STATE NEWS

ನಿತ್ಯ ಭವಿಷ್ಯ : ಮೇಷದಿಂದ ಮೀನ ರಾಶಿಯವರೆಗಿನ ರಾಶಿಫಲ! ಗೃಹಗಳ ಅನುಗೃಹ ಮತ್ತು ಪಂಚಾಂಗ

ajjimane ganesh ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

ಬೆಂಗಳೂರು / ಪರಾಭವ ನಾಮ ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸದ ಪಂಚಮಿ ತಿಥಿಯು ಮಧ್ಯಾಹ್ನ 2.04 ರವರೆಗೆ ಇರಲಿದ್ದು, ತದನಂತರ ಷಷ್ಠಿ ಆರಂಭವಾಗಲಿದೆ. ಜ್ಯೇಷ್ಠಾ ನಕ್ಷತ್ರ ರಾತ್ರಿ 3.35 ರವರೆಗೆ ಇದ್ದು, ತದನಂತರ ಮೂಲ ನಕ್ಷತ್ರ ಪ್ರವೇಶವಾಗಲಿದೆ. ಅಮೃತ ಗಳಿಗೆ ಸಂಜೆ 5.49 ರಿಂದ 7.36 ರವರೆಗೆ ರಾಹುಕಾಲಮಧ್ಯಾಹ್ನ 3.00 ರಿಂದ 4.30 ರವರೆಗೆ, ಯಮಗಂಡ ಕಾಲ ಬೆಳಿಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

 ನಿತ್ಯ ಭವಿಷ್ಯ
Complete Daily Horoscope for All Zodiac Signs ನಿತ್ಯ ಭವಿಷ್ಯ

ಪಂಚಾಂಗ ಮತ್ತು ನಿತ್ಯ ಭವಿಷ್ಯ

ಮೇಷ / ಆರ್ಥಿಕವಾಗಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ.ವಾಗ್ವಾದ. ವಿವಿಧ ಸಮಸ್ಯೆ ಎದುರಿಸಬೇಕಾಗಬಹುದು. ಈ ಮೊದಲು ತೆಗೆದುಕೊಂಡಿದ್ದ ಕೆಲವು ನಿರ್ಧಾರಗಳನ್ನು ಬದಲಾಯಿಸುವ ಅನಿವಾರ್ಯತೆ ಎದುರಾಗಲಿದೆ. ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಸಾಮಾನ್ಯ ದಿನ.

ವೃಷಭ / ನೂತನ ಕೆಲಸಗಳಿಗೆ ಚಾಲನೆ. ಪವಿತ್ರ ಪುಣ್ಯಕ್ಷೇತ್ರಗಳ ದರ್ಶನ ಪಡೆಯುವ ಭಾಗ್ಯವಿದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಗಣನೀಯ ಅಭಿವೃದ್ಧಿ ಕಂಡುಬರಲಿದೆ. ಪ್ರಮುಖವಾದ ನಿರ್ಧಾರಗಳನ್ನು ಕೈಗೊಳ್ಳುವಿರಿ. ಶುಭ ಸಮಾರಂಭಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವಿರಿ. ಉದ್ಯೋಗ ಹಾಗೂ ವ್ಯಾಪಾರ ವಹಿವಾಟು ಅಡೆತಡೆಗಳಿಲ್ಲದೆ ಸುಗಮವಾಗಿ ಸಾಗಲಿವೆ.

ಮಿಥುನ / ಗೌರವ ಹಾಗೂ ಪ್ರಭಾವ ಹೆಚ್ಚಾಗಲಿದೆ. ಸಂತೋಷದ ಸುದ್ದಿಗಳನ್ನು ಆಲಿಸುವಿರಿ. ಸ್ಥಿರಾಸ್ತಿಯಿಂದ ಲಾಭ. ಯೋಗ ಒದಗಿಬರಲಿದೆ. ಹೊಸ ವ್ಯಕ್ತಿಗಳ ಪರಿಚಯ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿನ ಕೆಲಸ ಅತ್ಯಂತ ಸರಾಗವಾಗಿ ನಡೆಯಲಿವೆ.

ಕರ್ಕಾಟಕ / ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರ್ಥಿಕ ವೆಚ್ಚ ಜಾಸ್ತಿ. ಅನಾರೋಗ್ಯ. ಉದ್ಯೋಗ ಹಾಗೂ ವ್ಯಾಪಾರ ವಲಯದಲ್ಲಿನ ಬೆಳವಣಿಗೆಗಳು ಸ್ವಲ್ಪ ಮಟ್ಟಿಗೆ ಕುತೂಹಲ ಮೂಡಿಸುವುದು ದೈಹಿಕ ಶ್ರಮ ಹೆಚ್ಚಾಗಲಿದೆ. ಅನಿರೀಕ್ಷಿತವಾಗಿ ದೂರದ ಪ್ರಯಾಣ.

ಸಿಂಹ / ಆರ್ಥಿಕ ಪರಿಸ್ಥಿತಿಯು ನಿರೀಕ್ಷಿತ ಮಟ್ಟದಲ್ಲಿ ಇರದು. ಖರ್ಚು ವೆಚ್ಚಗಳ ಪ್ರಮಾಣ ಅಧಿಕ. ಕೌಟುಂಬಿಕ ವಲಯದಲ್ಲಿ ಸಣ್ಣಪುಟ್ಟ ಕಿರಿಕಿರಿ. ಆರೋಗ್ಯದಲ್ಲಿ ಸಾಧಾರಣ ಮಟ್ಟದ ತೊಂದರೆ ಕಾಣಿಸಿಕೊಳ್ಳಬಹುದು. ಉದ್ಯೋಗ ಹಾಗೂ ವ್ಯಾಪಾರ ವ್ಯವಹಾರಗಳಲ್ಲಿ ಗೊಂದಲಮಯ ವಾತಾವರಣ ನೆಲೆಸಲಿದೆ.

 ನಿತ್ಯ ಭವಿಷ್ಯ
Complete Daily Horoscope for All Zodiac Signs ನಿತ್ಯ ಭವಿಷ್ಯ

ಪಂಚಾಂಗ ಮತ್ತು ನಿತ್ಯ ಭವಿಷ್ಯ

ಕನ್ಯಾ / ಕಠಿಣ ಶ್ರಮಕ್ಕೆ ತಕ್ಕ ಪ್ರತಿಫಲ . ಉತ್ಸಾಹ ಹಾಗೂ ಸಂತೋಷದಿಂದ ಸಮಯ ಕಳೆಯುವಿರಿ. ನೀವು ಮಾಡುತ್ತಿರುವ ಎಲ್ಲ ಪ್ರಯತ್ನಗಳಿಗೆ ಪೂರಕವಾದ ಅನುಕೂಲಗಳು ದೊರೆಯಲಿವೆ. ಉದ್ಯೋಗ ಸ್ಥಳದಲ್ಲಿ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಇದುವರೆಗೆ ಇದ್ದಂತಹ ಮಾನಸಿಕ ಒತ್ತಡಗಳು ದೂರವಾಗಲಿವೆ.

ತುಲಾ / ಕೆಲವೊಂದು ಪ್ರಮುಖ ಕಾರ್ಯ ಮುಂದೂಡುವ ಅನಿವಾರ್ಯತೆ ಇದೆ. ದೈನಂದಿನ ಕೆಲಸಗಳಲ್ಲಿ ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ. ಉದ್ಯೋಗ ಕ್ಷೇತ್ರ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ನಿರೀಕ್ಷಿಸಬಹುದು. ಕೆಲವು ವಿವಾದಗಳು ತಲೆದೋರುವ ಸಾಧ್ಯತೆ ಇದೆ.

ವೃಶ್ಚಿಕ / ಹೊಸ ಉದ್ಯೋಗಕ್ಕಾಗಿ ನಡೆಸುತ್ತಿರುವ ಪ್ರಯತ್ನ ಫಲಪ್ರದವಾಗಲಿವೆ. ವ್ಯಾಪಾರ ಹಾಗೂ ವ್ಯವಹಾರಗಳಲ್ಲಿ ನಿರೀಕ್ಷಿತ ಮಟ್ಟದ ಲಾಭ ದೊರೆಯಲಿದೆ. ಉದ್ಯೋಗದಲ್ಲಿ ಹೆಚ್ಚಿನ ಉತ್ಸಾಹ ಹಾಗೂ ಹುರುಪು ಕಂಡುಬರಲಿದೆ. ನಿರ್ಣಾಯಕವಾದ ತೀರ್ಮಾನಗಳನ್ನು ಕೈಗೊಳ್ಳುವಿರಿ.

ಧನುಸ್ಸು / ಖರ್ಚುಗಳು ಎದುರಾಗಲಿವೆ. ಮನೆಯವರೊಂದಿಗೆ ವಾದ ವಿವಾದ ಉಂಟಾಗಬಹುದು. ಉದ್ಯೋಗ ಹಾಗೂ ವ್ಯಾಪಾರ ವಲಯದಲ್ಲಿ ಕೆಲಸದ ಒತ್ತಡ ಹೆಚ್ಚಾಗಲಿವೆ. ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.

ಮಕರ / ಪ್ರಭಾವಿ ವ್ಯಕ್ತಿಗಳ ನಿಕಟ ಸಂಪರ್ಕ ದೊರೆಯಲಿದೆ. ಆಸ್ತಿ ಸಂಬಂಧಿತ ವಿವಾದ ಸುಖಾಂತ್ಯ ಕಾಣಲಿವೆ. ಶುಭ ಸಮಾಚಾರಗಳನ್ನು ಕೇಳುವಿರಿ. ಗೃಹೋಪಯೋಗಿ ವಸ್ತುಗಳ ಖರೀದಿ ಲಾಭ ತರಲಿದೆ. ಉದ್ಯೋಗ ಹಾಗೂ ವ್ಯಾಪಾರ ಎಂದಿನಂತೆ ಸಾಧಾರಣ ಗತಿಯಲ್ಲಿ ಸಾಗಲಿವೆ.

ಕುಂಭ / ಬಹಳ ಸಂತೋಷದಿಂದ ದಿನ ಕಳೆಯಲಿದ್ದಾರೆ. ವಿವಿಧ ಶುಭ ಸಮಾರಂಭಗಳಿಗೆ ಆಹ್ವಾನ ಬರುವ ನಿರೀಕ್ಷೆ ಇದೆ. ಹಣಕಾಸಿನ ಪರಿಸ್ಥಿತಿಯು ಸುಧಾರಣೆ ಕಾಣಲಿದೆ. ಉದ್ಯೋಗ ಕ್ಷೇತ್ರ ಹಾಗೂ ವ್ಯಾಪಾರ ವಹಿವಾಟುಗಳ ಪ್ರಗತಿಯಲ್ಲಿ ಕೊಂಚ ಮಂದಗತಿ ಗೋಚರಿಸಲಿದೆ.

ಮೀನ / ಹಣಕಾಸಿನ ವಹಿವಾಟುಗಳು ಲಾಭದಾಯಕವಾಗಿರುವುದು. ಅನಿರೀಕ್ಷಿತವಾದ ಘಟನೆಗಳು ಜರುಗುವ ಸಾಧ್ಯತೆ ಇದೆ. ಉದ್ಯೋಗ ಹಾಗೂ ವ್ಯಾಪಾರ ಕ್ಷೇತ್ರಗಳಲ್ಲಿನ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಲಿವೆ. ದೈಹಿಕ ಹಾಗೂ ಮಾನಸಿಕ ಶ್ರಮ ಅಧಿಕವಾಗಲಿದೆ.

ದಿನಭವಿಷ್ಯದ ಇನ್ನಷ್ಟು ಮಾಹಿತಿಗಳು ಇಲ್ಲಿ ಗಮನಿಸಿ : ದಿನಭವಿಷ್ಯ

ನಮ್ಮ ಮಲೆನಾಡು ಟುಡೆಯ ವಿಡಿಯೋಗಳನ್ನು ನೀವಿಲ್ಲಿ ನೋಡಬಹುದು: https://www.youtube.com/shorts/x8I63rpLvyw

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ajjimane ganesh

ಅಜ್ಜಮನೆ ಗಣೇಶ, ಪತ್ರಕರ್ತ, ಸಮಯ, ಟಿವಿ9, ನ್ಯೂಸ್​ ಫಸ್ಟ್​ನಲ್ಲಿ ವೃತ್ತಿ ನಿರ್ವಹಿಸಿರುವ ಅನುಭವವಿದೆ. ಗಳಿಸಿದ ಅನುಭವದ ಅನುಭಾವದ ಜೊತೆಗೆ ಮಲೆನಾಡು ಟುಡೆಯಲ್ಲಿ ಸೀನಿಯರ್​​ ಜರ್ನಲಿಸ್ಟ್​ ಆಗಿ ಕೆಲಸ ನಿರ್ವಹಿಸುತ್ತಿರುವೆ