ಶಿವಮೊಗ್ಗ / ನಗರದ ಹೊರವಲಯದ ಗಾಜನೂರು ಸಮೀಪವಿರುವ ತುಂತುರು ರೆಸಾರ್ಟ್‌ನಲ್ಲಿ ಕಾರ್ಯಕ್ರಮವೊಂದ ನಿಮಿತ್ತ ಹಾಕಿದ್ದ ಲೈಟಿಂಗ್ಸ್ನ ಕರೆಂಟ್ ಶಾಕ್ ತಗುಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಮೃತರು ಕೂಲಿ ಕೆಲಸಕ್ಕೆ ಬಂದಿದ್ದ ಅಬ್ಬಲಗೆರೆ ಗ್ರಾಮದ ನಾಗಮ್ಮ (54).

ತುಂತುರು ರೆಸಾರ್ಟ್ ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಅವಗಢ
ಅಬ್ಬಲಗೆರೆಯ ನಿವಾಸಿ ನಾಗರಾಜ್ ಎಂಬುವರ ಪತ್ನಿ ನಾಗಮ್ಮ ಚಂದ್ರು ಎಂಬುವರಿಗೆ ಸೇರಿದ ಎಸ್‌ಪಿಎಸ್ ಕ್ಯಾಟರಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದರು. ಇಂದು ರೆಸಾರ್ಟ್‌ನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮವಿದ್ದ ಕಾರಣ, ಸ್ವಚ್ಛತೆ ಹಾಗೂ ಕ್ಯಾಟರಿಂಗ್ ಕೆಲಸಗಳಿಗಾಗಿ ನಾಗಮ್ಮ ಬಂದಿದ್ದರು..
ಕೆಲಸದ ನಡುವೆ ವೇದಿಕೆಯ ಸಮೀಪವಿದ್ದ ವಿದ್ಯುತ್ ದೀಪದ ಅಲಂಕಾರಕ್ಕಾಗಿ ವಯರ್‌ಗಳಿಂದ ಬೇಲಿಗೂ ಕರೆಂಟ್ ಪ್ರವಹಿಸಿತ್ತು. ಇದು ಗೊತ್ತಿಲ್ಲದೆ ಬೇಲಿಯ ಕಂಬವನ್ನು ನಾಗಮ್ಮ ಅಚಾನಕ್ ಆಗಿ ಸ್ಪರ್ಶಿಸಿದ್ದಾರೆ. ಈ ವೇಳೆ ಕರೆಂಟ್ ಶಾಕ್ ತಗುಲಿದೆ. ತಕ್ಷಣವೇ ಅವರು ಕುಸಿದುಬಿದ್ದಿದ್ದಾರೆ. ಅವರನ್ನ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯ್ತಾದರೂ ಅವರು ಬದುಕುಳಿಯಲಿಲ್ಲ.
ವಿಷಯ ತಿಳಿದ ತಕ್ಷಣ ತುಂಗಾ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿದೆ.
ವಿದ್ಯುತ್ ವತ್ಯಯದ ಬಗೆಗಿನ ಮಾಹಿತಿಗಾಗಿ ಗಮನಿಸಿ power cut shivamogga
ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw
