ ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ.

Yogaraj Bhat and Sharan Team Up for New Year Song

 Yogaraj Bhat and Sharan Team Up for New Year Song
Yogaraj Bhat and Sharan Team Up for New Year Song

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor